6
  • Latest

30ಕ್ಕೂ ಅಧಿಕ ಕೆಲಸಕ್ಕೆ ಒಬ್ಬನೇ ಗುತ್ತಿಗೆದಾರ: ನಗರಸಭೆ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

30ಕ್ಕೂ ಅಧಿಕ ಕೆಲಸಕ್ಕೆ ಒಬ್ಬನೇ ಗುತ್ತಿಗೆದಾರ: ನಗರಸಭೆ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ!

AchyutKumar by AchyutKumar
in ಸ್ಥಳೀಯ

ಕಾರವಾರ: `ನಗರಸಭೆ ಅಧಿಕಾರಿಗಳ ಪಾಲಿಗೆ ಗುತ್ತಿಗೆದಾರರು ಚಿನ್ನದ ಮೊಟ್ಟೆ ಕೊಡುವ ಕೋಳಿಗಳಾಗಿದ್ದಾರೆ. ಹೀಗಾಗಿ 10 ಸಾವಿರ ರೂಪಾಯಿಗೆ ಮುಗಿಯುವ ಕೆಲಸಕ್ಕೂ ನಗರಸಭೆ 90 ಸಾವಿರ ರೂ ಹಣ ಪಾವತಿ ಮಾಡುತ್ತಿದೆ’ ಎಂದು ನಗರಸಭೆ ಸದಸ್ಯ ಸಂದೀಪ ತಳೇಕರ್ ದೂರಿದ್ದಾರೆ.

ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು `ಕನ್ನಡ ರಾಜ್ಯೋತ್ಸವ, ಅಗಸ್ಟ 15ರಂದು ಸಾರ್ವಜನಿಕರಿಗೆ ನೀಡುವ ಚಹ ತಿಂಡಿಗೆ ಸಹ ದುಪ್ಪಟ್ಟು ದರದಲ್ಲಿ ಹಣ ಪಾವತಿ ನಡೆದಿದೆ. ನೀರು ಪೂರೈಕೆ ವಿಷಯದಲ್ಲಿಯೂ ಅವ್ಯವಹಾರ ನಡೆದಿದೆ. ಬಿಣಗಾ ಸೇರಿದಂತೆ ವಿವಿಧ ಕಡೆಗಳಲ್ಲಿ ಪೈಲ್ ಅಡಳಡಿಕೆ, ಚಿಕ್ಕಪುಟ್ಟ ದುರಸ್ತಿ ಕಾಮಗಾರಿಗೆ 9 ಲಕ್ಷ ರೂ. ಬಿಲ್ ಮಾಡಲಾಗಿದೆ. ಕಳೆದ 10 ತಿಂಗಳಿನಿAದ ಎಲ್ಲಾ ಕಾಮಗಾರಿಗಳು ಶಕುಂತಲಾ ಕನ್ಸಟ್ರಕ್ಷನ್ ಎಂಬಾತರಿಗೆ ಮಾತ್ರ ಸಿಗುತ್ತಿದೆ’ ಎಂದು ವಿವರಿಸಿದರು.

`30ಕ್ಕೂ ಅಧಿಕ ಟೆಂಡರ್ ಒಬ್ಬರಿಗೆ ನೀಡಲಾಗಿದೆ. ಬೇರೆ ಯಾರೂ ಗುತ್ತಿಗೆ ಪಡೆಯಲು ಬಂದಿಲ್ಲವೇ?’ ಎಂದವರು ಪ್ರಶ್ನಿಸಿದರು. `ವಾರ್ಡವೊಂದರ ಬಾವಿ ಸ್ವಚ್ಚತೆ ಹೆಸರಿನಲ್ಲಿ 75 ಸಾವಿರ ಹಣ ಪಾವತಿಯಾಗಿದೆ. ಬಾವಿಯಿಂದ 40 ಲೋಡ್ ಮಣ್ಣು ತೆಗೆದಿರುವುದಾಗಿ ಹೇಳಿದ್ದು, ಅಷ್ಟೊಂದು ಮಣ್ಣು ಬಾವಿಯಲ್ಲಿ ಬರಲು ಸಾಧ್ಯವೇ?’ ಎಂದು ಪ್ರಶ್ನಿಸಿದರು. `ಪಿಳ್ಳೆವಾಡಾದ ಮೂರು ಬಾವಿಗೆ ಚಿಕ್ಕಪುಟ್ಟ ಕೆಲಸ ಮಾಡಿ ತಲಾ 98 ಸಾವಿರ ರೂ ಬಿಲ್ ಮಾಡಲಾಗಿದೆ. ಈ ಎಲ್ಲಾ ಅಕ್ರಮದ ಬಗ್ಗೆ ತನಿಖೆ ಅಗತ್ಯ’ ಎಂದು ಒತ್ತಾಯಿಸಿದರು.

ಸದಸ್ಯ ಹರೀಶ್ ಸಾಗೇಕರ ಮಾತನಾಡಿ `ನಂದನಗದ್ದಾದ ವಾರ್ಡಿನಲ್ಲಿ ಕಾಮಗಾರಿ ಮಾಡಲಾಗಿದೆ ಎಂದು 2.18 ಲಕ್ಷ ರೂ ಬಿಲ್ ಮಾಡಲಾಗಿದೆ. ಕಾಮಗಾರಿ ನಡೆದ ಬಗ್ಗೆ ಮಾಹಿತಿಯಿಲ್ಲ’ ಎಂದರು. ಅಧಿಕಾರಿಗಳನ್ನು ಸದಸ್ಯ ಮಕ್ಬುಲ್ ಶೇಖ್ ತರಾಟೆಗೆ ತೆಗೆದುಕೊಂಡರು. ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್ `ನಡೆದಿರುವ ಕಾಮಗಾರಿ, ಬಿಲ್ ಪಾವತಿ ಮಾಡಿದ ಬಗ್ಗೆ ಕಮಿಟಿ ರಚನೆ ಮಾಡಿ ಪರಿಶೀಲನೆ ಮಾಡಲಾಗುವುದು’ ಎಂದು ಸಭೆಗೆ ತಿಳಿಸಿದರು.

ShareSendTweetShare
Previous Post

ಪಾದಚಾರಿಗೆ ಗುದ್ದಿದ ಕಾರು ಪಲ್ಟಿ: ಮೂವರಿಗೆ ಗಾಯ

Next Post

ಕುಟುಂಬದವರ ಅಸಡ್ಡೆ: ಮಾನಸಿಕ ಅಸ್ವಸ್ಥೆಗೆ ಮುಕ್ತಿ ನೀಡಲಿರುವ ಸಮಾನ ಮನಸ್ಕರ ತಂಡ

Next Post

ಕುಟುಂಬದವರ ಅಸಡ್ಡೆ: ಮಾನಸಿಕ ಅಸ್ವಸ್ಥೆಗೆ ಮುಕ್ತಿ ನೀಡಲಿರುವ ಸಮಾನ ಮನಸ್ಕರ ತಂಡ

ಕಾಳಿ ನದಿಯೂ ಕಪ್ಪು.. ಸೇತುವೆಗೂ ಕತ್ತಲು..!

ಜಯ ಕರ್ನಾಟಕ | ಜನಪರ ವೇದಿಕೆಗೆ ಐದು ವಸಂತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.