ಶಿರೂರು ಗುಡ್ಡ ಕುಸಿತದ ನಂತರ ಕಾರ್ಯಾಚರಣೆಯ ದಿಕ್ಕು ತಪ್ಪಿಸಿದ್ದ ಕೇರಳ ಲಾರಿ ಮಾಲಕ ಮುನಾಫ್ ಇದೀಗ ಅರ್ಜುನನ ಕುಟುಂಬದವರ ಹೆಸರಿನಲ್ಲಿ ಕೋಟಿ ಲೆಕ್ಕಾಚಾರದಲ್ಲಿ ಹಣ ವಸೂಲಿ ಮಾಡಿದ್ದಾರೆ. ಆದರೆ, ಅದರಲ್ಲಿ ಒಂದು ರೂಪಾಯಿಯನ್ನು ಸಹ ಅರ್ಜುನನ ಕುಟುಂಬಕ್ಕೆ ನೀಡಿಲ್ಲ!
ನದಿ ಆಳಕ್ಕೆ ಬಿದ್ದ ಲಾರಿಯನ್ನು ತೋರಿಸಿ ವಿಮಾ ಹಣವನ್ನು ಪಡೆದ ಮುನಾಫ್ `ಅರ್ಜುನನ ಕುಟುಂಬದವರನ್ನು ನಿರ್ಗತಿಕರು’ ಎಂದು ಬಿಂಬಿಸಿ ಜನರಿಂದ ಹಣ ಪಡೆದಿದ್ದಾರೆ. ಈ ಬಗ್ಗೆ ಸ್ವತಃ ಅರ್ಜುನನ ಸಹೋದರಿ ಅಂಜು ಹೇಳಿಕೊಂಡಿದ್ದು, ಮುನಾಫ್ ವಿರುದ್ಧ ಕಿಡಿಕಾರಿದ್ದಾರೆ.
`ಮುನಾಫ್ ಅವರು ತಮ್ಮ ಕುಟುಂಬದ ಭಾವನಾತ್ಮಕ ಪರಿಸ್ಥಿತಿಯನ್ನು ಬಂಡವಾಳವನ್ನಾಗಿಸಿಕೊ0ಡು ಮೃತ ಸಹೋದರನ ಫೋಟೊ ಬಳಸಿ ಪ್ರಚಾರ ಪಡೆಯುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ ಮೂಲಕ ಕುಟುಂಬದ ಹೆಸರಿಗೆ ಕಳಂಕ ತರುತ್ತಿದ್ದಾರೆ’ ಎಂದವರು ಸಹ ದೂರಿದ್ದಾರೆ. `ಕುಟುಂಬದ ಪರಿಸ್ಥಿತಿಯನ್ನು ಮನಾಫ್ ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಿದ್ದಾರೆ. ಹಣವನ್ನೂ ಸಂಗ್ರಹಿಸುತ್ತಿದ್ದಾರೆ’ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಕಾರ್ಯಾಚರಣೆಯ ದಿಕ್ಕು ತಪ್ಪಿಸಿದವರು ಸಹ ಲಾರಿ ಮಾಲಕ ಮುನಾಫ್. ಲಾರಿ ನದಿಯಲ್ಲಿದೆ ಎಂದು ಅನೇಕರು ಅಂದಾಜಿಸಿದರೂ ಮುನಾಫ್ ಮೊದಲು ಅದನ್ನು ಅಲ್ಲಗಳೆದಿದ್ದರು. `ಹೆದ್ದಾರಿ ಮೇಲಿನ ಮಣ್ಣು ಮೊದಲು ತೆಗೆಯಿರಿ’ ಎಂದು ಕೇರಳ ಸರ್ಕಾರದಿಂದ ಒತ್ತಡ ತಂದಿದ್ದರು. ಇದಕ್ಕಾಗಿ `ಹೆದ್ದಾರಿ ಮೇಲೆ ಮೊಬೈಲ್ ಜಿಪಿಎಸ್ ಕಾಣಿಸುತ್ತಿದೆ’ ಎಂದು ಸುಳ್ಳು ಸಹ ಹೇಳಿದ್ದರು. `ಮೊದಲೇ ನದಿ ಆಳದಲ್ಲಿ ಹುಡುಕಿದರೆ ಅರ್ಜುನ್ ಸಿಗುತ್ತಿದ್ದ’ ಎಂಬುದು ಅರ್ಜುನ್ ಕುಟುಂಬದವರ ಮಾತು.
ರಾಜಿಯಲ್ಲಿ ಅಂತ್ಯ:
ಕೊನೆಗೆ ಕೇರಳದ ಮುಖಂಡರು ಅರ್ಜುನ್ ಕುಟುಂಬದರೊAದಿಗೆ ಮಾತನಾಡಿ, ಈ ಪ್ರಕರಣವನ್ನು ರಾಜಿಯಲ್ಲಿ ಅಂತ್ಯಗೊಳಿಸಿದ್ದಾರೆ.