ಯಲ್ಲಾಪುರ: ಕನ್ನಡಗಲ್ ಗ್ರಾಮದ ಕಾಡಿನಲ್ಲಿ 13 ಜನ ಜೂಜಾಟ ಆಡುತ್ತಿದ್ದು, ಪೊಲೀಸ್ ನಿರೀಕ್ಷಕ ರಮೇಶ ಹಾನಾಪುರ ಅವರು ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 8 ಜನ ಕಾಡಿನಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.
ಸೆ 27ರ ಸಂಜೆ 6.15ರ ವೇಳೆಗೆ ಕನ್ನಡಗಲ್ ಬಸ್ ನಿಲ್ದಾಣ ಹಿಂದಿನ ಕಾಡಿನಲ್ಲಿ ಇಸ್ಪಿಟ್ ಆಟ ನಡೆಯುತ್ತಿತ್ತು. ಇಸ್ಪಿಟ್ ಎಲೆಗಳ ಮೇಲೆ ಹಣ ಹರಡಿಕೊಂಡು ಅಲ್ಲಿದ್ದವರು ಜೂಜಾಟ ಆಡುತ್ತಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದರು. ದಟ್ಟ ಅರಣ್ಯದಲ್ಲಿ ಮೊಂಬತ್ತಿ ಬೆಳಕಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದ ನೂತನನಗರದ ಎಲೆಕ್ಟ್ರಿಷಿಯನ್ ರಜೀತ್ ಜಗದೀಶ ನಾಯ್ಕರ, ಹುಬ್ಬಳ್ಳಿ ಡಾರ‍್ಸ ಕಾಲೋನಿಯ ರಮೇಶ ಬಸಪ್ಪ ಪಾಟೀಲ, ಫರ್ನಿಚರ್ ಕೆಲಸ ಮಾಡುವ ಯಲ್ಲಾಪುರ ಬಿಲಾಲ್ ಮಸೀದಿ ಬಳಿಯ ಮಹಮದ್ ಹುಸೇನ್, ದಾಂಡೇಲಿಯ ಚಾಲಕ ರಹಿಮಖಾನ್, ಭಾಗವತಿಯ ಕೂಲಿಯಾಳು ಅರ್ಜುನ್ ರಾಮಸಿಂಗ್ ಬೋವಿ, ದಾಂಡೇಲಿ ಕಾರ್ಮಿಕ ಬಾಬು ರಾಮಪ್ಪ ದೊಡ್ಮನಿ, ಮಂಜುನಾಥ ನಗರದ ಮಂಜುನಾಥ ಗೋಪಾಲ ನಾಯ್ಕ ಸಿಕ್ಕಿಬಿದ್ದರು. ಅವರ ಬಳಿಯಿಂದ 8800ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದರು.
ಪೊಲೀಸರನ್ನು ಕಂಡ 8 ಜನ ದಿಕ್ಕಾಪಾಲಾಗಿ ಓಡಿ ಹೋಗಿದ್ದು, ಅವರ ವಿರುದ್ಧ ಸಹ ಪ್ರಕರಣ ದಾಖಲಿಸಿಕೊಂಡರು. ಗಣಪತಿಗಲ್ಲಿಯ ಮಂಜುನಾಥ ಅರ್ಜುನ ರಾವ್, ವಜ್ರಳ್ಳಿಯ ಜಿಕ್ರಿಯಾ ಮುಲ್ಲಾ, ನೂತನನಗರದ ಪ್ರಶಾಂತ ಮಾರುತಿ ರಾವೂಜಿ, ಶಾರದಾಗಲ್ಲಿಯ ರಘು ಕಾಳಪ್ಪ ಮಹಾಲೆ, ಇಡಗುಂದಿಯ ವಿದ್ಯಾದರ ಬಾಂದೇಕರ್, ರವೀಂದ್ರನಗರದ ಮಂಜುನಾಥ ಬೂದಪ್ಪ ಬೋಳು ಎಂಬಾತರು ಕಾಡಿನಲ್ಲಿ ತಪ್ಪಿಸಿಕೊಂಡಿದ್ದಾರೆ. ಈ ಎಲೆಮಾನವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.