ಉತ್ತರಕನ್ನಡ ಜಿಲ್ಲೆಯ ತಾಳಮದ್ದಳೆ ಕ್ಷೇತ್ರದಲ್ಲಿ ಅಗಾಧ ಅಧ್ಯಯನ, ಅಸಾಧ್ಯ ನೆನಪಿನ ಶಕ್ತಿ, ಪ್ರಸಂಗಪದ್ಯದ ಚೌಕಟ್ಟಿನಿಂದ ಒಂದಿಷ್ಟು ಹೊರಸಾರದೆ ಪಾತ್ರ ಪೋಷಣೆ ಮಾಡುವ ಶಿಸ್ತುಬದ್ಧ ಅರ್ಥಗಾರಿಕೆ ಶೈಲಿಯಿಂದ ಮಿಂಚಿದವರು ಬಾಳಂತನಪಾಲ ನಾರಾಯಣ ಗಾಂವ್ಕಾರರು.
ಶ್ರುತಿ ಬದ್ಧತೆ, ಗುಣಾಡ್ಯತೆ, ಶುದ್ಧ ಚಾರಿತ್ರದಿಂದ ಸರ್ವಮಾನ್ಯರಾಗಿ ಸ್ಥಾನ ಮಾನ ಸನ್ಮಾನಗಳನ್ನು ಪಡೆದು ಮಿಂಚಿದವರಲ್ಲಿ ಅವರು ಪ್ರಮುಖರು. ತಮ್ಮ 15ನೇ ವಯಸ್ಸಿಗೆ ಯಕ್ಷಗಾನದತ್ತ ಆಕರ್ಷಿತರಾದ ಅವರಿಗೆ ಮನೆಯ ಸಾಂಸ್ಕೃತಿಕ ವಾತಾವರಣದೊಟ್ಟಿಗೆ ಅಜ್ಜನ ಮನೆಯಾದ ಶೆಳೆಮನೆ ಕೂಡ ಕಲೆಗೆ ಉತ್ತೇಜನ ನೀಡಿತು. ಅವರು ಓದಿದ್ದು 4ನೇ ತರಗತಿ ಆದರೆ ತಿಳಿದದ್ದು ವಿಶ್ವವಿದ್ಯಾಲಯದ ಯಾವ ಪದವಿಗೂ ಕಡಿಮೆ ಇಲ್ಲ. ಅವರು ಒಮ್ಮೆ ಒಂದು ಪುಸ್ತಕ ಓದಿದರೆ ಸಾಕು ಅದು ಮಸ್ತಕದಲ್ಲಿ ಅಚ್ಚಾದಂತೆ ಸರಿ. ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ತೊರವೆ ರಾಮಾಯಣ ಕಂಠಸ್ಥ, ಕನ್ನಡ ಕಾವ್ಯಗಳ ಕುರಿತು ವಿಶೇಷ ಅಧ್ಯಯನ, ಯಕ್ಷಗಾನದ ಹೆಚ್ಚಿನ ಎಲ್ಲಾ ಪ್ರಸಂಗಗಳು ಬಾಯಿಪಾಠ. ರಾಮ, ಶೂರ್ಪನಖಿ, ವಾಲಿ, ಕೃಷ್ಣ, ಕೌರವ, ದೇವಯಾನಿ, ರುಕ್ಮಾಂಗ, ಬಲಿ, ಭೀಷ್ಮ ಅವರ ಪಾಲಿಗೆ ಹೆಸರು ತಂದ ಪಾತ್ರಗಳು.
ಸಿಟ್ಟು ಬಂದಾಗಲೂ ಅಪಶಬ್ದಗಳಿಲ್ಲ ಅಬ್ಬರ ಬೊಬ್ಬಾಟಗಳಿಲ್ಲ. ಆಹಾರ, ಮಾತು,
ಹಣಕಾಸಿನಲ್ಲಿ ಹಿತಮಿತದ ವ್ಯವಹಾರ. ತನ್ನಿಂದ ಇತರರಿಗೆ ಎಲ್ಲಿ ನೋವಾಗುತ್ತದೆಯೋ ಎಂಬ ವಿನಯ ಸದಾ ಅವರಲ್ಲಿ ಕಾಣಬಹುದು. ಸಮಯಪಾಲನೆಗೆ ಹೆಚ್ಚು ಒತ್ತು ನೀಡುವ ಗಾಂವ್ಕಾರರು ದಿನನಿತ್ಯದ ಕೆಲಸಗಳಿಗ ,ಕೃಷಿ ಕೆಲಸಗಳಿಗೂ ನಿರ್ದಿಷ್ಟ ವೇಳಾಪಟ್ಟಿ ಪಾಲಿಸುತ್ತಾರೆ. ಈಚೆಗೆ ಅನಾರೋಗ್ಯ ತೀವ್ರವಾಗಿ ಕಾಡಿ ರಂಗದಿAದ ದೂರವುಳಿದರೂ ಕಲಾ ಆಸಕ್ತಿ ಮಾತ್ರ ಕಡಿಮೆಯಾಗಿಲ್ಲ.
ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ
Discussion about this post