6 Skip to content

ಚಿನ್ನದ ಮೇಲೆ ಆಸೆ – ಕಾಸಿನ ಮೇಲೆ ಪ್ರೀತಿ: ಚಿನ್ನದ ಜೊತೆ ಕಾಸೂ ಕಳೆದುಕೊಂಡ ಅಕ್ಕಸಾಲಿಗ!

ಶಿರಸಿ: ಚಿನ್ನದ ಆಸೆಗೆ ಶಿರಸಿಗೆ ಬಂದಿದ್ದ ಕೇರಳದ ಸಚಿನ್ ಶಿವಾಜಿ ಗಾಯಕವಾಡ (33) ಎಂಬಾತನಿಗೆ 7 ಜನ ಸೇರಿ ಹಲ್ಲೆ ನಡೆಸಿದ್ದು, ದುಷ್ಕರ್ಮಿಗಳು ಸಚಿನ್ ಬಳಿಯಿದ್ದ ಬಳಿಯಿದ್ದ 9 ಲಕ್ಷ ರೂ ಹಣ ಹಾಗೂ ಐಪೋನ್’ನ್ನು ದೋಚಿದ್ದಾರೆ.
ಜುಲೈ 30ರಂದು ಸಚಿನ್ ಶಿರಸಿಗೆ ಆಗಮಿಸಿದ್ದ. ಆ ವೇಳೆ ಅಪರಿಚಿತ ಅಂಗವಿಕಲನೊಬ್ಬ ಆತನನ್ನು ಭೇಟಿಯಾಗಿದ್ದು, ಶಿರಸಿಯಿಂದ 3 ಕಿಮೀ ಹೊರಗೆ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ 800ಮಿಲಿ ತೂಕದ 2ತುಂಡು ಬಂಗಾರವನ್ನು ಕಾಣಿಸಿದ್ದ. ಈ ರೀತಿಯ ಬಂಗಾರ ಕೊಡುವುದಾಗಿ ನಂಬಿಸಿ ಹಣ ತರುವಂತೆಯೂ ತಿಳಿಸಿದ್ದ. ಇದನ್ನು ನಂಬಿದ ಸಚಿನ್ ಆತನ ಸ್ನೇಹಿತ ವಿಷ್ಣುವಿನ ಜೊತೆ ಕುಮಟಾದವರೆಗೆ ರೈಲಿನಲ್ಲಿ ಬಂದಿದ್ದು, ಅಲ್ಲಿಂದ ಅಂಗವಿಕಲನಿಗೆ ಫೋನ್ ಮಾಡಿದ್ದ.
ಆಗ ಶಿರಸಿಯ ಮಳಲಗಾಂ ಬಳಿ ಬರುವಂತೆ ಅಂಗವಿಕಲ ಹೇಳಿದ್ದು, ಅದರಂತೆ ಸಚಿನ್ ಅಲ್ಲಿಗೆ ತೆರಳಿದ್ದ.
ಕೇರಳದಿಂದ ಬಂದ ಇಬ್ಬರನ್ನು ಸಮೀಪದ ಕಾಡಿಗೆ ಕರೆದೊಯ್ದ ಅಂಗವಿಕಲ ಹಣ ಕಾಣಿಸುವಂತೆ ತಿಳಿಸಿದ್ದು, ಅಲ್ಲಿದ್ದ 9 ಲಕ್ಷ ರೂಪಾಯಿಯನ್ನು ಪಡೆದು ದೊಡ್ಡದಾಗಿ ಹಿಂದಿಯಲ್ಲಿ `ಹಣ ಸಿಕ್ಕಿತು’ ಎಂದು ಕೂಗಿದ್ದ. ಆಗ ಇನ್ನು ಆರು ಜನ ಆಗಮಿಸಿ ಸಚೀನ್ ಹಾಗೂ ವಿಷ್ಣುವಿನ ಮೇಲೆ ಹಲ್ಲೆ ಮಾಡಿ ಅವರ ಬಳಿಯಿದ್ದ ಐಫೋನ್ ಹಾಗೂ 11 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಹಲ್ಲೆ ನಡೆಸಿ ದರೋಡೆ ಮಾಡಿದ 7 ಜನರನ್ನು ಪತ್ತೆ ಮಾಡುವಂತೆ ಇದೀಗ ಸಚಿನ್ ಹಾಗೂ ವಿಷ್ಣು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

Leave a comment

Leave a Reply

You cannot copy content of this page