ಯಲ್ಲಾಪುರ: `ವಿಭಜನ ವಿಭಿಷಣ ಸ್ಮ್ರತಿ ದಿವಸ’ ಅಂಗವಾಗಿ ಬುಧವಾರ ಸಂಜೆ ಬಿಜೆಪಿಗರು (BJP) ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿದ್ದು, ನೂರಾರು ದೇಶಪ್ರೇಮಿಗಳು ಜೊತೆಯಾದರು.
ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಈ ಮೆರವಣಿಗೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ವಿಭಜನೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಿ ನಮನ ಸಲ್ಲಿಸಿದರು. ಪೊಲೀಸ್ ವಸತಿ ಗೃಹದ ಮಹಾಗಣಪತಿ ಸನ್ನಿಧಿ ಬಳಿಯಿಂದ ಮೆರವಣಿಗೆ ಸಂಚರಿಸಿತು. ಬಿಜೆಪಿ ಯುವ ಮೋರ್ಚಾ ಈ ಕಾರ್ಯಕ್ರಮವನ್ನು ಸಂಘಟಿಸಿದ್ದು, ಪ್ರಮುಖರಾದ ವೆಂಕಟ್ರಮಣ ಬೆಳ್ಳಿ ಕಾರ್ಯಕ್ರಮದ ಉದ್ದೇಶಗಳ ಕುರಿತು ಮಾತನಾಡಿದರು.
Discussion about this post