ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದ ಶ್ರೀ ಸಿದ್ದೇಶ್ವರ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಪಶ್ಚಿಮ ಪದವೀಧರ ಮತಕ್ಷೇತ್ರದ ಅಭ್ಯರ್ಥಿಯಾದ ಎಸ್.ವಿ.ಸಂಕನೂರ ಪರ ಮತಯಾಚನೆಯನ್ನು ಮಾಡಿ,
ಅರಾಜಕತೆ ಸೃಷ್ಟಿ
ಕಬ್ಬಿನ ದರ ಕಾರ್ಖಾನೆಗಳು ಮತ್ತು ರಾಜ್ಯ ಸರ್ಕಾರ ನಿಗದಿ ಮಾಡಬೇಕು. ಸಕ್ಕರೆ ದರವನ್ನು ಕೇಂದ್ರ ಸರ್ಕಾರ ನಿಗದಿ ಮಾಡಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಚಿವ ಶಿವರಾಜ್ ಸಿಂಗ್ ನೇತೃತ್ವದಲ್ಲಿ ಸಮಿತಿ ಮಾಡಿದೆ. ರಾಜ್ಯ ಸರ್ಕಾರ ತನ್ನ ಕರ್ತವ್ಯ ಮರೆತಿದೆ. ರೈತರ ಪಾಲಿಗೆ ಇದ್ದೂ ಸತ್ತಂತಾಗಿದೆ. ಇಲ್ಲಿ ಆಡಳಿತ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಆರಾಜಕತೆ ಸೃಷ್ಟಿಸುತ್ತಿದ್ದಾರೆ. ಅಲ್ಲೊಬ್ಬ ದೀಡ್ ಪಂಡಿತ್ ನಾಯಕ ಇದ್ದಾನೆ. ಅಪರಾಧಿಯಾಗಿರುವವರು ಸುಪ್ರೀಂ ಕೋರ್ಟ್ಗೆ ಹೋಗಿ ಮನವಿ ಕೊಡುತ್ತಾರೆ. ಇದನ್ನೇ ಅರಾಜಕತೆ ಎನ್ನುತ್ತಾರೆ. ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೆ ಎನ್ನುತ್ತಾರೆ. ಕಾಂಗ್ರೆಸ್ ಆ ಮಟ್ಟಕ್ಕೆ ಇಳಿದಿದೆ. ಕಾಂಗ್ರೆಸನ್ನು ವಿಸರ್ಜನೆ ಮಾಡಿ ಸಿಜೆಪಿಯೊಳಗೆ ವಿಲೀನ ಮಾಡಿದರೆ ಒಳ್ಳೆಯದು ಎಂದು ಹೇಳಿದರು.
ಇವರಿಗೆ ವಿದೇಶದಿಂದ ಹಣ ಬರುತ್ತದೆ. ವಿದೇಶದಿಂದ ಹಣ ಪಡೆದು ದೇಶದಲ್ಲಿ ಆರಾಜಕತೆ ಸೃಷ್ಟಿಸುವ ದುಷ್ಟ ಶಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕು. ದೇಶದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿ ವೃದ್ಧಿ ದೃಷಿಯಿಂದ ಇಡೀ ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 2047 ಕ್ಕೆ ನಂಬರ್ ಒನ್ ಸ್ಥಾನದಲ್ಲಿರಲಿದೆ ಎಂದು ಹೇಳಿದೆ. ಅದಕ್ಕೆ ಎನ್ಸಿಪಿ ಸಂಸದೆ ಸುಪ್ರೀಯಾ ಸುಳೆ 2047 ನಾವ್ಯಾರು ಇರುವುದಿಲ್ಲ ಎಂದು ಹೇಳಿದರು. ಅದಕ್ಕೆ ನಾವ್ಯಾರು ಇರದಿದ್ದರೂ ಈ ದೇಶ ಇರುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಈ ದೇಶ ಇರುತ್ತದೆ. ಅದಕ್ಕಾಗಿ ನರೇಂದ್ರ ಮೋದಿಯವರು ವಿಕಸಿತ ಭಾರತ ಎಂದು ಹೇಳಿದ್ದಾರೆ. ಅಂದರೆ ಅತ್ಯಂತ ಕೆಳ ಸ್ತರದಿಂದ ಹಿಡಿದು ಒಳ್ಳೆಯ ಆಹಾರ, ಆರೋಗ್ಯ, ಕುಡಿಯುವ ನೀರು, ಕೈಗೆ ಕೆಲಸ, ಮನೆ, ಗೌರವಯುತ ಸ್ವಾಭಿಮಾನದ ಬದುಕು ಎಲ್ಲದಕ್ಕೂ ಆರ್ಥಿಕ ಮೂಲ ಸೌಲಭ್ಯ ಹಾಗೂ ಸಾಮಾಜಿಕ ಮೂಲ ಸೌಲಭ್ಯ ಒದಗಿಸುವುದು ಮೋದಿಯವರ ಗುರಿಯಾಗಿದೆ. 25 ಕೋಟಿ ಜನರನ್ನು ಬಡತನದಿಂದ ತೆಗೆದು ಹಾಕಿರುವ ನಾಯಕ ನರೇಂದ್ರ ಮೋದಿಯವರು, ಕಾಂಗ್ರೆಸ್ ನವರು ಗರೀಬಿ ಹಠಾವೊ ಅಂತ 60 ವರ್ಷ ಆಳಿದರು. ದೇಶದಲ್ಲಿ ದಾರಿದ್ಮ, ಇರಬೇಕು. ಅವರ ಹೆಸರಿನಲ್ಲಿ ಅವರು ರಾಜಕಾರಣ ಮಾಡುತ್ತಾರೆ. ಜನಸಂಖ್ಯೆ ಈ ದೇಶಕ್ಕೆ ಭಾರ ಅಂದಿದ್ದರು. ಮೋದಿಯವರು ಜನಸಂಖ್ಯೆಯನ್ನೇ ಆಸ್ತಿಯನ್ನಾಗಿ ಮಾಡಿದರು. ಮೋದಿಯವರು ಯುವಕರಿಗೆ ಕೌಶಲ್ಯ ತರಬೇತಿ ನೀಡಿ 3 ಕೋಟಿ ಜನರಿಗೆ ಉದ್ಯೋಗ ಒದಗಿಸಿದ್ದಾರೆ. ಮುಂದಿನ ವರ್ಷದಲ್ಲಿ ಮತ್ತೆ 3 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಾರೆ. ಮುದ್ರಾ ಯೋಜನೆ ಅಡಿಯಲ್ಲಿ 6 ಕೋಟಿ ಜನರಿಗೆ ಉದ್ಯೋಗ ಕೈಗೊಳ್ಳಲು ಸಹಾಯ ಮಾಡಿದ್ದಾರೆ ಎಂದು ಹೇಳಿದರು.








