ಭಟ್ಕಳ: ಮುರುಡೇಶ್ವರ ಗುಮ್ಮನಹಕ್ಲುವಿನ ರಾಘವೇಂದ್ರ ಶ್ರೀನಿವಾಸ ಬಾಕಡ (39) ಎಂಬಾತ `ಅಡುಗೆ ಸರಿಯಾಗಿಲ್ಲ’ ಎಂಬ ಕಾರಣಕ್ಕೆ ಮನೆಯವರಿಗೆ ಉಗುರಿನಿಂದ ಪರಚಿದ್ದು, ಇದನ್ನು ಪ್ರಶ್ನಿಸಿದ ಸಹೋದರನ ಮೇಲೆ ಕತ್ತಿಯಿಂದ ಹೊಡೆದಿದ್ದಾನೆ.
ಅಗಸ್ಟ 7ರಂದು ರಾತ್ರಿ ವಿಪರೀತ ಸರಾಯಿ ಕುಡಿದು ಮನೆಗೆ ಬಂದ ರಾಘವೇಂದ್ರನಿಗೆ ಮನೆಯವರು ಊಟ ಬಡಿಸಿದ್ದು, ಅದು ಆತನಿಗೆ ಸರಿ ಹೊಂದಿಲ್ಲ. ಇದಕ್ಕಾಗಿ ನಡುರಾತ್ರಿ ಆತ ರಂಪಾಟ ಶುರು ಮಾಡಿ ಅಡುಗೆ ಮಾಡಿದವರಿಗೆ ಬೈದಿದ್ದಾನೆ. ಕಳೆದ ಒಂದು ತಿಂಗಳಿನಿoದ ರಾಘವೇಂದ್ರ ಮದ್ಯ ಸೇವನೆ ಶುರು ಮಾಡಿದ್ದು, ಕೂಲಿ ಕೆಲಸದ ಹಣವನ್ನು ಚಟಕ್ಕೆ ಬಳಸುತ್ತಿರುವ ಬಗ್ಗೆ ಆತನ ಅಣ್ಣ ಕುಮಾರ ಶ್ರೀನಿವಾಸ ಬಾಕಡ ಪ್ರಶ್ನಿಸಿದ್ದಾನೆ. ಜೊತೆಗೆ `ಇದೀಗ ಗಲಾಟೆ ಮಾಡಬೇಡ’ ಎಂದಿದ್ದಾನೆ. ಇದರಿಂದ ಸಿಟ್ಟಾದ ರಾಘವೇಂದ್ರ ತನ್ನ ಸ್ವಂತ ಅಣ್ಣನಿಗೆ ಸೂ** ಮಗನೆ ಎಂದು ಬೈದಿದ್ದು ಅಲ್ಲಿಯೇ ಇದ್ದ ಕತ್ತಿ ತೆಗೆದುಕೊಂಡು ತಲೆ ಮೇಲೆ ಕುಟ್ಟಿದ್ದಾನೆ.
ಕತ್ತಿಯಿಂದ ಹೊಡೆದ ಪರಿಣಾಮ ಶ್ರೀನಿವಾಸ ತಲೆಗೆ ಪೆಟ್ಟಾಗಿ ರಕ್ತ ಬಂದಿದೆ. ಇದಾದ ನಂತರ ರಾಘವೇಂದ್ರ `ನಿಮ್ಮನ್ನೆಲ್ಲ ಜೀವಸಹಿತ ಉಳಿಸುವುದಿಲ್ಲ’ ಎಂದು ಜೀವ ಬೆದರಿಕೆ ಒಡ್ಡಿದ್ದು, ತಮ್ಮನ ರಂಪಾಟದ ವಿರುದ್ಧ ಶ್ರೀನಿವಾಸ ಪೊಲೀಸ್ ದೂರು ನೀಡಿದ್ದಾರೆ.



