`ಪ್ರಕೃತಿ ಕೊಡುವ ಸೂಚನೆಗಳನ್ನು ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಬದುಕು ಸುಲಭ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಗೋಕರ್ಣದ ( Gokarna ) ಅಶೋಕೆ ಚಾತುರ್ಮಾಸದ ನಿಮಿತ್ತ ಭಾನುವಾರ ಪ್ರವಚನ ನೀಡಿದ ಅವರು `ಪ್ರಕೃತಿ ಕೊಡುವ ಸೂಚನೆಗಳನ್ನು ಪೂರ್ವಜರು ಕೃತಿರೂಪದಲ್ಲಿ ದಾಖಲಿಸಿದ್ದಾರೆ. ಆ ಅಪೂರ್ವ ಜ್ಞಾನ ಪರಂಪರೆ ಮುಂದುರೆಯಲು ಇದು ಸಹಕಾರಿಯಾಗಿದ್ದು, ಜ್ಯೋತಿಷ ಶಾಸ್ತ್ರವೆಂಬ ದೀಪದ ಮೂಲಕ ನಾವು ಬದುಕು ಅರ್ಥ ಮಾಡಿಕೊಳ್ಳಬಹುದು’ ಎಂದು ಹೇಳಿದರು.
`ಪ್ರಶ್ನೆ, ತಾಂಬೂಲ, ಜಾತಕ, ಶಕುನಶಾಸ್ತ್ರ ಹೀಗೆ ವಿವಿಧ ಪ್ರಕಾರಗಳಿಂದ ಕಾಲನ ಭಾಷೆಯನ್ನು ತಿಳಿಯಬಹುದು. ನಮ್ಮ ಬದುಕನ್ನು ಅರ್ಥ ಮಾಡಿಕೊಳ್ಳಲು ಪ್ರಕೃತಿ ನಮಗೆ ಹಲವು ಮಾರ್ಗಗಳನ್ನು ತೋರಿಸಿಕೊಟ್ಟಿದೆ’ ಎಂದವರು ಅಭಿಪ್ರಾಯಪಟ್ಟರು. `ಕಾಲ ನಮ್ಮೊಂದಿಗೆ ಮಾತನಾಡುತ್ತದೆ. ಜೌತಿಷದ ಮೂಲಕ ಕಾಲದ ಭಾಷೆಯನ್ನು ಅರ್ಥ ಮಾಡಿಕೊಳ್ಳಬಹುದು. ಖಗೋಳದ ಮೂಲಕ ನನ್ನ ಬದುಕನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಖಗೋಳದಲ್ಲಿ ನಮ್ಮ ಸ್ಥಾನವನ್ನು ನಾವು ತಿಳಿದರೆ ಕಾಲನ ಬಾಷೆ ಸುಲಭವಾಗಿ ಅರ್ಥವಾಗುತ್ತದೆ’ ಎಂದು ಹೇಳಿದರು.
Discussion about this post