6
  • Latest

ಚೇತನಾ ಕಾಲೇಜಿನಲ್ಲಿ ಹೆಗಡೆ ಸ್ಮರಣೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚೇತನಾ ಕಾಲೇಜಿನಲ್ಲಿ ಹೆಗಡೆ ಸ್ಮರಣೆ

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: ರಾಮಕೃಷ್ಣ ಹೆಗಡೆ ಚಿರಂತನದಿAದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಜನ್ಮದಿನೋತ್ಸವದ ಅಂಗವಾಗಿ ಚೇತನಾ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆದ `ಹೆಗಡೆ ಮತ್ತು ಜಾತ್ಯಾತೀತತೆ’ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಯಲ್ಲಾಪುರದ ಶ್ರೇಯಾ ಅವರ ಕುಂಚದಲ್ಲಿ ಮೂಡಿಬಂದ ಹೆಗಡೆಯವರ ಭಾವಚಿತ್ರ ಗಮನಸೆಳೆಯಿತು.

ADVERTISEMENT

ನಂತರ ಖ್ಯಾತ ಸಾಹಿತಿ ಮಹಾಬಲಮೂರ್ತಿ ಕೊಡ್ಲಕೆರೆ ಮಾತನಾಡಿ `ಸೋಲನ್ನು ಗೆಲುವಿನ ಶಕ್ತಿಯನ್ನಾಗಿ ಪರಿವರ್ತಿಸುವ ಶಕ್ತಿ ರಾಮಕೃಷ್ಣ ಹೆಗಡೆಯವರಿಗಿತ್ತು. ಹೆಗಡೆಯವರು ರಾಜಕೀಯದಲ್ಲಿ ಪ್ರಭಾವಿಗಳಾಗಿದ್ದಾಗ ವಿವಿಧ ರಂಗದಲ್ಲಿದ್ದ, ವಿವಿಧ ಧರ್ಮಗಳ, ಜಾತಿಯ ಮತ್ತು ವೈಚಾರಿಕತೆಯ ಪ್ರತಿಭೆಗಳನ್ನು ರಾಜಕೀಯಕ್ಕೆ ಪರಿಚಯಿಸಿದವರು. ಹೆಗಡೆಯವರ ವೈಚಾರಿಕತೆ, ಆಡಳಿತ ವೈಖರಿ ಇಂದಿಗೂ ಜನಮಾನಸದಲ್ಲಿ ಎಷ್ಟು ಪ್ರಭಾವ ಬೀರಿದೆ ಎಂದರೆ ಇಂದಿಗೂ ರಾಜಕೀಯ ವಿಶ್ಲೇಷಣೆಗಳನ್ನು ಹೆಗಡೆಯವರ ವೈಚಾರಿಕತೆಯೊಂದಿಗೆ ತುಲನೆ ಮಾಡಿ ನೋಡಲಾಗಿತ್ತದೆ. ಹೆಗಡೆಯವರು ಜಾತ್ಯಾತೀತತೆಯನ್ನು ತಮ್ಮ ಅಂತರAಗದ ಶಕ್ತಿಯನ್ನಾಗಿರಿಸಿದ್ದರು’ ಎಂದು ಸ್ಮರಿಸಿದರು.

ಈ ವೇಳೆ ಹೆಗಡೆಯವರ ಅಭಿಮಾನಿಗಳಾದ ಜಿ.ಟಿ ಹೆಗಡೆ ತಟ್ಟಿಸರ ಮತ್ತು ದೇವಿದಾಸ ಶೇಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಶಶಿಭೂಷಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

Advertisement. Scroll to continue reading.

S News Digitel

Advertisement. Scroll to continue reading.

ರೇಡಿಯೋ ಮಹತ್ವ ಸಾರಿದ ಯಕ್ಷಗಾನ ಅರ್ಥದಾರಿ

ಯಲ್ಲಾಪುರ: `ರೇಡಿಯೋ ಕೇಳುಗರ ಸಂಖ್ಯೆ ಈಗಲು ಕಡಿಮೆ ಆಗಿಲ್ಲ ಎನ್ನುವುದಕ್ಕೆ ಕೇಂದ್ರ ಸರ್ಕಾರ ಹೊಸ ಆಕಾಶವಾಣಿ ಕೇಂದ್ರಗಳ ಸ್ಥಾಪನೆಗೆ ಒಪ್ಪಿಗೆ ನೀಡಿರುವುದು ಒಂದು ಉದಾಹರಣೆ. ಜನ ಜೀವನಕ್ಕೆ ಪ್ರಸ್ತುತ ವಿಷಯಗಳನ್ನು ನೀಡಿದಾಗ ಅದನ್ನು ಕೇಳುಗರು ಖುಷಿಯಿಂದ ಸ್ವೀಕರಿಸುತ್ತಾರೆ’ ಎಂದು ಆಕಾಶವಾಣಿ ನಿವೃತ್ತ ಅಧಿಕಾರಿಯೂ ಆಗಿರುವ ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆ ಕೆರೆಹೊಂಡ ಹೇಳಿದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ `ರೇಡಿಯೋ: ಅಂದು ಇಂದು- ಮುಂದು’ ವಿಷಯವಾಗಿ ಮಾತನಾಡಿದ ಅವರು `ಒಂದು ವಿಷಯವನ್ನು ಕೇವಲ ಮಾಹಿತಿಯಾಗಿಸದೇ ಸಂವೇದನೆಯಾಗಿ ರೂಪಿಸುವ ಸಾಮರ್ಥ್ಯ ರೇಡಿಯೋ ಮಾಧ್ಯಮಕ್ಕಿದೆ. ರೇಡಿಯೋದಲ್ಲಿ ಮಾತು, ರೂಪಕ ಮತ್ತು ಸಂಗೀತಗಳ ಮುಖಾಂತರ ಕೇಳುಗರನ್ನು ಪರಿಣಾಮಕಾರಿಯಾಗಿ ತಲುಪಬಹುದು’ ಎಂದರು. `ಶೈಕ್ಷಣಿಕ, ಸಾಮುದಾಯಿಕ ವಿಚಾರಗಳ ಪ್ರಸಾರಕ್ಕೆ ರೆಡಿಯೋ ಉತ್ತಮ ವೇದಿಕೆ’ ಎಂದರು.
ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ, ಮಿಡಿಯಾ ಸ್ಕೂಲ್ ಪ್ರಾಚಾರ್ಯ ನಾಗರಾಜ ಇಳೆಗುಂಡಿ ಇದ್ದರು. ಶೋಭಾ ಗೌಡ ಮತ್ತು ವಿದ್ಯಾ ಶೆಟ್ಟನಗೌಡ್ರ ಪ್ರಾರ್ಥಿಸಿದರು. ಮೇಘನಾ ಆಚಾರಿ ನಿರ್ವಹಿಸಿದರು. ನಾಗರಾಜ ಪಟಗಾರ ವಂದಿಸಿದರು.

S News Digitel

ಬ್ಯಾಂಕಿನಲ್ಲಿ ಹಲವು ಲೋಪ: ಗ್ರಾಹಕರ ಬೇಸರ

ದಾಂಡೇಲಿ: ನಗರದ SBI ಬ್ಯಾಂಕಿನ ಎಟಿಎಂ ಕೇಂದ್ರಗಳು ಸ್ಥಗಿತಗೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕೂಡಲೇ ಸರಿಪಡಿಸುವಂತೆ ಕರ್ನಾಟಕ ಅಹಿಂದ ರಕ್ಷಣಾ ಸಮಿತಿಯು ನಗರದ ಎಸ್.ಬಿ.ಐ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ಸಮಿತಿಯ ತಾಲೂಕು ಅಧ್ಯಕ್ಷರಾದ ಚಂದ್ರು ದೇವದಾನಂ ಆರ್ಯ ಮನವಿ ಸಲ್ಲಿಸಿದರು.
ದಾಂಡೇಲಿ ನಗರದಲ್ಲಿ SBI ಬ್ಯಾಂಕಿನ ಮೂರು ಎಟಿಎಂ ಕೇಂದ್ರಗಳಿದ್ದು, ಇದರಲ್ಲಿ ನಗರದ ಸಿವಿಲ್ ನ್ಯಾಯಾಲಯದ ಹತ್ತಿರವಿರುವ ಮತ್ತು ಕಾಗದ ಕಾರ್ಖಾನೆಯ ಬಂಗೂರನಗರದಲ್ಲಿರುವ ಎಟಿಎಂ ಕೇಂದ್ರಗಳು ಸ್ಥಗಿತಗೊಂಡಿದೆ. ಇದರಿಂದ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮತ್ತು ಬ್ಯಾಂಕಿಗೆ ರಜೆ ಇರುವ ಸಂದರ್ಭದಲ್ಲಿ ತುರ್ತು ಹಣ ಬೇಕಾದಾಗ ಸಾಕಷ್ಟು ತೊಂದರೆಯಾಗುತ್ತಿದೆ. ಪ್ರವಾಸೋದ್ಯಮ ನಗರವಾಗಿರುವ ದಾಂಡೇಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಪ್ರವಾಸಿಗರಿಗೆ ಸಮಸ್ಯೆ ಹೆಚ್ಚಿದೆ ಎಂದವರು ವಿವರಿಸಿದರು.

S News Digitel

 

Previous Post

ಆಸಿಡ್ ತುಂಬಿದ ಟ್ಯಾಂಕರ್ ಲಗಾಟಿ: ಜನ ಜಾಗೃತಿಯಿಂದ ಉಳಿಯಿತು ಜನರ ಜೀವ!

Next Post

ಸೇವೆ ಜೊತೆ ಸಂಬಳ: ಇಡಗುಂಜಿ ದೇಗುಲದಲ್ಲಿ ಹಲವರಿಗೆ ಉದ್ಯೋಗ!

Next Post

ಸೇವೆ ಜೊತೆ ಸಂಬಳ: ಇಡಗುಂಜಿ ದೇಗುಲದಲ್ಲಿ ಹಲವರಿಗೆ ಉದ್ಯೋಗ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ