ಮದ್ದಲೆವಾದಕ, ಅರ್ಥದಾರಿಯಾಗಿ ಕಲಾ ಸೇವೆಯಲ್ಲಿ ಗುರುತಿಸಿಕೊಂಡಿರುವ ಗೋಡೆಪಾಲಿನ ಗಣಪತಿ ಗಾಂವ್ಕಾರ ಅವರಿಗೆ ಯಕ್ಷಕಲೆ ( Yakshagana ) ಎಂಬುದು ವಂಶಪರ0ಪರಾಗತವಾಗಿ ಬಂದ ಕೊಡುಗೆ. ಹೀಗಾಗಿ ಅವರ ಪುತ್ರಿ ಮಧುರಾ ಗಾಂವ್ಕಾರ ಸಹ ಇದನ್ನು ಮುಂದುವರೆಸಿದ್ದಾರೆ.
ಕಲೆ ಕುರಿತು ಅಪಾರ ಕಾಳಜಿ ಹೊಂದಿರುವ ಗಣಪತಿ ಗಾಂವ್ಕರ ಅವರು ಓದಿದ್ದು 7ನೇ ತರಗತಿ. ಆದರೆ, ಮದ್ದಲೆ ಹಾಗೂ ಮಾತಿನ ಚಾಕ್ಯಚಕ್ಯತೆಯಲ್ಲಿ ಯಾವ ವಿದ್ವಾಂಸರಿಗೂ ಅವರು ಕಡಿಮೆ ಇಲ್ಲ. ಯಲ್ಲಾಪುರ ತಾಲೂಕಿನ ತೇಲಂಗಾರ ಗ್ರಾಮದ ಗೋಡೆಪಾಲು ಅವರ ಸ್ವ ಕ್ಷೇತ್ರ. ಅಲ್ಲಿಯೇ ಕೃಷಿ ಜೊತೆ ಕಲಾ ಸೇವೆ ( Yakshagana ) ಮಾಡುತ್ತಾರೆ.
ಕಲಾಸಕ್ತಿ ಎಂಬುದು ರಕ್ತಗತವಾಗಿ ಬಂದ ಮನೆತನ. ಹೀಗಾಗಿ ಬಾಲ್ಯದಿಂದಲೂ ಯಕ್ಷಗಾನ ಕಲಿಕೆಯ ಬಗ್ಗೆ ಅಪಾರ ಹಂಬಲ. ಅದರಲ್ಲಿಯೂ ಮದ್ದಳೆಗಾರಿಕೆ ಕುರಿತು ಹೆಚ್ಚಿನ ಆಸಕ್ತಿ. ಹೀಗಾಗಿ ತಾರಗಾರ ಗೋವಿಂದಜ್ಜನಲ್ಲಿ ಮೊದಲು ಅಭ್ಯಾಸ ನಡೆಸಿದರು. ನಂತರ ಹೊಸ್ತೋಟ ಮಂಜುನಾಥ ಭಟ್ಟರು ಸಿರಸಿಯ ಗೋಳಿಯಲ್ಲಿ ನಡೆಸಿದ ಯಕ್ಷ ಶಿಬಿರ ಅವರ ಗಣಪತಿ ಭಟ್ಟರ ದಿಕ್ಕು ಬದಲಿಸಿತು. ಇಲ್ಲಿ ಮೂರು ತಿಂಗಳು ಅವರು ತಾಳಾಭ್ಯಾಸ ನಡೆಸಿದರು. ಉತ್ತಮ ಮದ್ದಳೆವಾದಕಾರಿ ಹೊರ ಹೊಮ್ಮಿದರು.
ಗುರುಗಳಾಗಿರುವ ಕಂಚಿಪಾಲ ರಾಮಣ್ಣನವರಲ್ಲಿ ಕೆಲವು ಕಾಲ ಮದ್ದಳೆಗಾರಿಕೆ ಅಭ್ಯಾಸ ಪಡೆದು, ಪ್ರಾಚಾರ್ಯ ನಾರ್ಣಪ್ಪ ಉಪ್ಪೂರು, ದುರ್ಗಪ್ಪ ಗುಡಿಗಾರರಲ್ಲಿ ತರಬೇತಿ ಪಡೆದರು. ಕೋಟಾ ಯಕ್ಷಗಾನ ಕೇಂದ್ರಕ್ಕೆ ಅವಕಾಶ ಸಿಕ್ಕಿದ್ದರಿಂದ ಅಲ್ಲಿಯೂ ಅನೇಕ ಅನುಭವಗಳಾದವು.
ಕೇಂದ್ರ ಶಿಕ್ಷಣದ ನಂತರ ಮೇಳಕ್ಕೆ ಸೇರಬೇಕು ಎಂಬ ಬಯಕೆ ಅವರಲ್ಲಿತ್ತು. ತಿರುಗಾಟದ ಅನುಭವ ಆಸಕ್ತಿ ಅಪಾರವಾಗಿತ್ತು. ಆದರೆ, ವೈಯಕ್ತಿಕ ಕಾರಣಗಳು ಅದಕ್ಕೆ ಅವಕಾಶ ಕೊಡಲಿಲ್ಲ. ಆದರೂ ಗಣಪತಿ ಗಾಂವ್ಕಾರ ಅವರು ನಿರಾಸೆ ಪಡಲಿಲ್ಲ.
ಇದೀಗ ಮದ್ದಳೆಗಾರಿಕೆ ಜೊತೆ ಅವಕಾಶವಾದಾಗ ತಾಳಮದ್ದಳೆಗಳಲ್ಲಿ ಅರ್ಥವನ್ನೂ ಹೇಳುತ್ತಾರೆ. ರಾಮನಿರ್ಯಾಣದ ಊರ್ಮಿಳೆಯ ಪಾತ್ರ ಅವರಿಗೆ ಹೇಳಿ ಮಾಡಿಸಿದ ಹಾಗಿರುತ್ತದೆ. ಅವರ ಅಣ್ಣಂದಿರಾದ ನಾಗಪ್ಪ ಗಾಂವ್ಕಾರ ಮತ್ತು ನಾರಾಯಣ ಗಾಂವ್ಕಾರ ಕೂಡ ಉತ್ತಮ ಅರ್ಥಧಾರಿಗಳಾಗಿದ್ದಾರೆ.
ಕರ್ನಾಟಕ ಕಲಾ ಸನ್ನಿಧಿ
Discussion about this post