6 Skip to content

ಗಂಧದ ಮರದ ಮೇಲೆ ಕಳ್ಳರ ಕಣ್ಣು

ಮುಂಡಗೋಡು: ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ ಕಟ್ಟಿಮನಿ ಎಂಬಾತರ ಹೊಲದಲ್ಲಿ ಕಳ್ಳತನ ನಡೆದಿದೆ.
ಕೋಡಂಬಿಯಲ್ಲಿ ಪಶುರಾಮ ಕಟ್ಟಿಮನಿ ಅವರು 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಂಧದ ಗಿಡಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಜುಲೈ 15ರ ರಾತ್ರಿ ಹೊಲಕ್ಕೆ ನುಗ್ಗಿದ ಕಳ್ಳರು 11 ಗಂಧದ ಮರಗಳನ್ನು ಕಡಿದು ಸಾಗಿಸಿದ್ದಾರೆ. ಇನ್ನೂ 15 ಮರಗಳನ್ನು ಕಟಾವು ಮಾಡಿದ ಕಳ್ಳರು ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದ ಪರಶುರಾಮ ಅವರಿಗೆ 2 ಲಕ್ಷ ರೂ ನಷ್ಟವಾಗಿದೆ. ಕಳ್ಳತನದ ಬಗ್ಗೆ ಇಷ್ಟು ದಿನಗಳ ಕಾಲ ಸಂಬoಧಿಕರ ಬಳಿ ಚರ್ಚೆ ನಡೆಸಿದ ಅವರು ಇದೀಗ ಕಳ್ಳರನ್ನು ಹಿಡಿಯುವಂತೆ ಪೊಲೀಸ್ ದೂರು ನೀಡಿದ್ದಾರೆ.

Leave a comment

Leave a Reply

You cannot copy content of this page