ಕುಲ ಕಸುಬು ಮೀನುಗಾರಿಕೆ ಜೊತೆ ಈಜುವುದನ್ನು ಕಲಿತ ಕಾರಣ ಕುಮಟಾದ ಇಬ್ಬರು ಮೀನುಗಾರರು ಗುರುವಾರ ಜೀವ ಉಳಿಸಿಕೊಂಡಿದ್ದಾರೆ. ಈಜು ಬಾರದೇ ಇದ್ದಿದ್ದರೆ ಅವರೂ ಬದುಕಿರುತ್ತಿರಲಿಲ್ಲ!
ಅಘನಾಶಿನಿ ಅಳಿವೆ ಅಂಚಿನಲ್ಲಿ ಗುರುವಾರ ಬೆಳಗ್ಗೆ ವಿನೋದ ಅಂಬಿಗ, ಸುರೇಶ ಅಂಬಿಗ ಹಾಗೂ ಉಮೇಶ ಅಂಬಿಗ ಎಂಬ ಸಹೋದರರು ಮೀನುಗಾರಿಕೆಗೆ ತೆರಳಿದ್ದರು. ನದಿ ಸಮುದ್ರ ಸೇರುವ ಪ್ರದೇಶದಲ್ಲಿ ಸಮುದ್ರದ ಅಬ್ಬರ ಜೋರಾಗಿದ್ದು, ಅಲೆಗಳ ರಭಸಕ್ಕೆ ಅವರು ಸಂಚರಿಸುತ್ತಿದ್ದ ದೋಣಿ ಮುಗುಚಿತು. ತಕ್ಷಣ ಈಜಲು ಶುರು ಮಾಡಿದ ಉಮೇಶ ಅಂಬಿಗ ಹಾಗೂ ಸುರೇಶ ಅಂಬಿಗ ದಡ ಸೇರಿದರು. ದೋಣಿಯನ್ನು ಹಿಡಿದುಕೊಂಡು ಅವರು ಆಯಾಸದಿಂದ ದೂರವಾದರು.
ಆದರೆ, ದೋಣಿ ಮುಗುಚಿದಾಗ ವಿನೋದ ಅಂಬಿಗ ನಾಪತ್ತೆಯಾದರು. ದೋಣಿ ಅಡಿಭಾಗದಲ್ಲಿ ಅವರು ಬಿದ್ದು ಪೆಟ್ಟು ಮಾಡಿಕೊಂಡಿರುವ ಅನುಮಾನಗಳಿವೆ. ಹೀಗಾಗಿ ಕೈ ಕಾಲು ಆಡದೇ ಅವರು ಕಣ್ಮರೆಯಾಗಿದ್ದು, ಈ ಮೂವರು ಸಹೋದರರು ಬಾಲ್ಯದಲ್ಲಿ ಒಟ್ಟಿಗೆ ಈಜು ಕಲಿತಿದ್ದರೂ ತುರ್ತು ಸನ್ನಿವೇಶದಲ್ಲಿ ತಮ್ಮ ತಮ್ಮ ಜೀವವನ್ನು ಕಾಪಾಡಿಕೊಂಡರು. ಜೊತೆಗೆ ಬದುಕಿಗೆ ಆಸರೆಯಾಗಿದ್ದ ದೋಣಿಯನ್ನು ದಡಕ್ಕೆ ತಂದರು. ಎಷ್ಟೇ ಹುಡುಕಾಡಿದರೂ ವಿನೋದ ಅಂಬಿಗ ಕಾಣಿಸಲಿಲ್ಲ.
ತುರ್ತು ಸನ್ನಿವೇಶಗಳನ್ನು ಎದುರಿಸಲು ಈಜು ಅನಿವಾರ್ಯ. ಬಾಲ್ಯದಲ್ಲಿಯೇ ಈಜು ಕಲಿಯುವುದು ಉತ್ತಮ
ದೋಣಿ ದುರಂತದ ವಿಡಿಯೋ ಇಲ್ಲಿ ನೋಡಿ..