ರಾಜ್ಯದಲ್ಲಿರುವ ಅರಣ್ಯ ಒತ್ತುವರಿ ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶದ ಹಿನ್ನಲೆ ಚಿಕ್ಕಮಂಗಳೂರಿನ ಕೊಪ್ಪದಲ್ಲಿ ಅರಣ್ಯಾಧಿಕಾರಿಗಳು ಕಾಫಿ ತೋಟಗಳನ್ನು ಕಡಿದು ನಾಶ ಮಾಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಿಪಿಎಸ್ ಆಗಿರುವ ಅರಣ್ಯ ಅತಿಕ್ರಮಣದಾರರ ತಂಟೆಗೆ ಬರಬೇಡಿ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಎಚ್ಚರಿಕೆ ನೀಡಿದ್ದಾರೆ.
2005ರ ನಂತರ ಅತಿಕ್ರಮಣವಾದ ಎಲ್ಲಾ ಅರಣ್ಯಭೂಮಿ ಅತಿಕ್ರಮಣ ತೆರವು ಮಾಡಬೇಕು ಎಂದು ಈಶ್ವರ ಖಂಡ್ರೆ ಆದೇಶಿಸಿದ್ದರು. ಈ ಹಿನ್ನಲೆ ಒತ್ತುವರಿ ಕಾರ್ಯಾಚರಣೆ ಶುರುವಾಗಿದೆ. ಈ ಆದೇಶ ಹೊರಬಿದ್ದ ಬೆನ್ನಲ್ಲೇ ಬೆಂಗಳೂರಿಗೆ ದೌಡಾಯಿಸಿದ್ದ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ `ಈ ನಿಯಮ ಸರಿಯಿಲ್ಲ’ ಎಂದು ವಿವಿಧ ಸಚಿವರ ಮುಂದೆ ತಮ್ಮ ವಾದ ಮಂಡಿಸಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳೆ, ಕಾನೂನು ಸಚಿವ ಎಚ್.ಕೆ ಪಾಟೀಲ್ ಮತ್ತು ಆಡಳಿತ ಸುಧಾರಣಾ ಆಯೋಗ ಅದ್ಷಕ್ಯ ಆರ್. ವಿ ದೇಶಪಾಂಡೆ ಅವರನ್ನು ರವೀಂದ್ರ ನಾಯ್ಕ ಭೇಟಿ ಮಾಡಿದ್ದು ಆ ವೇಳೆ ಅವರೆಲ್ಲರೂ ಸಮಾಧಾನದ ಉತ್ತರ ನೀಡಿದ್ದಾರೆ. ಅದಾಗಿಯೂ ಪ್ರಸ್ತುತ ಕೊಪ್ಪದಲ್ಲಿನ ಒತ್ತುವರಿ ತೆರವು ಉತ್ತರ ಕನ್ನಡದ ಅರಣ್ಯವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಪ್ರಸ್ತುತ ವಾಸ್ತವ್ಯ ಮತ್ತು ಸಾಗುವಳಿ ಹೊರತಾಗಿ ವಾಣಿಜ್ಯಕರಣ ಮತ್ತು ಇನ್ನಿತರ ಉದ್ಧೇಶಕ್ಕೆ ಅತಿಕ್ರಮಣವಾಗಿರುವ ಪ್ರದೇಶವನ್ನು ಕಾರ್ಯಾಚರಣೆಯ ಪಟ್ಟಿಗೆ ಸೇರಿಸಿದ ಅರಣ್ಯಾಧಿಕಾರಿಗಳು ಅದನ್ನು ತೆರವು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. `ಸಚಿವರ ಆದೇಶದ ನೆಪದಲ್ಲಿ ಅರಣ್ಯ ಸಿಬ್ಬಂದಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದವರ ಮೇಲೆ ದೌರ್ಜನ್ಯ ನಡೆಸುವ ಸಾಧ್ಯತೆಗಳಿದ್ದು, ಇದನ್ನು ತಡೆಯಬೇಕು’ ಎಂದು ಸಚಿವ ಈಶ್ವರ್ ಖಂಡ್ರೆ ಅವರಿಗೆ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
`ಅರಣ್ಯ ಭೂಮಿ ಮೇಲೆ ಅವಲಂಬಿತವಾಗಿರುವ ಅರಣ್ಯವಾಸಿಗಳು ತಲತಲಾಂತರದಿoದ ವಾಸ್ತವ್ಯ ಮತ್ತು ಸಾಗುವಳಿ ಉದ್ದೇಶಕ್ಕಾಗಿ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದು, ಅರಣ್ಯ ಹಕ್ಕು ಕಾಯಿದೆ ಅನುಷ್ಠಾನವಾಗದ ಹಿನ್ನಲೆ ಅವರು ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅರಣ್ಯವಾಸಿಗಳ ಹಿತವನ್ನ ಮತ್ತು ಪರಿಸರ ನಿಸರ್ಗದ ಸಮತೋಲನದೊಂದಿಗೆ ಸರ್ಕಾರ ಕಾರ್ಯತಂತ್ರ ಜರುಗಿಸುವುದು ಅವಶ್ಯ’ ಎಂದು ರವೀಂದ್ರ ನಾಯ್ಕ ಪ್ರತಿಪಾದನೆ ಮಾಡಿದ್ದಾರೆ.

ಅರಣ್ಯ ಸಚಿವರು ಹೇಳಿದ್ದೇನು?
`ಕರಡು ಕಸ್ತೂರಿ ರಂಗನ್ ವರದಿ ಜಾರಿಗೆ ಕುರಿತು ಸರ್ಕಾರ ಇಂದಿನವರೆಗೆ ಯಾವುದೇ ಅಂತಿಮ ತಿರ್ಮಾನ ಪ್ರಕಟಿಸಿಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ರವೀಂದ್ರ ನಾಯ್ಕರಿಗೆ ಹೇಳಿದ್ದಾರೆ.

ಆರ್ ವಿ ದೇಶಪಾಂಡೆ ನಿಲುವೇನು?
`ಯಾವ ಕಾರಣಕ್ಕೂ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದವರನ್ನು ಒಕ್ಕಲೆಬ್ಬಿಸಬೇಡಿ ಎಂದು ಅರಣ್ಯ ಇಲಾಖೆಯ ಕಾರ್ಯದರ್ಶಿ ಪ್ರಭಾ ಚಂದ್ರ್ ರಾಯ್ ಅವರಿಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ನಿರ್ದೇಶನ ನೀಡಿದ್ದಾರೆ.





Discussion about this post