6

ಅಲೆಗಳ ಅಬ್ಬರ: ಕಡಲಿಗೆ ಬಂದ ಕಂಟೇನರ್!

ಭಟ್ಕಳದ ಜಾಲಿ ಕೋಡಿ ಸಮುದ್ರದಲ್ಲಿ 30ಮೀಟರ್ ಉದ್ದದ ಗಾತ್ರದ ಕಂಟೇನರ್ ತೇಲಿ ಬಂದಿದೆ. ಮಂಗಳವಾರ ಬೆಳಗಿನ ಜಾವ ಕಂಟೇನರ್ ಮರಳಿನಲ್ಲಿ ಸಿಕ್ಕಿ ಬಿದ್ದಿದ್ದು, ಇದನ್ನು ನೋಡಲು ಜನ ಮುಗಿ ಬಿದ್ದಿದ್ದಾರೆ.

ಸಮುದ್ರದ ಅಡಿಭಾಗದಲ್ಲಿನ ಕಲ್ಬಂಡೆಗಳಿಗೆ ಕಂಟೇನರ್ ಸಿಕ್ಕಿ ಬಿದ್ದಿದೆ. ಹೀಗಾಗಿ ಕಂಟೇನರ್ ಅಲ್ಲಿಂದ ಕದಲುತ್ತಿಲ್ಲ. 8 ಮೀಟರ್ ಅಗಲದ ಈ ಕಂಟೇನರ್ ಲಂಗರು ಹಾಕಿದ ಸ್ಥಿತಿಯಲ್ಲಿ ನಿಂತಿದೆ. ಕಂಟೇನರ್ ಮೇಲೆ `ಕೊಚ್ಚಿನ್ ಶಿಪ್ ಯಾರ್ಡ್’ ಎಂಬ ಬರಹವಿದೆ. ಕೇರಳದಿಂದ ಬೇರೆ ದೇಶಕ್ಕೆ ಸಾಗಾಟ ಮಾಡುವ ಹಡಗಿನಿಂದ ಈ ಕಂಟೇನರ್ ಬೇರೆಯಾಗಿರುವ ಅನುಮಾನ ಕಾಡುತ್ತಿದೆ.

ಅಲ್ಲಿನ ಮೀನುಗಾರರು ಹೇಳುವ ಪ್ರಕಾರ ಕಂಟೇನರ್’ನಿAದ ಕೆಲ ದೂರದಲ್ಲಿ ಹಡಗು ನಿಂತಿದೆ. ಆ ಕಂಟೇನರ್ ಅದೇ ಹಡಗಿನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಜಾಲಿ ಕೋಡಿ ಸಮುದ್ರ ತೀರಕ್ಕೆ ಬಂದ ಕಂಟೇನರ್ ನೋಡಲು ನೂರಾರು ಜನ ಬರುತ್ತಿದ್ದಾರೆ. ಕರಾವಳಿ ಕಾವಲು ಪಡೆಯ ಪೊಲೀಸ್‌ರು ಸ್ಥಳಕ್ಕೆ ದೌಡಾಯಿಸಿದ್ದಾರೆ.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page