ಮುಂದಿನ ವರ್ಷ ನಾಡು-ನುಡಿ ಸಂಭ್ರಮಕ್ಕೆ ₹1 ಕೋಟಿ ಖರ್ಚು! ಬಾಳು ಬೆಳಗುಂದಿ ಕರೆಸುವ ಘೋಷಣೆ ಮಾಡಿದ ಉಮೇಶ್ ಕರಿಗಾರ್
ಹಾವೇರಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾವೇರಿ ನಗರದ ಮುನ್ಸಿಪಲ್ ಮೈದಾನದಲ್ಲಿ ನಾಡು-ನುಡಿ ಸಂಭ್ರಮ-2026 ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಸಂಭ್ರಮ ಮನೆಮಾಡಿತ್ತು. ಕಲಾವಿದರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಆಕಾಂಕ್ಷಿ ಉಮೇಶ್ ಕರಿಗಾರ್ ಅವರು ಮುಂದಿನ ವರ್ಷವೂ ಇದೇ ರೀತಿಯ ಕಾರ್ಯಕ್ರಮವನ್ನು ಇನ್ನಷ್ಟು ಅದ್ಧೂರಿಯಾಗಿ ಆಯೋಜಿಸುವುದಾಗಿ ಘೋಷಿಸಿದರು.
ಮುಂದಿನ ವರ್ಷದ ನಾಡು-ನುಡಿ ಸಂಭ್ರಮಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ವೆಚ್ಚ ಮಾಡಿ, ಖ್ಯಾತ ಕಲಾವಿದ ಬಾಳು ಬೆಳಗುಂದಿ ಅವರನ್ನು ಕರೆಸಿ ಕಾರ್ಯಕ್ರಮ ಆಯೋಜಿಸುವುದಾಗಿ ಉಮೇಶ್ ಕರಿಗಾರ್ ತಿಳಿಸಿದರು.
ಈ ಘೋಷಣೆ ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆಯಿತು. ಮುಂದಿನ ವರ್ಷ ನಡೆಯಲಿರುವ ನಾಡು-ನುಡಿ ಸಂಭ್ರಮ ಹೇಗಿರಲಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.
ವರದಿ: ಶ್ರೀ ಕರ್ನಾಟಕ | ಹಾವೇರಿ
#Haveri #HaveriNews #NaduNudiSambhrama2026 #UmeshKarigar #BaluBelagundi #KannadaRajyotsava #ShreeKarnataka






