ಶರಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಪ್ರಸಿದ್ಧ ಜೋಗ ಜಲಪಾತ ವೀಕ್ಷಣೆಗೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಅತ್ಯಧಿಕ ಪ್ರವಾಸಿಗರಿಂದ ಜೋಗ ತುಂಬಿಕೊoಡಿದೆ.
ಮಲೆನಾಡಿನ ಪ್ರವಾಸಿ ತಾಣಗಳ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯಯಲ್ಲಿಯೂ ಮಳೆ ಆರ್ಭಟ ಮುಂದುರೆಸಿದ ಹಿನ್ನೆಲೆ ಇಲ್ಲಿನ ವಿಶ್ವಪ್ರಸಿದ್ಧ ತಾಣವಾದ ಜೋಗ ಜಲಪಾತ ಮೈ ತುಂಬಿಕೊoಡಿದೆ. ಲಿಗಂನಮಕ್ಕಿ ಜಲಾನಯನ ಪ್ರದೇಶದ ಕೆಳದಂಡೆ ಭಾಗದಲ್ಲಿ ಮಳೆ ನೀರು ರಭಸದಿಂದ ಹರಿದುಬರುತ್ತಿದೆ. 2023ರಲ್ಲಿ ರಾಜ್ಯದಲ್ಲಿ ಮಳೆಯಿಲ್ಲದೆ, ಭರದ ವಾತಾವರಣ ನಿರ್ಮಾಣವಾಗಿ, ಹಲವು ಜಲಮೂಲಗಳು ಬತ್ತಿಹೋಗಿದ್ದವು. ಆ ವೇಳೆ ವಿಶ್ವಪ್ರಸಿದ್ದ ಜೋಗ ಜಲಪಾತದ ಸೌಂದರ್ಯದ ಕಳೆಯೂ ಮಾಯವಾಗಿತ್ತು. ಇದೀಗ ಸುರಿಯುತ್ತಿರುವ ಮಳೆಯಿಂದ ಜೋಗದ ಸೌಂದರ್ಯದ ಕಳೆ ಮರುಕಳಿಸಿದಂತಾಗಿದೆ. ಅಣೆಕಟ್ಟಿನ ನೀರು ಹೊರ ಬಂದಿದ್ದರಿoದ ಜಲಪಾತ ಇನ್ನಷ್ಟು ರಭಸವಾಗಿ ಧುಮುಕುತ್ತಿದೆ.
ಜೋಗದ ವಿವಿಧ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಪ್ರವಾಸಿಗರು ಅತಿ ಹತ್ತಿರದಿಂದ ಜಲಪಾದ ಜಲಸಿರಿಯ ವೈಭವವನ್ನು ಕಣ್ತಂಬಿಕೊಳ್ಳಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಬೃಹತ್ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗುತ್ತಿದೆ.




Discussion about this post