ಸಿದ್ದಾಪುರ: `ಮಳೆ ಹಾನಿಯಿಂದ ಮನೆ ಮುರಿದವರಿಗೆ ಸರ್ಕಾರ ನೀಡುವ 1.20 ಲಕ್ಷ ರೂ ಪರಿಹಾರ ಬಾಡಿಗೆ ಮನೆಯ ಜೀವನಕ್ಕೂ ಸಾಲುತ್ತಿಲ್ಲ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಆಕ್ರೋಶವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, `ಅತಿವೃಷ್ಠಿ ಹಾಗೂ ಬಿರುಗಾಳಿಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಈವರೆಗೂ ಸಮರ್ಪಕವಾಗಿ ದೊರೆತಿಲ್ಲ. ಪರಿಹಾರ ನೀಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದ್ದಾರೆ.
`ಬಿಜೆಪಿ ಸರ್ಕಾರ ಇದ್ದಾಗ ಶೇ 75ಕ್ಕಿಂತ ಹೆಚ್ಚು ಮನೆ ಹಾನಿಯಾದರೆ 5 ಲಕ್ಷ ರೂಪಾಯಿ, ಶೇ 25ರಷ್ಟು ಹಾನಿ ಆಗಿದ್ದರೆ 1.20 ಲಕ್ಷ ರೂ ಹಾಗೂ ಅದಕ್ಕಿಂತ ಹೆಚ್ಚು ಹಾನಿಯಾದರೆ 5 ಲಕ್ಷ ರೂ ನೀಡುತ್ತಿತ್ತು. ಆದರೆ, ಈಗಿನ ಸರ್ಕಾರ ಅದಕ್ಕೂ ಕಡಿವಾಣ ಹಾಕಿದೆ’ ಎಂದು ಆರೋಪಿಸಿದರು.
Discussion about this post