ಅಂಕೋಲಾ: ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ 36 ವರ್ಷ ಕಾರ್ಯ ನಿರ್ವಹಿಸಿದ ಎಸ್ ಎನ್ ಹೆಗಡೆ ನಿವೃತ್ತರಾದರು. ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕರಾಗಿ ಉಪ ಮುಖ್ಯಕಾರ್ಯನಿರ್ವಾಹಕರಾಗಿದ್ದ ರವೀಂದ್ರ ವೈದ್ಯ ಅವರು ಅಧಿಕಾರವಹಿಸಿಕೊಂಡರು.
ಪ್ರಸ್ತುತ ಉಪ ಮುಖ್ಯಕಾರ್ಯ ನಿರ್ವಾಹಕರಾಗಿ ಶಂಕರ್ ಗಾಂವ್ಕರ್ ಕಾರ್ಯನಿರ್ವಹಿಸಲಿದ್ದಾರೆ. ಈ ಅಧಿಕಾರ ಹಸ್ತಾಂತರದ ವೇಳೆ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ,ನಿರ್ದೇಶಕರಾದ ಸಂತೋಷ ಭಟ್ಟ, ಇಂದಿರಾ ವೈದ್ಯ, ಆನಂದ್ ನಾಯ್ಕ ಇತರರು ಇದ್ದರು.
ರಾಮನಗುಳಿ ಸಹಕಾರಿ: ಒಬ್ಬರಿಗೆ ನಿವೃತ್ತಿ-ಮತ್ತಿಬ್ಬರಿಗೆ ಪದೋನ್ನತಿ!

Leave a comment