6 Skip to content

ಹಕ್ಕುಪತ್ರಕ್ಕೆ ಕಾದವರ ಬದುಕು ಸುರಕ್ಷಿತ: ಒಕ್ಕಲೆಬ್ಬಿಸುವ ಆದೇಶ ಈ ಅರ್ಜಿ ಸಲ್ಲಿಸಿದವರಿಗಲ್ಲ!

ಶಿರಸಿ: `ಶಿರೂರು ಗುಡ್ಡ ಕುಸಿತದ ಕಾರಣ ಉಲ್ಲೇಖಿಸಿ ಪಶ್ಚಿಮ ಘಟ್ಟದ 9 ಜಿಲ್ಲೆಗಳ ಗಿರಿ ಪ್ರದೇಶಗಳಲ್ಲಿನ ಅರಣ್ಯ ಅತಿಕ್ರಮಣದಾರರನ್ನು ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದು, ಈ ಆದೇಶ ಈಗಾಗಲೇ ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ ಬಡ ಅತಿಕ್ರಮಣದಾರರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಅತಿಕ್ರಮಣದಾರು ಆತಂಕಕ್ಕೆ ಒಳಗಾಗುವುದು ಬೇಡ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅಭಯ ನೀಡಿದ್ದಾರೆ.
2015ರ ನಂತರ ಅರಣ್ಯ ಒತ್ತುವರಿ ಮಾಡಿರುವ ರೆಸಾರ್ಟ, ನಿವೇಶನ ಹಾಗೂ ತೋಟಗಳನ್ನು ತಕ್ಷಣ ತೆರವು ಮಾಡುವಂತೆ ಅರಣ್ಯ ಸಚಿವರು ಆದೇಶಿಸಿದ್ದಾರೆ. 2005ರ ನಂತರ ಮಾಡಿದ ಹೊಸ ಅತಿಕ್ರಮಣದಾರರಿಗೆ ಮಾತ್ರ ಈ ಆದೇಶ ಅನ್ವಯ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮಂಜೂರಿ ಪ್ರಕ್ರಿಯೆಯಲ್ಲಿರುವ ಅರಣ್ಯವಾಸಿಗಳು ಹೀಗಾಗಿ ಭಯಪಡುವ ಅಗತ್ಯವಿಲ್ಲ’ ಎಂದವರು ಹೇಳಿದ್ದಾರೆ.
ಗುಡ್ಡ ಕುಸಿತ, ನಿಸರ್ಗ ವಿಕೋಪದಿಂದ ಸಾಕಷ್ಟು ಸಾವು – ನೋವು, ನಷ್ಟವಾದ ಹಿನ್ನಲೆ ಚಿಕ್ಕಮಂಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ ಜಿಲ್ಲೆಗಳ ಹೆಸರು ಉಲ್ಲೇಖಿಸಿ ಸಚಿವರು ಅಗಸ್ಟ 2ರಂದು ಆದೇಶ ಹೊರಡಿಸಿದ್ದರು. ಇದರಲ್ಲಿ 2015ರ ನಂತರ ಅರಣ್ಯದಲ್ಲಿ ಆಗಿರುವ ಬಡಾವಣೆ, ತೋಟ ಮತ್ತು ರೆಸಾರ್ಟ ಒಕ್ಕಲೆಬ್ಬಿಸುವ ಬಗ್ಗೆ ಸೂಚಿಸಿದ್ದರು. 1 ತಿಂಗಳ ಒಳಗೆ ಕ್ರಮ ಕೈಗೊಂಡು ವರದಿ ಸೂಚಿಸಲು ಆದೇಶಿಸಿದ್ದರು.

ಅರಣ್ಯ ಸಚಿವರು ಹೇಳಿದ್ದೇನು? ಇಲ್ಲಿ ಓದಿ..

https://srinews.in/forestorder/

Leave a comment

Leave a Reply

You cannot copy content of this page