ವಿವಿಧ ಚಲನಚಿತ್ರದಲ್ಲಿ ( Cinema ) ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಂಕೋಲಾ ಮಂಜುಗುಣಿಯ ಯಶವಂತ ರಾಯ್ಕರ್ ಇದೀಗ ವಿಭಿನ್ನ ಕಥೆಯನ್ನು ಒಳಗೊಂಡ ಕಿರುಚಿತ್ರ ನಿರ್ಮಿಸುತ್ತಿದ್ದು, ಅಂತರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆಯಲ್ಲಿ ಅದನ್ನು ಪ್ರದರ್ಶಿಸುವ ಗುರಿ ಹೊಂದಿದ್ದಾರೆ.
ವರ್ಷಾ0ತ್ಯಕ್ಕೆ ಜೈಪುರದಲ್ಲಿ ಕಿರುಚಿತ್ರ ಸ್ಪರ್ಧೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಯಶವಂತ ರಾಯ್ಕರ್ ಚಿತ್ರ ನಿರ್ಮಾಣಕ್ಕೆ ಮುಹೂರ್ತ ನಿಗಧಿ ಮಾಡಿದ್ದಾರೆ. ಬೆಂಗಳೂರಿನ ಗಿರಿನಗರ ಗಣೇಶ ಮಂದಿರದಲ್ಲಿ ಕಿರುಚಿತ್ರ ( Cinema ) ನಿರ್ಮಾಣಕ್ಕೆ ಆಕ್ಷನ್ ಕಟ್ ಹೇಳಲಾಯಿತು.
ಈ ಹಿಂದೆ ಜಲಪಾತ, ವೈಶಂಪಾಯನ ತೀರ ಎಂಬ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದ ಶಶಿರ ಶೃಂಗೇರಿ ಈ ಚಿತ್ರಕ್ಕೂ ಛಾಯಾಗ್ರಾಹಕರಾಗಿದ್ದಾರೆ. ಜಲಪಾತ, ವೈಶಂಪಾಯನ ತೀರ ಚಿತ್ರದ ಸಂಕಲನ ಮಾಡಿದ್ದ ಅವಿನಾಶ ಶೃಂಗೇರಿ ಈ ಚಿತ್ರದಲ್ಲಿಯೂ ಸಂಕಲನ ಕಾರ್ಯ ನಿರ್ವಹಿಸಲಿದ್ದಾರೆ. ಬಾಲ ಕಲಾವಿದರಾದ ಅಗಸ್ತ್ಯ ಪೃಥ್ವಿರಾಜ್
ಹಾಗೂ ಆಶೀಶ್‌ಕುಮಾರ ಮುಖ್ಯಪಾತ್ರದಲ್ಲಿರಲಿದ್ದು, ಪೃಥ್ವಿರಾಜ್
ಕೊಪ್ಪ ಪಾತ್ರ ನಿಭಾಯಿಸಿದ್ದಾರೆ.
ಸಹಾಯಕ ನಿರ್ದೇಶಕರಾಗಿ ಗುರುರಾಜ ಮಾದವರಾವ್ ಹಾಗೂ ಗೌರೀಶಂಕರ್ ಕೆಲಸ ಮಾಡುತ್ತಿದ್ದಾರೆ. `ಸಮಾಜಮುಖಿ ಹಿನ್ನಲೆಯುಳ್ಳ ಮಹಾನ್ ವ್ಯಕ್ತಿಯೊಬ್ಬರ ಜೊತೆ ಮಾತುಕಥೆ ನಡೆದಿದ್ದು, ಅವರು ಪಾತ್ರ ನಿಭಾಯಿಸುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ನಿರ್ಮಾಪಕರು ಸಿಕ್ಕರೆ ಕರಾವಳಿ ತೀರದಲ್ಲಿ ದೊಡ್ಡ ಸಿನಿಮಾ ಮಾಡುವ ಕನಸು ನಮ್ಮದು’ ಎಂದು ಯಶವಂತ ರಾಯ್ಕರ್ ವಿವರಿಸಿದರು.
ಯಶವಂತ ರಾಯ್ಕರ್ ಅವರು ತಮ್ಮ ಜಾಲತಾಣ ಪುಟದಲ್ಲಿ ಸಿನಿಮಾ ಕುರಿತು ಬರೆದುಕೊಂಡಿದ್ದು, ಅದರ ಲಿಂಕ್ ಇಲ್ಲಿದೆ.
https://www.instagram.com/p/C-7oZtcBufa/?igsh=MWd5ZHQ1NXA5aTY1cA==
Discussion about this post