6 Skip to content

ಸಿದ್ದಿ ಜನರಿಗೆ ಕಳಪೆ ಆಹಾರ: ಕ್ರಮಕ್ಕೆ ಆಗ್ರಹ

ಕಾರವಾರ: `ಪರಿಶಿಷ್ಟ ಪಂಗಡದ ಸಿದ್ದಿ ಸಮುದಾಯದವರಿಗೆ ನೀಡುತ್ತಿರುವ ಆಹಾರ ಸಾಮಗ್ರಿ ಕಳಪೆಯಾಗಿದ್ದು, ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಮೂಲಕ ಇದನ್ನು ವಿತರಿಸಲಾಗಿದೆ. ಈ ಕಿಟ್ ಮೇಲೆ ಸಹ ಪೂರೈಕೆದಾರರ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ವೈಎಫ್‌ಐ ರಾಜ್ಯ ಸಮಿತಿ ಸದಸ್ಯರಾದ ಡಿ.ಸ್ಯಾಮಸನ್ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸಿದ್ದಿ ಜನರಿಗೆ ಮಳೆಗಾಲದಲ್ಲಿ ಕೆಲಸ ಸಿಗುವುದು ಕಡಿಮೆ. ಹೀಗಾಗಿ ಅಪೌಷ್ಟಿಕತೆ ನಿವಾರಣೆಗೆ ಜೂನ್‌ದಿಂದ ಡಿಸೆಂಬರ್‌ವರೆಗೆ ಆಹಾರ ನೀಡುವ ಯೋಜನೆಯಿದ್ದು, ಪೂರೈಕೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ದೂರಿದರು. `ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದಿಂದ ಪೂರೈಸುವ ಆಹಾರ ಪದಾರ್ಥ ಕಳಪೆ ಗುಣಮಟ್ಟದಿಂದ ಕೂಡಿದೆ. 75 ಮೈಕ್ರೊ ಏಕಬಳಕೆ ಪ್ಲಾಷ್ಟಿಕ್ ಬ್ಯಾನ್ ಮಾಡಿದರೂ ಅದರಲ್ಲಿಯೇ ಪೂರೈಕೆ ನಡೆದಿದೆ. ಹೀಗಾಗಿ ಪೂರೈಕೆದಾರರ ಮೇಲೆ ಕ್ರಮವಾಗಬೇಕು’ ಎಂದು ಆಗ್ರಹಿಸಿದರು.

Leave a comment

Leave a Reply

You cannot copy content of this page