ಕಾರವಾರ: ಯಲ್ಲಾಪುರದ ದುರ್ಗಾ ಎಲೆಕ್ಟ್ರಿಕಲ್ಸ್ ಕೆಲಸ ಮಾಡುತ್ತಿದ್ದ ಅಲೆಸಿಯನ್ ಮರಿಯಾನ ಸಿದ್ದಿ ಎಂಬಾತರು ವಿದ್ಯುತ್ ಕಂಬದಿoದ ಬಿದ್ದು ಕೈ-ಕಾಲು ಮುರಿದಿಕೊಂಡಿದ್ದಾರೆ. ಒಂದುವರೆ ತಿಂಗಳ ನಂತರ ಅಲೆಸಿಯನ್ ಸಿದ್ದಿ ಅವರ ತಾಯಿ ಮೇರಿ ಪೊಲೀಸ್ ದೂರು ನೀಡಿದ್ದಾರೆ.
ದುರ್ಗಾ ಎಲೆಕ್ಟ್ರಿಕಲ್ಸ್ ಗೋಪಾಲಕೃಷ್ಣ ಕರುಮನೆ ಎಂಬಾತರಿಗೆ ಸೇರಿದ್ದಾಗಿದ್ದು, ಅವರು ವಿದ್ಯುತ್ ಗುತ್ತಿಗೆದಾರರಾಗಿದ್ದಾರೆ. ಅಗಸ್ಟ 1ರಂದು ಕಾರವಾರದ ಕದ್ರಾ ಬಳಿಯ ಬೈರೆಯಲ್ಲಿ ವಿದ್ಯುತ್ ಕಂಬ ನಿಲ್ಲಿಸಿದ ನಂತರ ಅದಕ್ಕೆ ತಂತಿ ಎಳೆಯಬೇಕಿತ್ತು. ತಂತಿ ಎಳೆಯುವುದಕ್ಕಾಗಿ ಕಂಬ ಏರಿದ ಅಲೆಸಿಯನ್ ಮರಿಯಾನ ಸಿದ್ದಿ ಕಂಬದ ಮೇಲಿನಿಂದ ಕೆಳಗೆ ಬಿದ್ದಿದ್ದು, ಮರವೊಂದಕ್ಕೆ ಸಿಲುಕಿಕೊಂಡಿದ್ದರು. ಮೇಲಿನಿಂದ ಬಿದ್ದ ರಭಸಕ್ಕೆ ಅವರ ಎಡಗಾಲಿನ ಮೂಳೆ ಹಾಗೂ ಎಡ ಕೈ ಮುರಿತಗೊಂಡಿದೆ. ಮೂಗಿನ ಬಳಿಯೂ ಗಾಯವಾಗಿದೆ. ತಕ್ಷಣ ಅಲ್ಲಿದ್ದ ಇತರರು ಅಲೆಸಿಯನ್ ಮರಿಯಾನ ಸಿದ್ದಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು.
ಒಂದುವರೆ ತಿಂಗಳ ನಂತರ ಇದೀಗ ಅಲೆಸಿಯನ್ ಮರಿಯಾನ ಸಿದ್ದಿ ಅವರ ತಾಯಿ ಮೇರಿ ಮರಿಯಾನ ಸಿದ್ದಿ ದುರ್ಗಾ ಎಲೆಕ್ಟ್ರಿಕಲ್ಸ್’ನ ಮಾಲಕ ಗೋಪಾಲಕೃಷ್ಣ ಕರುಮನೆ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. `ತನ್ನ ಮಗನಿಗೆ ಸುರಕ್ಷತಾ ಸಾಮಗ್ರಿ ನೋಡದೇ ಕಂಬದ ಮೇಲೆ ಏರಿಸಿದ ಕಾರಣ ಈ ಅಪಾಯ ನಡೆದಿದೆ’ ಎಂಬುದು ಮೇರಿ ಅವರ ದೂರು. ಸಂಬoಧಿಕರ ಜೊತೆ ಚರ್ಚಿಸಿ ದೂರು ನೀಡಲು ತಡವಾಯಿತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.