ಶಿರಸಿ: ರಾಜ್ಯದಲ್ಲಿ ಜೆಡಿಎಸ್ ಪಕ್ಷವೇ ಇಬ್ಬಾಗವಾಗಿದ್ದು, ಒಂದು ಬಣದವರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರನ್ನೇ ಪಕ್ಷದಿಂದ ಉಚ್ಚಾಟಿಸಿದ್ದು ಹಳೆ ವಿಷಯ. ಇದೀಗ ಶಿರಸಿಯ `ಉಪೇಂದ್ರ ಪೈ ಜೆಡಿಎಸ್ ಉಸ್ತುವಾರಿಯಲ್ಲ’ ಎಂಬ ಹೇಳಿಕೆ ಹರಿದಾಡುತ್ತಿದೆ.
ಜೆಡಿಎಸ್ ಪಕ್ಷದ ಉಪಾಧ್ಯಕ್ಷ ಜಿ ಕೆ ಪಟಗಾರ್ ಎಂಬಾತರು ನೀಡಿದ ಪ್ರಕಟಣೆ ಹರಿದಾಡುತ್ತಿದೆ. ಅದರಲ್ಲಿ `ಜೆಡಿಎಸ್ ಘಟಕ ಅಥವಾ ರಾಜ್ಯ ಸಮಿತಿಯವರು ಉಪೇಂದ್ರ ಪೈ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿಲ್ಲ’ ಎಂದು ಬರೆಯಲಾಗಿದೆ. ಅವರು `ಜಿಲ್ಲಾ ಉಸ್ತುವಾರಿ’ ಎಂದು ಘೋಷಿಸಿಕೊಂಡಿದ್ದರಿAದ ಕಾರ್ಯಕರ್ತರಲ್ಲಿ ಗೊಂದಲವಾಗಿದೆ. ಈ ಬಗ್ಗೆ ಎಲ್ಲಡೆ ಚರ್ಚೆ ನಡೆಯುತ್ತಿದೆ. ಹೀಗಾಗಿ ಈ ಸ್ಪಷ್ಟನೆ ಎಂದು ಕಗಾಲ್ ಹೇಳಿದ್ದಾರೆ. ಆದರೆ, ಹರಿದಾಡುತ್ತಿರುವ ಪ್ರಕಟಣೆಯಲ್ಲಿ ಅವರ ಸಹಿ ಇಲ್ಲ.
ಫೋನ್ ರಿಸಿವ್ ಮಾಡಿಲ್ಲ
ಜೆಡಿಎಸ್ ಉಸ್ತುವಾರಿ ಉಪೇಂದ್ರ ಪೈ ಅಲ್ಲ ಎಂದಾದರೆ ಇನ್ಯಾರು? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ತಿಳಿದುಕೊಳ್ಳಲು ಪಕ್ಷದ ಉಪಾಧ್ಯಕ್ಷ ಜಿ ಕೆ ಪಟಗಾರ್ ಅವರಿಗೆ ಫೋನ್ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.
Discussion about this post