ಜೊಯಿಡಾ: ವಿವಿಧ ಪತ್ರಿಕೆಗಳ ಎಜನ್ಸಿ ಪಡೆದು ಮನೆ ಮನೆಗೆ ಪೆಪರ್ ಹಂಚುವ ಕೆಲಸ ಮಾಡುವ ಅಶೋಕ್ ಮಹಾಬಲೇಶ್ವರ ಪೈ (66) ಜೂಜಾಟ ನಡೆಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಸೆ 3ರಂದು ರಾಮನಗರದ ಮಾರ್ಕೇಟ್ ಏರಿಯಾದಲ್ಲಿ ಓಸಿ ಆಡಿಸುತ್ತಿದ್ದಾಗ ಪಿಎಸ್‌ಐ ಬಸವರಾಜ ಮಬನೂರು ದಾಳಿ ನಡೆಸಿದರು. ಆಗ ಓಸಿ ಆಟಕ್ಕೆ ಬಳಸಿದ ಚೀಟಿ ಹಾಗೂ ಬಾಲ್‌ಪೆನ್ ದೊರೆತಿದೆ. ಜೊತೆಗೆ ಅಶೋಕ್ ಅವರ ಬಳಿ ಜನರಿಂದ ಸಂಗ್ರಹಿಸಿದ 770ರೂ ದೊರೆತಿದೆ. ಅಶೋಕ್ ಪೈ ಕಮಿಷನ್ ಪಡೆದು ಈ ಆಟ ನಡೆಸುತ್ತಿದ್ದು, ಸಂಗ್ರಹವಾದ ಹಣವನ್ನು ಗೋವಾ ಪೋಂಡಾದ ಅಂಬು ಮೋಹನ ನಾಯಕ ಎಂಬಾತರಿಗೆ ನೀಡುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆ ಈ ಇಬ್ಬರ ಮೇಲೆಯೂ ಪೊಲೀಸ್ ಪ್ರಕರಣ ದಾಖಲಾಗಿದೆ.