ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾದವರ ಶೋಧ ಕಾರ್ಯ ಗುರುವಾರವೂ ಮುಂದುವರೆದಿದ್ದು, ಬುಧವಾರ ಮತ್ತೆ ಎರಡು ಮೂಳೆ ಸಿಕ್ಕಿದೆ.
ಅರ್ಜುನನ ದೇಹ ಸಿಕ್ಕದ ಪ್ರದೇಶಹೊರತುಪಡಿಸಿ ಬೇರೆ ಕಡೆ ಈ ಮೂಳೆ ಸಿಕ್ಕಿರುವುದರಿಂದ `ಇದು ಅರ್ಜುನನ ಮೂಳೆ ಅಲ್ಲ’ ಎಂದು ಅಂದಾಜಿಸಲಾಗಿದೆ. ಈ ಮೂಳೆ ಯಾರದ್ದು ಎಂದು ತಿಳಿಯುವುದಕ್ಕಾಗಿ ಡಿಎನ್‌ಎ ಪರೀಕ್ಷೆಗೆ ರವಾನಿಸಲಾಗಿದೆ.
ಪ್ರಸ್ತುತ ಗಂಗಾವಳಿ ನದಿ ನೀರಿನ ಮಟ್ಟ ಕಡಿಮೆಯಾಗಿದೆ. ಹೀಗಾಗಿ ಡ್ರಜ್ಜಿಂಗ್ ಯಂತ್ರ ಅಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆ ಡ್ರಜ್ಜಿಂಗ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಪ್ರಸ್ತುತ ಲಕ್ಷ್ಮಣ ನಾಯ್ಕ ಅವರ ಹೋಟೆಲ್ ಇದ್ದ ಸ್ಥಳದಲ್ಲಿ ಮಣ್ಣು ಅಗೆಯುವ ಕೆಲಸ ನಡೆದಿದೆ.
ಹೆದ್ದಾರಿ ಪ್ರಾಧಿಕಾರದವರು ತಮ್ಮ ಹಿಟಾಚಿ ಬಳಸಿ ಅಲ್ಲಿನ ಮಣ್ಣು ತೆರವು ನಡೆಸಿದ್ದಾರೆ. ಹೋಟೆಲ್ ಅಡಿಭಾಗದ ಮಣ್ಣಿನಲ್ಲಿ ಶವ ಇರುವ ಶಂಕೆ ಸಹ ಇರುವುದರಿಂದ ಅಲ್ಲಿ ಹುಡುಕಾಟ ಮುಂದುವರೆದಿದೆ. ನದಿ ಆಳದಲ್ಲಿ ಬುಧವಾರ ಬೆಳಗ್ಗೆಯೇ ಎರಡು ಮೂಳೆ ಸಿಕ್ಕಿದ್ದರೂ ಗಾಂಧೀ ಜಯಂತಿ ಅಂಗವಾಗಿ ರಜೆ ಇದ್ದ ಕಾರಣ ಡಿಎನ್‌ಎ ಪರೀಕ್ಷೆ ಸಾಧ್ಯವಾಗಿರಲಿಲ್ಲ.
ಗುರುವಾರ ಬೆಳಗ್ಗೆ ಡಿಎನ್‌ಎ ಪರೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ವೈದ್ಯರಿಗೆ ಮನವಿ ಮಾಡಿದ್ದು, ಆ ವರದಿ ಬಂದ ನಂತರ ಕುಟುಂಬದವರಿಗೆ ಮೂಳೆ ಹಸ್ತಾಂತರ ನಡೆಯಲಿದೆ. ಸ್ಥಳದಲ್ಲಿ ಸ್ಕೂಬಾ ಡೈವಿಂಗ್ ತಂಡದವರು ಇದ್ದು ಶೋಧ ನಡೆಸುತ್ತಿದ್ದಾರೆ.
ಶಿರೂರು ಕಾರ್ಯಾಚರಣೆಯ ಆಗುಹೋಗುಗಳ ಬಗ್ಗೆ ಜಿಲ್ಲಾಧಿಕಾರಿ ಲಕ್ಷಿö್ಮÃಪ್ರಿಯಾ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..



