ಕುಮಟಾ ಮೀನು ಮಾರುಕಟ್ಟೆ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವಿಧವೆಗೆ ಅದೇ ಶಾಲೆಯ ವಾರ್ಡನ್ ಕಾಟ ಕೊಡುತ್ತಿದ್ದು, ಈ ಬಗ್ಗೆ ದೂರು ನೀಡಿದ ಕಾರಣ ಆಕೆ ಕೆಲಸ ಕಳೆದುಕೊಂಡಿದ್ದಾಳೆ!
ಕಳೆದ ಏಳು ವರ್ಷಗಳಿಂದ ಮಹಿಳೆ ಆ ಶಾಲೆಯಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುತ್ತಿದ್ದಾರೆ. ಆ ಶಾಲೆಯಲ್ಲಿ ಶಂಕರ ಎಸ್ ಪೊಳ್ ಎಂಬಾತ ವಾರ್ಡನ್ ಆಗಿದ್ದು, ಮೊದಲಿನಿಂದಲೂ ಆತನ ಕಾಟ ಸಹಿಸಿಕೊಂಡಿದ್ದ ಅವರು ಆತ ಮೈಮುಟ್ಟಿದಾಗ ವಿರೋಧ ವ್ಯಕ್ತಪಡಿಸಿದ್ದರು. `ತನ್ನ ಲೈಂಗಿಕ ಬಯಕೆ ತೀರಿಸದೇ ಇದ್ದರೆ ಕೆಲಸದಿಂದ ತೆಗೆಸುವೆ’ ಎಂದು ಆತ ಹೇಳಿಕೊಂಡಿದ್ದು, ಈ ಬಗ್ಗೆ ಮಹಿಳೆ ದೂರು ನೀಡಿದ ನಂತರ ವಾರ್ಡನ್ ನುಡಿದಂತೆ ನಡೆದಿದ್ದಾನೆ!
ಕಳೆದ ಮೂರು ವರ್ಷಗಳಿಂದ ವಾರ್ಡನ್ ಮಹಿಳೆಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುತ್ತಿದ್ದು, `ಈ ರೀತಿ ಮಾಡಬೇಡ’ ಎಂದು ಆತನಲ್ಲಿ ಕೈ ಮುಗಿದು ಬೇಡಿಕೊಂಡಿದ್ದಾರೆ. ಆತ ಬದಲಾಗದಿದ್ದಾಗ ಸ್ಥಳೀಯ ಜನಪ್ರತಿನಿಧಿಗಳ ಮುಂದೆಯೂ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ. `ತನಗೆ ರಕ್ಷಣೆ ಬೇಕು’ ಎಂದು ಮಹಿಳೆ ಮನವಿ ಮಾಡಿದರೂ ಅಲ್ಲಿನ ಪ್ರಾಚಾರ್ಯ ಹಾಗೂ ಅಧಿಕಾರಿಗಳು ಅದನ್ನು ಕಿವಿಗೆ ಹಾಕಿಕೊಂಡಿಲ್ಲ. ಸಮಾಜ ಕಲ್ಯಾಣ ಅಧಿಕಾರಿಗಳು ಮಹಿಳೆಯ ಮಾತು ಆಲಿಸಿಲ್ಲ.
`ರಾತ್ರಿ ಪಾಳಿಯಲ್ಲಿರುವಾಗ ವಾರ್ಡನ್ ರೂಮಿಗೆ ಕರೆಯುತ್ತಾನೆ. ಅಸಭ್ಯವಾಗಿ ವರ್ತಿಸುತ್ತಾನೆ’ ಎಂದು ಮಹಿಳೆ ದೂರಿದ್ದಾರೆ. ಮಹಿಳೆ ದೂರು ಆಲಿಸಿ ಬಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ಸಹ ವಾರ್ಡನ್ ಪರ ನಿಂತಿದ್ದಾರೆ ಎಂಬುದು ಅವರ ಅಳಲು. ಹೀಗಾಗಿಯೇ `ಕೆಲಸ ಬಿಟ್ಟು ಹೋಗು’ ಎಂದು ಬೆದರಿಸಿದ ಬಗ್ಗೆ ಅವರು ಆರೋಪಿಸಿದ್ದಾರೆ.
ವಾರ್ಡನ್ ವಿರುದ್ಧ ಸಂತ್ರಸ್ತೆ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..



