6 Skip to content

ಮಹಿಳಾ ಅಧಿಕಾರಿಗೆ ಯಾಕಿಷ್ಟು ಸಂಕಷ್ಟ? ಕಾಳಿ ದುರಂತದ ಬಗ್ಗೆ ಪೊಲೀಸ್ ಅಧೀಕ್ಷಕರ ಮಾತೇನು?

ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಕ್ಷಣದಿಂದಲೂ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಒಂದು ದಿನವೂ ನೆಮ್ಮದಿಯಿಂದ ನಿದ್ದೆ ಮಾಡಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರಿಗೆ ಸರಿಯಾಗಿ ಊಟ ಮಾಡಲು ಪುರಸೋತು ಸಿಗುತ್ತಿಲ್ಲ.

ಕಂದಾಯ ಹಾಗೂ ಪೊಲೀಸ್ ಇಲಾಖೆಯೊಳಗಿನ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವ ಉತ್ಸಾಹದಲ್ಲಿದ್ದ ಈ ಇಬ್ಬರು ಅಧಿಕಾರಿಗಳಿಗೆ ಒಂದರ ಮೇಲೆ ಇನ್ನೊಂದರoತೆ ಆಘಾತ ಎದುರಾಗುತ್ತಿದೆ. ಶಿರೂರು ಗುಡ್ಡ ಕುಸಿತ, ಮುಖ್ಯಮಂತ್ರಿ ಪ್ರವಾಸ, ಕೇಂದ್ರ ಸಚಿವರ ಆಗಮನ, ಅರ್ಜನನ ಲಾರಿ ಹುಡುಕಾಟದ ಒತ್ತಡ, ಸಂತ್ರಸ್ತರ ನೋವಿನ ಆಕ್ರಂದನ, ಆರೋಪ-ಪ್ರತ್ಯಾರೋಪಗಳ ನಡುವೆ ಸಿಲುಕಿದ ಜಿಲ್ಲಾಡಳಿತಕ್ಕೆ ಇದೀಗ ಕಾಳಿ ಸೇತುವೆ ಕುಸಿತ ಸಹ ಸವಾಲಾಗಿ ಪರಿಣಮಿಸಿದೆ.

ಹೆದ್ದಾರಿ ಅಗಲೀಕರಣದಿಂದಾದ ಅವಘಡಗಳ ಬಗ್ಗೆ ಜನರಿಗೂ ನೋವಿದೆ. ಇದರಿಂದ ನೊಂದವರಿಗೆ ಗುತ್ತಿಗೆ ಕಂಪನಿ ವಿರುದ್ಧ ಬಹುದೊಡ್ಡ ಆಕ್ರೋಶವಿದೆ. ಅಕ್ರಮವಾಗಿ ಟೋಲ್ ವಸೂಲಿ ನಡೆಸಿದ ಬಗ್ಗೆ ಸಾಕಷ್ಟು ದೂರುಗಳಿವೆ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕೆಲಸವೇ ಇದೆಲ್ಲ ಅವಾಂತರಗಳಿಗೆ ಕಾರಣ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಅಧಿಕಾರಿಗಳು ಇದನ್ನು ಬಹಿರಂಗವಾಗಿ ಹೇಳುವ ಹಾಗಿಲ್ಲ! ಅದಾಗಿಯೂ ದೊಡ್ಡ ದೊಡ್ಡವರನ್ನು ಎದುರುಹಾಕಿಕೊಂಡ ಅಧಿಕಾರಿಗಳು ಹೆದ್ದಾರಿ ಕೆಲಸದ ಗುತ್ತಿಗೆ ಪಡೆದ ಐ ಆರ್ ಬಿ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.

ಕಾಳಿ ದುರಂತದ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..

 

Leave a comment

Leave a Reply

You cannot copy content of this page