6
  • Latest

ಕಸ ಎಸೆದವರಿಗೆ ದಂಡ ವಿಧಿಸಲು ನ್ಯಾಯಾಧೀಶರ ಸೂಚನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಸ ಎಸೆದವರಿಗೆ ದಂಡ ವಿಧಿಸಲು ನ್ಯಾಯಾಧೀಶರ ಸೂಚನೆ

AchyutKumar by AchyutKumar
in ಸ್ಥಳೀಯ

ಕಾರವಾರ: `ಕಸವನ್ನು ಎಲ್ಲೆಂದರಲ್ಲಿ ಬಿಸಾಡುವವರಿಗೆ ದಂಡ ವಿಧಿಸುವ ಅವಕಾಶವಿದ್ದು, ಸ್ಥಳೀಯ ಸಂಸ್ಥೆಗಳು ಇದನ್ನು ಬಳಸಿಕೊಳ್ಳಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯ ಕುಮಾರ ಹೇಳಿದರು.

ADVERTISEMENT

ಬುಧವಾರ ಮಹಾತ್ಮಾ ಗಾಂಧೀಜಿ ಅವರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸ್ವಚ್ಛತಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. `ಗಾಂಧೀಜಿಯವರು ದೇಶದ ಜನತೆಗೆ ನೈತಿಕತೆ ಮತ್ತು ಸ್ವಚ್ಛತೆ ಬಗ್ಗೆ ಮಾರ್ಗದರ್ಶನ ನೀಡಿದರು. ಅವರು ನೀಡಿದ ಮಾರ್ಗದರ್ಶನದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ’ ಎಂದರು. `ಪ್ರಸ್ತುತ ಸಮಾಜದಲ್ಲಿ ಬಹುತೇಕ ವಿದ್ಯಾವಂತರಾಗಿದ್ದು, ಸುತ್ತಲಿನ ಸ್ಥಳ ಸ್ವಚ್ಛವಾಗಿರಿಸಿಕೊಳ್ಳಬೇಕು. ಕಸ ಬಿದ್ದಿರುವುದು ಕಂಡರೆ ಅದನ್ನು ತೆರವು ಮಾಡಬೇಕು’ ಎಂದು ಕರೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಎಂ, ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ, ಪೌರಾಯುಕ್ತ ಜಗದೀಶ್ ಹುಲಗಜ್ಜಿ ಇದ್ದರು.

Advertisement. Scroll to continue reading.

ತಹಶೀಲ್ದಾರ್ ಕಚೇರಿ ಹಿಂದೆ ಅಶುಚಿತ್ವ!

Advertisement. Scroll to continue reading.

ಕುಮಟಾ: ಇಲ್ಲಿನ ತಹಶೀಲ್ದಾರ್ ಕಚೇರಿ ಹಿಂದೆ ಹಾಗೂ ಸಾರ್ವಜನಿಕರು ವಾಹನ ನಿಲ್ಲಿಸುವ, ಓಡಾಡುವ ಸ್ಥಳದಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯದ ರಾಶಿ ಬಿದ್ದಿದೆ. ನಿತ್ಯ ನೂರಾರು ಜನ ಹಾಗೂ ಹಲವು ನೌಕರರು ಇದೇ ಮಾರ್ಗದಲ್ಲಿ ಓಡಾಡುತ್ತಿದ್ದರೂ ಯಾರೂ ಶುಚಿತ್ವ ಕಾಪಾಡುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಸಮೀಪದಲ್ಲಿ ಸರ್ಕಾರಿ ಶಾಲೆಯೂ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಸಹ ಈ ತ್ಯಾಜ್ಯ ದುಷ್ಪರಿಣಾಮ ಬೀರುತ್ತಿದೆ. ಪ್ರಸ್ತುತ ಎಲ್ಲಡೆ ಸ್ವಚ್ಚತಾ ಅಭಿಯಾನ ನಡೆಯುತ್ತಿದ್ದು, ಈ ಅವಧಿಯಲ್ಲಾದರೂ ಕುಮಟಾ ತಹಶೀಲ್ದಾರ್ ಕಚೇರಿ ಸುತ್ತಲಿನ ಪ್ರದೇಶ ಸ್ವಚ್ಛ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ತಹಶೀಲ್ದಾರ್ ಕಚೇರಿ ಅಧಿಕಾರಿಗಳಿಗೆ ಪುರಸೋತು ಇಲ್ಲ ಎಂದಾದರೆ ಒಂದೇ ಒಂದು ಫೋನ್ ಮಾಡಿದರೂ ಪುರಸಭೆ ಕಾರ್ಮಿಕರು ಇಲ್ಲಿ ಸ್ವಚ್ಛ ಮಾಡುತ್ತಾರೆ. ಆದರೆ, ಆ ಫೋನ್ ಮಾಡಲು ಸಹ ಅಲ್ಲಿನ ಅಧಿಕಾರಿಗಳಿಗೆ ಸಮಯ ಸಿಕ್ಕಿಲ್ಲ!

`ಕುಮಟಾ ತಹಶೀಲ್ದಾರ್ ಕಚೇರಿಗೆ ನಿತ್ಯ ನೂರಾರು ಜನ ಬರುತ್ತಾರೆ. ಅಧಿಕಾರಿಗಳು ಕಚೇರಿ ಒಳಗೆ ಕುಳಿತು ಸ್ವಚ್ಛತೆಯ ಪಾಠ ಮಾಡುತ್ತಾರೆ. ಆದರೆ, ಹೊರಭಾಗದಲ್ಲಿ ಕಸ ಬಿದ್ದಿದ್ದರೂ ಅದನ್ನು ಗಮನಿಸುವುದಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಮೊದಲು ತಿಳುವಳಿಕೆ ನೀಡಬೇಕು. ತಿಳುವಳಿಕೆಗೂ ಬಗ್ಗದಿದ್ದಾಗ ಅವರಿಗೂ ದಂಡ ವಿಧಿಸಬೇಕು. ಆಗ ಜನ ಜಾಗೃತಿ ಸಾಧ್ಯ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ನೆಲ್ ರೋಡ್ರಿಗ್ರಿಸ್ ಹಾಗೂ ಸುಧಾಕರ್ ನಾಯ್ಕ ಹೇಳಿದ್ದಾರೆ. ಅಶುಚಿತ್ವದ ಕುರಿತು ಅವರು ಫೋಟೋ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ರವಾನಿಸಿ ದೂರು ನೀಡಿದ್ದಾರೆ.

ಇದು ಕಾಡಲ್ಲ.. ರಸ್ತೆ!

ಕಾರವಾರ: ಕಡವಾಡ ವೈಲಮಕೇರಿಗೆ ತೆರಳುವ ಮಾರ್ಗದಲ್ಲಿ ಮುಳ್ಳು ಗಿಡಗಳು ರಸ್ತೆಯನ್ನು ಆಕ್ರಮಿಸುತ್ತಿದೆ. ಈ ಮಾರ್ಗದಲ್ಲಿ ಓಡಾಡುವ ವಾಹನ ಸವಾರರು ನಿತ್ಯ ಮುಳ್ಳು ಚುಚ್ಚಿಸಿಕೊಳ್ಳುತ್ತಿದ್ದಾರೆ!
ಕರವೇ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದು, ರಸ್ತೆ ಬದಿಯ ಮುಳ್ಳು ಗಿಡ ತೆರವಿಗೆ ಆಗ್ರಹಿಸಿದ್ದಾರೆ. ಕಡವಾಡ  ಹಾಗೂ ಶಿರವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಮಕೇರಿ ಸುಲ್ತಾನಪುರ ಗಡಿಭಾಗದಲ್ಲಿ ನೂತನ ಸೇತುವೆಯ ಸಮೀಪದಿಂದ ರಸ್ತೆ ಬದಿಯುದ್ದಕೂ ಬೃಹತ್ ಮುಳ್ಳಿನ ಗಿಡಗಂಟಿಗಳು ಬೆಳೆದು ಕೊಂಡಿದ್ದರಿoದ ವಾಹನ ಸವಾರರು  ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.  ಇಲ್ಲಿನ ಮುಳ್ಳಿನ ಗಿಡಗಂಟಿಗಳು ಬೆಳೆದುಕೊಂಡು  ರಸ್ತೆವರೆಗೂ ಆವರಿಸಿವೆ.  ವಾಹನ ಸವಾರರ ಮೈ ಕೈ ಕಣ್ಣಿಗೆ  ಬಡಿಯುತ್ತಿವೆ. ಮತ್ತು ಹಗಲು ರಾತ್ರಿ ಸಾಕಷ್ಟು ಸಂಖ್ಯೆಯಲ್ಲಿ ವಾಹನ ಸವಾರರು ಓಡಾಡುತ್ತಿದ್ದಾರೆ.
ಮತ್ತು  ರಾತ್ರಿ ವೇಳೆಯಲ್ಲಿ ವಾಹನ ಸವಾರರು   ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸಂಬoಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಅವರು ಆಗ್ರಹಿಸಿದ್ದಾರೆ.

ಚಿನ್ನ ಗೆದ್ದ ಹುಡುಗನಿಗೆ ಮತ್ತೊಂದು ಸನ್ಮಾನ!

ಯಲ್ಲಾಪುರ: ಕರ್ನಾಟಕ ವಿಶ್ವ ವಿದ್ಯಾಲಯದಿಂದ 7 ಚಿನ್ನದ ಪದಕ ಗೆದ್ದ ಹೊಸಳ್ಳಿಯ ಮಯೂರ ಖಿಲಾರಿ ಅವರಿಗೆ ಕಿರವತ್ತಿ ಗ್ರಾಮ ಪಂಚಾಯತ ಅಧಿಕಾರಿ ಹಾಗೂ ಸಿಬ್ಬಂದಿ ಸನ್ಮಾನಿಸಿದರು. ಆತನ ಸಾಧನೆ ಮೆಚ್ಚಿ ಪ್ರೋತ್ಸಾಹ ಧನ ವಿತರಿಸಿದರು.
ಗ್ರಾ ಪಂ ಅಧ್ಯಕ್ಷೆ ಸಂಗೀತಾ ಕೊಕರೆ, ಪಿಡಿಓ ಅಣ್ಣಪ್ಪ, ಸದಸ್ಯ ಸುನಿಲ ಕಾಂಬ್ಳೆ, ಪ್ರಮುಖರಾದ ಗಾಂಧಿ ಸೋಮಾಪುರಕರ, ಪಕ್ಕೀರಸಾಬ್ ಶೇಖ, ಲಕ್ಷ್ಮಣ ತೋರತ್, ನಯನಾ ಬಾಬು ಶೇಂಡಗೆ ಇದ್ದರು

ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ: 5844 ಅಭ್ಯರ್ಥಿಗಳ ಸುರಕ್ಷತೆಗೆ ಹಲವು ಕ್ರಮ

ಕಾರವಾರ: ಜಿಲ್ಲೆಯಲ್ಲಿ ಸೆ 29ರಂದು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಹುದ್ದೆಗೆ ಕನ್ನಡ ಭಾಷೆಯ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆಯದಂತೆ ಅಗತ್ಯ ಮುನ್ನಚ್ಚರಿಕೆವಹಿಸಲು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಸೂಚಿಸಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ್ದು, `ಜಿಲ್ಲೆಯಲ್ಲಿ ಒಟ್ಟು 17 ಪರೀಕ್ಷಾ ಕೇಂದ್ರಗಳಲ್ಲಿ 5844 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸಬೇಕು’ ಎಂದು ಸೂಚಿಸಿದರು. `ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಿಂದ ಪೊಲೀಸ್ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಮತ್ತು ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಯನ್ನು ಜಿಲ್ಲಾ ಖಜಾನೆಗೆ ಭದ್ರವಾಗಿ ತಲುಪಿಸಬೇಕು’ ಎಂದರು. `ಪರೀಕ್ಷಾ ಕೇಂದ್ರಗಳ ಸುತ್ತಲು ವಿಧಿಸಿದ 200 ಮೀ ವ್ಯಾಪ್ತಿಯಲ್ಲಿನ ನಿಷೇಧಾಜ್ಞೆಯನ್ನು ಕಡ್ಡಾಯವಾಗಿ ಎಲ್ಲರು ಪಾಲಿಸಬೇಕು. ಹೆಸ್ಕಾಂ ಪರೀಕ್ಷೆ ನಡೆಯುವ ದಿನದಂದು ನಿರಂತರ ವಿದ್ಯುತ್ ಪೂರೈಸಬೇಕು’ ಎಂದು ಸೂಚಿಸಿದರು. ಪರೀಕ್ಷಾ ಕೇಂದ್ರಗಳಿಗೆ ಮಹಿಳಾ ಆರೋಗ್ಯ ಸಹಾಯಕರನ್ನು ನೇಮಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ಅಭ್ಯರ್ಥಿಗಳು ತಲುಪಲು ಪರೀಕ್ಷಾ ದಿನದಂದು ನಿಗದಿತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಕೆಎಸ್‌ಆರ್‌ಟಿ ವ್ಯವಸ್ಥಾಪಕರಿಗೆ ಸೂಚನೆ ನೀಡಿದ ಅವರು, ಅಭ್ಯರ್ಥಿಗಳಿಗೆ ಯಾವುದೇ ರೀತಿಯ ರೀತಿಯ ತೊಂದರೆಯಾಗದoತೆ ಮುನ್ನಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜಪ್ಪ ಕೆ.ಹೆಚ್, ವಿವಿಧ ಕಾಲೇಜು ಮುಖ್ಯಸ್ಥರು, ಪರೀಕ್ಷಾ ವೀಕ್ಷಕರು ಮತ್ತಿತರರು ಇದ್ದರು.

ಮಗುವಿನ ಅಕ್ಷರ ಅಭ್ಯಾಸಕ್ಕೆ ಇಲ್ಲಿ ಬನ್ನಿ..

ಯಲ್ಲಾಪುರ: ನಾಯಕನಕೆರೆಯ ಬಾಲಾ ತ್ರಿಪುರಸುಂದರೀ ಶಾರದಾಂಬಾ ದೇವಸ್ಥಾನ ಹಾಗೂ ಶ್ರೀ ಹನುಮಂತ ದೇವಸ್ಥಾನಗಳಲ್ಲಿ ಅ 3ರಿಂದ ಅ 12ರವರೆಗೆ 9 ದಿನಗಳ ಕಾಲ ಪ್ರತಿ ವರ್ಷದಂತೆ ಶರನ್ನವರಾತ್ರಿ ಉತ್ಸವ ನಡೆಯಲಿದ್ದು, ವಿಜಯದಶಮಿ ಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ.

ಅ 12ರಂದು ಮುಂಜಾನೆ 10 ಗಂಟೆಗೆ ಬಾಲಮಕ್ಕಳ ಅಕ್ಷರಾರಂಭದ ವಿಶೇಷ ಕಾರ್ಯಕ್ರಮ ಈ ದೇವ ಸನ್ನಿಧಿಯಲ್ಲಿ ನಡೆಯಲಿದ್ದು ಮಾತೆಯರು, ಮಹನೀಯರು ತಮ್ಮ ಮಕ್ಕಳನ್ನು ಕರೆತರಲು ಸಂಘಟಕರು ವಿನಂತಿಸಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಚಂಡಿ ಪಾರಾಯಣ ಸೇವೆ ಸಲ್ಲಿಸುವವರು ತಮ್ಮ ಹಾಗೂ ತಮ್ಮ ಕುಟುಂಬದ ಗೋತ್ರ, ನಕ್ಷತ್ರ, ರಾಶಿಗಳ ವಿವರಗಳೊಂದಿಗೆ ಹೆಸರನ್ನು ನಾಲ್ಕು ದಿನ ಮುಂಚಿತವಾಗಿಯೇ ನೋಂದಾಯಿಸಿಕೊಳ್ಳಲು ತಿಳಿಸಿದ್ದಾರೆ.

ಕಲ್ಪೋಕ್ತ ಅಷ್ಟೋತ್ತರ ಶತನಾಮಾವಳಿ ಪೂಜೆ, ಸಪ್ತಶತಿ ಪಾರಾಯಣ, ವಿಶೇಷ ಅಲಂಕಾರ ಸೇವೆ, ಪಾರಾಯಣ ಸಹಿತ ಅನ್ನಪ್ರಸಾದ ಸೇವೆ, ಲಲಿತಾಪಂಚಮಿಯoದು ನಡೆಯುವ ಚಂಡಿಕಾಯಾಗದ ಪೂರ್ಣಸೇವೆ ಮತ್ತು ಯಜುರ್ವೇದ ಪಾರಾಯಣದ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಬಹುದಾಗಿದ್ದು, ಆಸಕ್ತ ಭಕ್ತಾದಿಗಳು ಮುಖ್ಯ ಅರ್ಚಕ ವಿ.ಗೋಪಾಲಕೃಷ್ಣ ಭಟ್ಟ (9449625565) ಅಥವಾ ವ್ಯವಸ್ಥಾಪಕ ಎನ್ ಎಸ್ ಭಟ್ಟ (9483279791) ಅವರನ್ನು ಸಂಪರ್ಕಿಸಿ.

 

Previous Post

ಕಸ್ತೂರಿ ರಂಗನ್: ಸೆ 26ಕ್ಕೆ ಇನ್ನೊಂದು ಮಹತ್ವದ ಸಭೆ

Next Post

ಸುಪಾರಿ ನೀಡಿ ಆತ್ಮಹತ್ಯೆಗೆ ಶರಣಾದ ಉದ್ಯಮಿ: ಕೊಲೆ ಪ್ರಕರಣದ ಬಗ್ಗೆ ಎಸ್ಪಿ ಹೇಳಿದ್ದೇನು?

Next Post

ಸುಪಾರಿ ನೀಡಿ ಆತ್ಮಹತ್ಯೆಗೆ ಶರಣಾದ ಉದ್ಯಮಿ: ಕೊಲೆ ಪ್ರಕರಣದ ಬಗ್ಗೆ ಎಸ್ಪಿ ಹೇಳಿದ್ದೇನು?

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ