ಅಂಕೋಲಾ: ಅಗಸ್ಟ 13ರಂದು (August 13) ಶಿರೂರು ಗುಡ್ಡ ಹಾಗೂ ಗುಡ್ಡ ಕುಸಿತದಿಂದ ಹಾನಿಗೆ ಒಳಗಾದ ಉಳುವರೆ ಗ್ರಾಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಆಗಮಿಸಲಿದ್ದಾರೆ.
ಶಿರೂರು ಗುಡ್ಡ ದುರಂತದ ಬಗ್ಗೆ ಮಾಹಿತಿ ಪಡೆದಿರುವ ಅವರು ಅಲ್ಲಿನ ಸಂತ್ರಸ್ತರನ್ನು ಖುದ್ದು ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ. ಗುಡ್ಡ ಕುಸಿತದಿಂದ ಈವರೆಗೆ 8 ಶವ ದೊರೆತಿದ್ದು, ಇನ್ನೂ ಮೂವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಅವರ ಕುಟುಂಬದವರು ಸಹ ನೋವಿನಲ್ಲಿದ್ದಾರೆ. ಅವರನ್ನು ಸಂತೈಸುವುದಕ್ಕಾಗಿ ವೀರೇಂದ್ರ ಹೆಗ್ಗಡೆ ಅವರು ಬರುತ್ತಿದ್ದಾರೆ.
ಉಳುವರೆ ಗ್ರಾಮಕ್ಕೆ ಗ್ರಾಮವೇ ನಾಶವಾಗಿದ್ದು, 5 ಮನೆಯವರು ವಸತಿಗೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಮನೆ ಕಳೆದುಕೊಂಡವರಿಗೆ ಸಹ ವೀರೇಂದ್ರ ಹೆಗಡೆ ಅವರು ತಮ್ಮ ಟ್ರಸ್ಟ್ ಮೂಲಕ ನೆರವು ನೀಡುವ ಸಾಧ್ಯತೆಗಳಿವೆ. ಗುಡ್ಡ ಕುಸಿತದ ಮೊದಲ ದಿನದಿಂದಲೇ ಅವರು ಇಲ್ಲಿನ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಪಡೆದು, ಭೇಟಿ ನೀಡುವ ಇಚ್ಚೆ ವ್ಯಕ್ತಪಡಿಸಿದ್ದರು.





Discussion about this post