`ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರೇ ಇಲ್ಲ’ ಎಂದು ಆರೋಪಿಸಿದ್ದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಸರ್ಕಾರಿ ಕಾರ್ಯಕ್ರಮದ ಉದ್ಘಾಟನೆಗೆ ( Vishwadarshana ) ತಮ್ಮ ಹೆಸರಿನ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದು, ಇದನ್ನು ಅರಿತು ಕೆಂಡಾಮ0ಡಲರಾದ ಶಾಸಕ ಶಿವರಾಮ ಹೆಬ್ಬಾರ್ ಆ ಕಾರ್ಯಕ್ರಮವನ್ನೇ ರದ್ಧು ಪಡಿಸಿದ್ದಾರೆ! S News ಡಿಜಿಟಲ್
ಆದರೆ, `ಈ ವಿಷಯ ತಮ್ಮ ಗಮನಕ್ಕೆ ಇರಲಿಲ್ಲ. ತಿಳಿದ ತಕ್ಷಣ ಶಾಸಕರ ಗಮನಕ್ಕೆ ತಂದು ಕಾರ್ಯಕ್ರಮ ರದ್ದುಪಡಿಸಿದ್ದೇವೆ’ ಎಂದು ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ. ಎಲ್ಲವೂ ಅಂದುಕೊ0ಡ0ತೆ ನಡೆದಿದ್ದರೆ ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ (Vishwadarshana) ಅಗಸ್ಟ 28ರಂದು ತಾಲೂಕಾ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ನಡೆಯಬೇಕಿತ್ತು. ಇದಕ್ಕಾಗಿ ಕರ್ನಾಟಕ ಸರ್ಕಾರದ ಲಾಂಚನ ಬಳಸಿ ಪದವಿಪೂರ್ವ ಉಪನಿರ್ದೇಶಕರ ಹೆಸರಿನಲ್ಲಿ ಆಮಂತ್ರಣ ಪತ್ರಿಕೆ ಸಹ ಸಿದ್ಧವಾಗಿತ್ತು. ಆದರೆ, ಅದರಲ್ಲಿ ನಿಯಮಾನುಸಾರ ಪ್ರಕಟವಾಗಬೇಕಿದ್ದ ಶಾಸಕರ ಹೆಸರೇ ಇರಲಿಲ್ಲ! ಶಾಸಕರ ಹೆಸರು ಬರಬೇಕಿದ್ದ ಜಾಗದಲ್ಲಿ ಬಿಜೆಪಿಯ ವಕ್ತಾರರೂ ಆಗಿರುವ ವಿಶ್ವದರ್ಶನ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೆಸರಿದ್ದು, ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಬೇಕಿದ್ದ ಇಲಾಖೆಯ ಉಪನಿರ್ದೇಶಕರ ಹೆಸರು ಸಹ ಆಮಂತ್ರಣದಲ್ಲಿರಲಿಲ್ಲ.

ಒಟ್ಟಾರೆಯಾಗಿ ಸರ್ಕಾರಿ ಹೆಸರಿನಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಂತೆ ಈ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗಿದ್ದು, ಕೆಲವೇ ಕೆಲವು ಮಾಧ್ಯಮದವರಿಗೆ ಈ ಆಮಂತ್ರಣ ಪತ್ರಿಕೆಯನ್ನು ಸಂಸ್ಥೆಯವರು ತಲುಪಿಸಿದ್ದರು. ಆದರೆ, ನಿಯಮಾನುಸಾರ ಪ ಪೂ ಕಾಲೇಜಿನ ಉಪನಿರ್ದೇಶಕರಿಗೆ ಆಮಂತ್ರಣ ನೀಡಿರಲಿಲ್ಲ. ತನ್ನ ಹೆಸರು ಇಲ್ಲದಿರುವುದು ಹಾಗೂ ತನಗೆ ಆಮಂತ್ರಣ ಇಲ್ಲದಿರುವುದನ್ನು ಅರಿತ ಶಿವರಾಮ ಹೆಬ್ಬಾರ್ ಇಡೀ ಕಾರ್ಯಕ್ರಮವನ್ನು ರದ್ದು ಮಾಡಿಸಿದ್ದಾರೆ. `ಕೊನೆಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದ್ದು ಗಮನಕ್ಕೆ ಬಂದಿದೆ. ಶಿಕ್ಷಣ ಸಂಸ್ಥೆಯವರು ಆ ರೀತಿ ಮಾಡಬಾರದಿತ್ತು. ಅವರಿಗೆ ಎಚ್ಚರಿಕೆ ನೀಡಿದ್ದೇವೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಪ್ಪ ತಿಳಿಸಿದರು.
ಸ್ಪಷ್ಟನೆ:
`ಶಾಸಕರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಇಲ್ಲದ ಕಾರಣ ನಾನೇ ಶಾಸಕರಿಗೆ ತಿಳಿಸಿ ಕಾರ್ಯಕ್ರಮ ರದ್ದು ಮಾಡಿದ್ದು, ಇನ್ನೊಂದು ದಿನಾಂಕದoದು ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ನಮ್ಮ ತಪ್ಪು ಏನೂ ಇಲ್ಲ’ ಎಂದು ಹರಿಪ್ರಕಾಶ ಕೋಣೆಮನೆ ತಿಳಿಸಿದರು. ಸಂಸ್ಥೆಯವರು ಫೋನ್ ಮೂಲಕ ಆದ ಪ್ರಮಾದದ ಬಗ್ಗೆ ತಿಳಿಸಿದ್ದು, ಇನ್ಮುಂದೆ ಈ ರೀತಿ ಆಗದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
S News ಡಿಜಿಟಲ್




Discussion about this post