6

ಕಾಸು ಕೊಟ್ಟರೂ ಕೆಲಸ ಮಾಡದ ಭೂ ಮಾಪನಾ ಇಲಾಖೆ!

ಹೊನ್ನಾವರ: ಪೋಡಿ ಸೇರಿದಂತೆ ಸರ್ಕಾರಿ ಕಚೇರಿಯಲ್ಲಿನ ಕೆಲಸಕ್ಕೆ ತೆರಳಿದವರಿಗೆ `ನಾಳೆ ಬಾ’ ಎಂಬ ಉತ್ತರ ಸಿಗುತ್ತಿದ್ದು, ಸಣ್ಣಪುಟ್ಟ ಕೆಲಸಗಳಿಗೂ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಡಿ ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಭೂದಾಖಲೆಗಳ ಕಚೇರಿಯಲ್ಲಿ ಪಹಣಿ ಪತ್ರಿಕೆಗೆ ಸಂಬoಧಪಟ್ಟ ಕೆ.ಡಿ.ಟಿ ಮತ್ತು ನಕ್ಷೆ ಇರಬೇಕು. ಆ ನಕ್ಷೆ ಮತ್ತು ಕೆ.ಡಿ.ಟಿಗೆ ಅನುಗುಣವಾಗಿ ಪಹಣಿ ಪತ್ರಿಕೆ ಇರಬೇಕು ಎಂಬುದು ನಿಯಮಾವಳಿ. ಆದರೆ, ಜನ ತಮ್ಮ ಪಹಣಿ ಮತ್ತು ಕೆ.ಡಿ.ಟಿ ಇಟ್ಟು 11ಇ ನಕ್ಷೆ ಅಥವಾ ಪೋಡಿಗಾಗಿ ಅರ್ಜಿ ಸಲ್ಲಿಸುವಾಗ ಕ್ಷೇತ್ರಕ್ಕೆ ಅನುಗುಣವಾಗಿ ಪ್ರತಿಯೊಂದು ಪಹಣಿಗೆ ಕನಿಷ್ಟ 1500 ರೂಪಾಯಿ ಹಣ ಪಡೆಯಲಾಗುತ್ತದೆ. ಆದರೆ, ಕೆಲಸ ಮಾತ್ರ ಆಗುವುದಿಲ್ಲ’ ಎಂದು ಅವರು ವಿವರಿಸಿದರು.
`ಪಹಣಿ ಪತ್ರಿಕೆಯ 11 ಇ ನಕ್ಷೆಗಾಗಿ ಇಲ್ಲವೇ ಪೋಡಿಗಾಗಿ ಹಣ ಭರಣ ಮಾಡಿ ಅರ್ಜಿ ಸಲ್ಲಿಸಿರುವಾಗ ನಕ್ಷೆ ಇಲ್ಲವೆಂದು ಸರ್ವೆ ಇಲಾಖೆ ಅರ್ಜಿ ವಿಲೆಗೆ ತರುವುದು ಖಂಡನೀಯ. ಭೂ ಮಾಪನ ಮತ್ತು ಭೂ ದಾಖಲೆಗಳ ಕಚೇರಿಗೆ ಜನ ಸಾಮಾನ್ಯರು ತಮ್ಮ ಭೂಮಿಯ ಪಹಣಿ ಪತ್ರಿಕೆ ಪೋಡಿಗಾಗಿ ಹಾಗೂ 11ಇ ನಕ್ಷೆಗಾಗಿ ಹಣ ಭರಣ ಮಾಡಿ ಅರ್ಜಿ ಸಲ್ಲಿಸಿರುವಾಗ ಸರ್ವೆ ಇಲಾಖೆ ನಕ್ಷೆ ಇಲ್ಲವೆಂದು ಅರ್ಜಿದಾರರ ಅರ್ಜಿಯನ್ನು ವಿಲೆ ಮಾಡುತ್ತಿದ್ದು, ಅರ್ಜಿದಾರರು ಕಟ್ಟಿದ ಹಣಕ್ಕೆ ಅನ್ಯಾಯವಾಗುತ್ತಿದೆ’ ಎಂದವರು ದೂರಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page