ಉತ್ತರ ಕನ್ನಡಕ್ಕೂ ಆಗಮಿಸಿದ ವಿಶಾಲ ವೃಕ್ಷ: ಈ ಮರ ಎಂದೆoದಿಗೂ ಅಮರ!
ಮರದೊಳಗೆ ಗುಹೆ ನಿರ್ಮಿಸಿ 30ಕ್ಕೂ ಅಧಿಕ ಜನರಿಗೆ ಆಶ್ರಯ ನೀಡುವಷ್ಟು ವಿಶಾಲ ವಿಸ್ತೀರ್ಣವನ್ನು ಹೊಂದಿದ `ಅಮರ ವೃಕ್ಷ’ ಬೆಳೆಸಲು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆ ಆಸಕ್ತಿವಹಿಸಿದೆ. ಇಲ್ಲಿನ ನರ್ಸರಿಗಳಲ್ಲಿ 300ರಷ್ಟು ಗಿಡಗಳನ್ನು ಬೆಳೆಸಲಾಗಿದ್ದು, ಅದರ ಆರೈಕೆ ನಡೆದಿದೆ. ಭಗವಾನ್ ಶ್ರೀಕೃಷ್ಣ…
ಕಾಗೇರಿ ಕೇಂದ್ರಕ್ಕೆ ಹೋಗಿ ಒಂದು ವರುಷ.. ಸಂಸದರ ಸಾಧನೆಗೆ ನೂರು ಹರುಷ
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತರ ಕನ್ನಡ ಸಂಸದರಾಗಿ ಇದೀಗ ಒಂದು ವರ್ಷ. ಹೀಗಾಗಿ ಅವರು ಹರ್ಷವ್ಯಕ್ತಪಡಿಸಿದ್ದು, ಒಂದು ವರ್ಷದ ಆಗು-ಹೋಗುಗಳ ಬಗ್ಗೆ ಹೇಳಿಕೊಂಡಿದ್ದಾರೆ. ಆರು ಬಾರಿ ವಿಧಾನಸಭೆಯ ಸದಸ್ಯರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 2024ರ ಜೂನ್ 4ರಂದು ರಾಜ್ಯ…
ಜನ ಮೆಚ್ಚಿದ ನಾಯಕನಿಗೆ 68ರ ಸಡಗರ!
ಬಡತನವನ್ನು ಮೆಟ್ಟಿ ನಿಂತು ಹೋರಾಟ ಹಾಗೂ ಸಂಘಟನೆ ಮೂಲಕ ರಾಜಕೀಯ ಪ್ರವೇಶಿಸಿ ಜನ ಸೇವೆಯಲ್ಲಿ ತೊಡಗಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ 2025ರ ಜೂನ್ 4ರ ಈ ದಿನ 68ನೇ ಹುಟ್ಟುಹಬ್ಬದ ಸಂಭ್ರಮ. ಲಾರಿ ಚಾಲಕನಾಗಿ ದುಡಿಮೆ…
ವನ್ಯಜೀವಿ ಓಡಾಟಕ್ಕೆ ಅಡ್ಡಬಂದ ವಾಹನ: ಅಪರಿಚಿತ ಕಾರಿಗೆ ಬಲಿಯಾದ ಜಿಂಕೆಯ ಜೀವನ!
ಜೊಯಿಡಾ-ದಾಂಡೇಲಿ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ಜಿಂಕೆಗೆ ಕಾರು ಗುದ್ದಿದೆ. ಪರಿಣಾಮ ಆ ಚಿಂಕೆ ರಸ್ತೆಯಲ್ಲಿಯೇ ಸಾವನಪ್ಪಿದೆ. ದಟ್ಟ ಅರಣ್ಯದಿಂದ ಕೂಡಿದ ಜೊಯಿಡಾ-ದಾಂಡೇಲಿ ಕಾಡು ಸೀಳಿಕೊಂಡು ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಆಗಾಗ ವನ್ಯಜೀವಿಗಳ ಅಪಘಾತ ನಡೆಯುತ್ತಿದೆ. ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನದಲ್ಲಿ…
MES ಕಾಲೇಜಿಗೆ ತುಂಬಲಾಗದ ನಷ್ಟ: ಬದುಕಿನ ಯಾತ್ರೆ ಮುಗಿಸಿದ ದೂರದೃಷ್ಠಿಯ ಉಪನ್ಯಾಸಕ
ಹೊಸ ವಿಚಾರ, ದೂರದೃಷ್ಠಿ ಹಾಗೂ ಪರಿಪೂರ್ಣ ವ್ಯಕ್ತಿತ್ವದ ಮೂಲಕ ಶಿರಸಿಯ ಎಂ ಇ ಎಸ್ ಕಲಾ ಮತ್ತು ವಿಜ್ಞಾನ ವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸಿದ್ದ ಎಸ್ ಆಯ್ ಭಟ್ಟ ಅವರು ಈ ದಿನ ನಮ್ಮನ್ನು ಅಗಲಿದ್ದಾರೆ. 34 ವರ್ಷಗಳ ಕಾಲ ಎಂ ಇ…
ಟಾಕ್ಟರ್ ಮೇಲಿದ್ದ ಯುವಕ ನೆಲಕ್ಕೆ ಹಾರಿ ಬಿದ್ದ: ಆತ ಇನ್ನಿಲ್ಲ!
ಚಲಿಸುತ್ತಿದ್ದ ಟಾಕ್ಟರ್ ಮೇಲಿದ್ದ ಬಿದ್ದ ಪರಿಣಾಮ ಮುಂಡಗೋಡಿನ ಸತೀಶ ತಳವಾರ ಸಾವನಪ್ಪಿದ್ದಾರೆ. ಎಲ್ಲರ ಜೊತೆ ಅನ್ಯೋನ್ಯವಾಗಿ ಜೀವಿಸುತ್ತಿದ್ದ ಸತೀಶ ತಳವಾರ ಅವರ ಬದುಕು 18ನೇ ವಯಸ್ಸಿಗೆ ಕೊನೆಯಾಗಿದೆ. ಮುಂಡಗೋಡಿನ ಹುಲಿಹೊಂಡದಲ್ಲಿ ಸತೀಶ ತಳವಾರ್ ವಾಸಿಸುತ್ತಿದ್ದರು. ಅವರು ಜೂನ್ 3ರಂದು ರಾಜು ಕಂಬಾರ…
ಶಿರಸಿ-ಕುಮಟಾ ರಸ್ತೆ: ಸಂಚಾರಕ್ಕೆ ಮುಕ್ತ
ಶಿರಸಿ-ಕುಮಟಾ ಮಾರ್ಗದಲ್ಲಿನ ಬೆಣ್ಣೆ ಹೊಳೆ ಸೇತುವೆ ಬಳಿ ರಸ್ತೆ ಕೊಚ್ಚಿ ಹೋಗಿದ್ದರಿಂದ ಆ ಭಾಗದ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಇದೀಗ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಸುಗಮ ವಾಹನ ಸಂಚಾರಕ್ಕಾಗಿ ಬೆಣ್ಣೆಹೊಳೆ ಸೇತುವೆಯಎಡಭಾಗದ ಅಪ್ರೋಚ್ ಸ್ಲಾಬ್ ಜೋಡಣೆ ಕಾರ್ಯವನ್ನು ತುರ್ತಾಗಿ ಮಾಡಲಾಗಿದೆ.…
ಎರಡು ವರ್ಷ ಕಳೆದರೂ ಬಾರದ ಸಬ್ಸಿಡಿ ಹಣ: ಅರಿವು ಕಾರ್ಯಕ್ರಮದಲ್ಲಿ ಅಸಮಧಾನ!
ಸರ್ಕಾರಿ ಯೋಜನೆಗಳ ಸಬ್ಸಿಡಿ ಹಣ ಸಮಯಕ್ಕೆ ಸರಿಯಾಗಿ ರೈತರ ಖಾತೆಗೆ ಜಮಾ ಆಗದ ಪರಿಣಾಮ ಸರ್ಕಾರಿ ಅಧಿಕಾರಿಗಳು ಮುಜುಗರ ಅನುಭವಿಸುತ್ತಿದ್ದಾರೆ. ಯಲ್ಲಾಪುರದಲ್ಲಿ ನಡೆದ `ನೈಸರ್ಗಿಕ ಕೃಷಿ ಅರಿವು ಕಾರ್ಯಕ್ರಮ’ದಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು, ಕಾರ್ಯಕ್ರಮ ಉದ್ಘಾಟಕರೇ ತಮ್ಮ ಭಾಷಣದಲ್ಲಿ ಸರ್ಕಾರದ…
ಈ ಸರ್ಕಾರಿ ಕಚೇರಿಗೆ ಭಾನುವಾರವೂ ಕೆಲಸ!
ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿ ಇನ್ಮುಂದೆ ಭಾನುವಾರವೂ ತೆರೆದಿರಲಿದೆ. 2 ಹಾಗೂ 4ನೇ ಶನಿವಾರದ ದಿನ ಸಹ ಈ ಕಚೇರಿಗೆ ರಜೆ ಇಲ್ಲ! ಸರ್ಕಾರದ ಆದಾಯ ವೃದ್ಧಿಸುವಲ್ಲಿ ಉಪನೋಂದಣಿ ಕಚೇರಿ ಕೊಡುಗೆ ದೊಡ್ಡದು. ಉಪನೋಂದಣಿ ಕಚೇರಿಯಲ್ಲಿನ ಭ್ರಷ್ಟಾಚಾರ ಆರೋಪಗಳು ಕಡಿಮೆ ಇಲ್ಲ.…
ರಾತ್ರಿ ಬರ್ತಾರೆ.. ಹಸು ಕದಿತಾರೆ: ಐಷಾರಾಮಿ ಕಾರಿಗೆ ನಕಲಿ ನೋಂದಣಿ!
ತರಕಾರಿ ವ್ಯಾಪಾರ, ವೆಲ್ಡಿಂಗ್ ಕೆಲಸ ಹಾಗೂ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಮೂವರು ಬಕ್ರೀದ್ ಹಬ್ಬದ ವೇಳೆ ಗೋ ಕಳ್ಳತನದ ಮೂಲಕ ಬಹುಬೇಗ ಶ್ರೀಮಂತರಾಗಲು ಉದ್ದೇಶಿಸಿದ್ದರು. ಶಿರಸಿ ಪೊಲೀಸರು ಅದಕ್ಕೆ ತಡೆಯೊಡ್ಡಿ ಆ ಮೂವರನ್ನು ಜೈಲಿಗೆ ಕಳುಹಿಸಿದರು. ಶಿವಮೊಗ್ಗದ ಭದ್ರಾವತಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ…
















