ಕುಮಟಾ: ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಗೆ ಪೈಪೋಟಿ ಜೋರಾಗಿದೆ.
23 ಸದಸ್ಯರ ಬಲವಿರುವ ಕುಮಟಾ ಪುರಸಭೆಯಲ್ಲಿ ಆರು ಕಾಂಗ್ರೆಸ್ ಸದಸ್ಯರನ್ನು ಹೊರತುಪಡಿಸಿ ಉಳಿದವರೆಲ್ಲರೂ ಬಿಜೆಪಿ ಬೆಂಬಲಿತರಾಗಿದ್ದಾರೆ. ಜೆಡಿಎಸ್ ಸದಸ್ಯೆ ಛಾಯಾ ವೆಂಗರ್ಲೇಕರ್ ಕೂಡ ಈಗ ಬಿಜೆಪಿ ಬೆಂಬಲಿಸಿರುವುದರಿAದ ಎರಡನೇ ಬಾರಿಯೂ ಬಿಜೆಪಿಗರೇ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಹೆಚ್ಚಿದೆ.
ಕಳೆದ ಅವಧಿಯಲ್ಲಿ ಸ್ಥಾಯಿ ಸಮಿತಿ ಹುದ್ದೆ ಏರಿದ್ದ ಸುಶೀಲಾ ಗೋವಿಂದ ನಾಯ್ಕ ಅವರು ಈ ಬಾರಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಅವರೊಂದಿಗೆ ಪಲ್ಲವಿ ಮಡಿವಾಳ, ಶೈಲಾ ಗೌಡ ಸಹ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.
ಇನ್ನೂ ಉಪಾಧ್ಯಕ್ಷ ಹುದ್ದೆಗೆ ಮಹೇಶ ನಾಯ್ಕ ವನ್ನಳ್ಳಿ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಖಚಿತವಾಗಿಲ್ಲ. ಈ ಸಂಬoಧ ಕೆಲವೇ ದಿನಗಳಲ್ಲಿ ಬಿಜೆಪಿ ಮುಖಂಡರ ಸಭೆ ನಡೆಯಲಿದ್ದು, ಎರಡನೇ ಅವಧಿಗೆ ಯಾರು ಅಧ್ಯಕ್ಷರಾಗಬೇಕು. ಉಪಾಧ್ಯಕ್ಷ ಹುದ್ದೆ ಯಾರಿಗೆ? ಎಂಬ ಚರ್ಚೆ ನಡೆಯಲಿದೆ.
Discussion about this post