`ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ 25-30 ಲಕ್ಷ ರೂಪಾಯಿಗೆ ( Municipal elections ) ಹರಾಜಾಗಿದೆ’ ಎಂಬ ಅರ್ಥದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಅಲ್ಲಗಳೆದಿರುವ ಕಾರವಾರ ಶಾಸಕ ಸತೀಶ್ ಸೈಲ್ ದಾಖಲೆ ಇಲ್ಲದೇ ಆರೋಪ ಮಾಡಿದ ಕಾರಣ ರೂಪಾಲಿ ನಾಯ್ಕ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. S news ಡಿಜಿಟಲ್
ಬುಧವಾರ ಕಾರವಾರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ( Municipal elections ) ಚುನಾವಣಾ ಮತದಾನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಮಿಸಿದ್ದರು. ಆದರೆ, ಪೊಲೀಸರು ಅವರ ವಾಹನವನ್ನು ಒಳಗೆ ಬಿಡಲಿಲ್ಲ. ಈ ನಡುವೆ ಶಾಸಕ ಸತೀಶ್ ಸೈಲ್ ಆಗಮಿಸಿದ್ದು, ಅವರ ವಾಹನಕ್ಕೆ ಒಳ ಪ್ರವೇಶ ನೀಡಿದಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ತಕರಾರು ತೆಗೆದರು. ಈ ವೇಳೆ ಎರಡು ಪಕ್ಷದವರ ನಡುವೆ ಗಲಾಟೆ ನಡೆದಿದ್ದು, `ಕಾಂಗ್ರೆಸ್ಸಿಗರು ನಗರಸಭೆ ಸದಸ್ಯರನ್ನು ಖರೀದಿ ಮಾಡಿದ್ದು 25-30 ಲಕ್ಷ ರೂಪಾಯಿಗೆ ವ್ಯವಹಾರ ಕುದುರಿದೆ’ ಎಂದು ರೂಪಾಲಿ ನಾಯ್ಕ ಆರೋಪಿಸಿದರು.
ಮತದಾನ ಮಾಡಿ ಹೊರಬಂದ ಸತೀಶ್ ಸೈಲ್ `ಕೆಲ ಸದಸ್ಯರು ನಮ್ಮೊಂದಿಗೆ ಬಂದಿದ್ದು, ನಾವೇ ಬೇಡ ಎಂದು ಬಿಟ್ಟಿದ್ದೇವೆ’ ಎಂದು ಹೇಳಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ `ರಾಜು ತಾಂಡೇಲ್ ವಿಷಯದಲ್ಲಿ ಸಹ ರೂಪಾಲಿ ನಾಯ್ಕ ಹಗುರುವಾಗಿ ಮಾತನಾಡಿದ್ದರಿಂದ ದೂರು ನೀಡಿದ್ದೇವೆ’ ಎಂದರು. ಶೆಂಬು ಶೆಟ್ಟಿ ಹಾಗೂ ಮಾಧವ ನಾಯಕ ಮಾತನಾಡಿ `ರೂಪಾಲಿ ನಾಯ್ಕ ಶಾಸಕರಾಗಿದ್ದಾಗ ಸಹ ಈ ರೀತಿ ಹೇಳಿಕೆ ನೀಡಿದ್ದರು. ಶಾಸಕ ಸತೀಶ್ ಸೈಲ್ ವಿರುದ್ಧ ಕುತಂತ್ರ ನಡೆದಿದೆ’ ಎಂದು ದೂರಿದರು.
S news ಡಿಜಿಟಲ್
Discussion about this post