6

ಸರ್ಕಾರಿ ಶಾಲೆಗೆ ತಾಡಪಲ್ ಹೊದಿಕೆ!

ಯಲ್ಲಾಪುರ: ಬಿಸಗೋಡು ಸರ್ಕಾರಿ ಪ್ರೌಢಶಾಲೆ ಮಳೆಗೆ ಸೋರುತ್ತಿದೆ. ಹೀಗಾಗಿ ಊರಿನವರೇ ಸೇರಿ ತಾಡಪಲ್ ಹೊದಕೆ ಹೊದಿಸಿದ್ದಾರೆ. ಗಾಳಿ ಜೋರಾದಾಗ ಆ ತಾಡಪತ್ರೆ ಹಾರಿ ಹೋಗುತ್ತಿದ್ದು, ಅದನ್ನು ತಂದು ಮತ್ತೆ ಹೊದಸುವುದೇ ಅಲ್ಲಿನವರಿಗೆ ಸಾಹಸದ ಕೆಲಸ!
ಕಳೆದ ಮೂರು ವರ್ಷಗಳಿಂದ ಈ ಶಾಲೆ ಸೋರುತ್ತಿದೆ. ಆದರೆ, ಈವರೆಗೂ ಸೋರುವುದಕ್ಕೆ ಶಾಶ್ವತ ಪರಿಹಾರ ದೊರೆತಿಲ್ಲ. `ಬೇಸಿಗೆ ಅವಧಿಯಲ್ಲಿ ಬೇರೆ ಹಂಚು ಅಳವಡಿಸಿದರೆ ಮಳೆಗಾಲದ ಸಮಸ್ಯೆ ತಡೆಯಬಹುದು’ ಎಂಬುದು ಅನೇಕರ ಅಭಿಪ್ರಾಯ. ಆದರೆ, ಬೇಸಿಗೆ ಬಂದಾಗ ಮಳೆಗಾಲದ ಸಮಸ್ಯೆಯೇ ನೆನಪಾಗುತ್ತಿಲ್ಲ. ಹೀಗಾಗಿ ಮುಂದಿನ ಮಳೆಗಾಲದಲ್ಲಿ ಮಕ್ಕಳು ನಡುಗುವುದು ಅನಿವಾರ್ಯ ಎಂಬoತಾಗಿದೆ.
ಈ ವರ್ಷ ಜಿಲ್ಲಾ ಪಂಚಾಯತದವರು ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಮುಂದಿನ ವರ್ಷವಾದರೂ ಶಾಲೆ ಮೇಲೆ ಏರಿ ತಾಡಪತ್ರೆ ಹೊದೆಸುವ ಸವಾಲಿನ ಕೆಲಸಕ್ಕೆ ಮುಕ್ತಿ ದೊರೆಯಬಹುದು ಎಂಬ ಆಶಾ ಭಾವನೆ ವ್ಯಕ್ತವಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    Leave a Reply

    Your email address will not be published. Required fields are marked *

    You cannot copy content of this page