ಅಕ್ಟೋಬರ್ 12ರ ಶನಿವಾರ ವಿಜಯ ದಶಮಿ ಅಂಗವಾಗಿ ಮಹಾರಾಷ್ಟ್ರ ನಾಗಪುರದಲ್ಲಿನ ದೀಕ್ಷಾ ಭೂಮಿಯಲ್ಲಿ ನಡೆಯವ ದಮ್ಮ ಪ್ರವರ್ತನ ಕಾರ್ಯಕ್ರಮಕ್ಕೆ ( Yathra ) ತೆರಳಲು ಇಚ್ಚಿಸುವವರಿಗೆ ಸಮಾಜ ಕಲ್ಯಾಣ ಇಲಾಖೆ ನೆರವು ನೀಡಲಿದೆ.
ಅಕ್ಟೋಬರ್ 10ರಿಂದ 14ವರೆಗೆ ಪ್ರತಿ ವರ್ಷದಂತೆ ಕರ್ನಾಟಕ ರಾಜ್ಯದಿಂದ ಡಾ ಬಿ.ಆರ್ ಅಂಬೇಡ್ಕರ್ ಅನುಯಾಯಿಗಳನ್ನು ನಾಗಪುರ ದೀಕ್ಷಾ ಭೂಮಿಗೆ ಯಾತ್ರೆ ಕೈಗೊಳ್ಳಲು ಸರ್ಕಾರ ಸಾರಿಗೆ ವ್ಯವಸ್ಥೆ ಮಾಡುತ್ತಿದೆ. ಇದರಲ್ಲಿ ಭಾಗವಹಿಸಲು ಆಸಕ್ತರಿರುವ ಅರ್ಹ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ವೆಬ್‌ಸೈಟ್: https://swdservices.karnataka.gov.in ಆನ್‌ಲೈನ್ ಮೂಲಕ ಅರ್ಜಿಯನ್ನು ಆ.31ರ ಒಳಗೆ ಅರ್ಜಿ ಸಲ್ಲಿಸಬಹುದು.
Discussion about this post