ಶಿರಸಿ: ಹಣ ತೆಗೆಯುವುದಕ್ಕಾಗಿ ಎಟಿಎಂ ಕೇಂದ್ರಕ್ಕೆ ಬರುವವರನ್ನು ಯಾಮಾರಿಸಿ ಅವರ ಎಟಿಎಂ ಕಾರ್ಡ ಕದ್ದು ಹಣ ಲಪಟಾಯಿಸುತ್ತಿದ್ದ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಶಿರಾಳಕೊಪ್ಪದ ಕೌಸರ ಭಾನು ನಜೀರ್ ಸಾಬ್ ಎಂಬಾಕೆ ಎಟಿಎಂ ಕೇಂದ್ರಕ್ಕೆ ಬರುವವರನ್ನು ಗುರಿಯಾಗಿರಿಸಿಕೊಂಡು ದರೋಡೆ ಮಾಡುತ್ತಿದ್ದಳು. ಎಟಿಎಂ ಸಾಲಿನಲ್ಲಿ ನಿಲ್ಲುವ ಈಕೆ ಮುಂದಿದ್ದವರು ಎಟಿಎಂ ಬಳಸುವಾಗ ನಮೂದಿಸುವ ರಹಸ್ಯ ಸಂಖ್ಯೆ ತಿಳಿದುಕೊಂಡು, ನಂತರ ಅವರ ಕಾರ್ಡ ಅಪಹರಿಸುತ್ತಿದ್ದಳು. ಮುಖ್ಯವಾಗಿ ಹೆಣ್ಣು ಮಕ್ಕಳನ್ನು ಯಾಮಾರಿಸಿ ಅವರ ಹಣವನ್ನು ಹೊಡೆಯುತ್ತಿದ್ದು, ಪ್ರಕರಣವೊಂದರ ಬೆನ್ನತ್ತಿದ ಪೊಲೀಸರಿಗೆ ಬುಧವಾರ ಈಕೆ ಸಿಕ್ಕಿ ಬಿದ್ದಳು. ಆಕೆಯ ಬಳಿಯಿದ್ದ 30ಕ್ಕೂ ಎಟಿಎಂ ಕಾರ್ಡನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.