`ಉತ್ತರ ಕನ್ನಡ ಜಿಲ್ಲೆಯಲ್ಲಿ ರೈತರ ಜಮೀನು ಅಕ್ರಮವಾಗಿ ಬೇರೆಯವರ ಪಾಲಾಗುವುದನ್ನು ತಡೆಯಲು ಎಲ್ಲರೂ ತಮ್ಮ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಹೇಳಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳ ಬಳಿ ಆಧಾರ್ ಹಾಗೂ ಅದಕ್ಕೆ ನೀಡಲಾದ ಮೊಬೈಲ್ ನಂ ತೆಗೆದುಕೊಂಡು ಹೋದಲ್ಲಿ ಉಚಿತವಾಗಿ ಈ ಪ್ರಕ್ರಿಯೆ ಮಾಡಿಕೊಡಲಿದ್ದಾರೆ.
`ಜಿಲ್ಲೆಯಲ್ಲಿ ಜಮೀನು ಹೊಂದಿ ಬೇರೆ ರಾಜ್ಯ ಅಥವಾ ವಿದೇಶದಲ್ಲಿ ವಾಸವಿದ್ದ ಭೂ ಮಾಲಿಕರು ಹಬ್ಬದ ನಿಮಿತ್ತ ಊರಿಗೆ ಮರಳುತ್ತಿದ್ದು, ಆಧಾರ್ ಜೋಡಣೆಗೆ ಇದು ಸಕಾಲ. ಈ ಕಾರ್ಯವು ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರವೇ ನಡೆಯುತ್ತಿದ್ದು ಈವರೆಗೆ ಆಧಾರ ಜೋಡಣೆ ಮಾಡದಿರುವ ಭೂ ಮಾಲಿಕರು ಮುಂದಿನ ದಿನಗಳಲ್ಲಿ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುವ ಸಾಧ್ಯತೆಗಳಿರುವುದರಿಂದ ಈ ಕೆಲಸ ತಪ್ಪಿಸಬೇಡಿ’ ಎಂದವರು ಹೇಳಿದ್ದಾರೆ.