ಹೊನ್ನಾವರ: `ಎಲ್ಲಾ ವಕೀಲರ ಸಹಕಾರದಿಂದ ನೊಂದವರಿಗೆ ನ್ಯಾಯ ನೀಡಲು ಸಾಧ್ಯವಾಗಿದ್ದು, ನ್ಯಾಯವಾದಿಗಳು ನ್ಯಾಯದ ಪರ ನಿಲ್ಲುವುದು ಅಗತ್ಯ’ ಎಂದು ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹೇಳಿದ್ದಾರೆ.
ಪದೋನ್ನತಿ ನಿಮಿತ್ತ ಸಿವಿಲ್ ಜಡ್ಜ ನ್ಯಾಯಾಧೀಶರಾಗಿ ಬಾದಾಮಿ ವರ್ಗವಾಗುವ ಮುನ್ನ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು `ವಕೀಲರ ಜ್ಞಾನ ಬೇರೆಯವರಿಗೆ ಉಪಕಾರಿಯಾಗುವ ಹಾಗಿರಬೇಕು. ಜ್ಞಾನವಂತ ವಕೀಲರಿಂದ ಖಚಿತ ನ್ಯಾಯ ಸಿಗಲು ಸಾಧ್ಯ’ ಎಂದರು.
ಜೆ.ಎo.ಎಫ್.ಸಿ ನ್ಯಾಯಾಧೀಶ ಈರಣ್ಣ ಹುಣಸಿಕಟ್ಟೆ, ನ್ಯಾಯಾಧೀಶ ಚಂದ್ರಶೇಖರ ಬಿಸಿ, ವಕೀಲರ ಸಂಘದ ಅಧ್ಯಕ್ಷ ವಿ.ಎಂ ಭಂಡಾರಿ, ಹಿರಿಯ ವಕೀಲ ಆರ್.ಎನ್ ನಾಯ್ಕ, ಕೆ.ವಿ.ನಾಯ್ಕ ಮಾತನಾಡಿದರು.
ವಕೀಲ ಎಂ.ಎಸ್. ಭಟ್ ಕಟ್ಟಿಗೆ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘದ ಕಾರ್ಯದರ್ಶಿ ಉದಯ ಬಿ ನಾಯ್ಕ ಚಿತ್ತಾರ ವಂದಿಸಿದರು.






Discussion about this post