ಯಲ್ಲಾಪುರ: ಕೈಮಗ್ಗ ದಿನಾಚರಣೆ ಅಂಗವಾಗಿ ತಮ್ಮ ತಂಡದೊoದಿಗೆ ಉದ್ಯಮನಗರದ ಕೈಮಗ್ಗ ಕೇಂದ್ರಕ್ಕೆ ತೆರಳಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರುತಿ ಹೆಗಡೆ ಅಲ್ಲಿ ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಂಡಿರುವ ಪಾಂಡುರoಗ ಮುಂಡಗೋಡ್ಲಿ ಅವರನ್ನು ಗೌರವಿಸಿದರು.
ಸನ್ಮಾನದ ನಂತರ ಬಿಜೆಪಿ ಪ್ರಮುಖರಾದ ಶ್ಯಾಮಿಲಿ ಪಾಟಣಕರ, ಚಂದ್ರಕಲಾ ಭಟ್ಟ, ವನಿತಾ ಮರಾಠಿ, ಕಲ್ಪನಾ ನಾಯ್ಕ ಅವರ ಅನುಭವಗಳನ್ನು ಆಲಿಸಿದರು. ಕೈಮಗ್ಗದಿಂದ ತಯಾರಾಗುವ ಬಟ್ಟೆಗಳನ್ನು ಅವರು ವೀಕ್ಷಿಸಿದರು. ಅಲ್ಲಿರುವ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಪಕ್ಷದ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಗಣಪತಿ ಬೋಳಗುಡ್ಡೆ, ಗಜಾನನ ನಾಯ್ಕ, ಪ್ರದೀಪ ಯಲ್ಲಾಪುರಕರ, ಗಣಪತಿ ಹೆಗಡೆ ಇದ್ದರು.
Discussion about this post