6

ನ.23 ರಂದು ಒಂದು ದಿನದ ರಫ್ತು ಪ್ರೋತ್ಸಾಹಧನ

ಜವಳಿ ವಲಯದ ಸಂಭಾವ್ಯ ರಫ್ತು ಉದ್ದಿಮೆದಾರರಿಗೆ ಒಂದು ದಿನದ ರಫ್ತು ಪ್ರೊತ್ಸಾಹನ ಕಾರ್ಯಗಾರ ನ.23 ರಂದು ಸೋಮುವಾರ ಬೆಳಗ್ಗೆ 10 ಗಂಟೆಗೆ ಹಾವೇರಿ ನಗರದ “ಗುಡ್ಡೆಪ್ಪ ಹಳ್ಳಿಕೇರಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಜವಳಿ ಮತ್ತು ಸಕ್ಕರೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಉದ್ಘಾಟನೆ ನೆರವೇರಿಸಿ, ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲೆಯ ಕೈಮಗ್ಗ/ವಿದ್ಯುತ್ ಮಗ್ಗ/ಕಾಟನ್ ಜಿನ್ನಿಂಗ್ &ಪ್ರೆಸ್ಸಿಂಗ್/ಗಾಮೆರ್ಂಟ್ಸ್ ಘಟಕಗಳ ಮಾಲೀಕರು ಹಾಗೂ ಜವಳಿ ಘಟಕ ಸ್ಥಾಪನೆಗೆ ಆಸಕ್ತಿ ಹೊಂದಿದ ಉದ್ದಿಮೆದಾರರು ಈ ಕಾರ್ಯಗಾರದಲ್ಲಿ ಭಾಗವಹಿಸಿ ಜವಳಿ ಉತ್ಪನ್ನಗಳ ರಫ್ತು ಕುರಿತು ಮಾಹಿತಿಯನ್ನು ವಿಷಯ ತಜ್ಞರಿಂದ ಪಡೆದು ಕಾರ್ಯಕ್ರಮದ ಸದುಪಯೋಗ ಪಡೆಯಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಪಂಚಾಯತ್ ಹಾವೇರಿ ಜಿಲ್ಲಾ ಆಡಳಿತ ಭವನ, ‘ಸಿ’ ಬ್ಲಾಕ್ ಮೊದಲನೇ ಮಹಡಿ, ಕೊಠಡಿ ಸಂಖ್ಯೆ 43, ದೇವಗಿರಿ, ಹಾವೇರಿ-581110 ದೂರವಾಣಿ ಸಂಖ್ಯೆ 08375-249050ಗೆ ಸಂಪರ್ಕಿಸಬಹುದಾಗಿದೆ.

  • Related Posts

    ಹಾವೇರಿ ಮಹಿಳಾ ಕಾಂಗ್ರೆಸ್‌ನಿಂದ ಇಂದಿರಾ ಗಾಂಧಿ ಜನ್ಮದಿನಾಚರಣೆ!

    Share this… Facebook Pinterest Twitter Linkedin Whatsappಹಾವೇರಿಯಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ: ಮಾಜಿ ಪ್ರಧಾನಿಯ ಕೊಡುಗೆ ಸ್ಮರಿಸಿದ ಮಹಿಳಾ ಕಾಂಗ್ರೆಸ್ ಮುಖಂಡರು ಹಾವೇರಿ: ಭಾರತದ ಮಾಜಿ ಪ್ರಧಾನಮಂತ್ರಿ ಹಾಗೂ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ದಿವಂಗತ ಇಂದಿರಾ ಗಾಂಧಿಯವರ ಜನ್ಮದಿನದ…

    ರಾಜ್ಯ ಮಟ್ಟದ 19 ವರ್ಷದೊಳಗಿನ ಬಾಲಕಿಯರ ಕಬಡ್ಡಿ ಕ್ರೀಡಾಕೂಟ

    Share this… Facebook Pinterest Twitter Linkedin Whatsappಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಬ್ಯಾಡಗಿ ಎಸ್.ಜೆ.ಜೆ.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನ.26 ರಿಂದ 28ರವರೆಗೆ ಮೂರು ದಿನಗಳ ಕಾಲ ಬ್ಯಾಡಗಿ ಪಟ್ಟಣದ ಎಸ್.ಜೆ.ಜೆ.ಎಂ.ತಾಲೂಕು ಕ್ರೀಡಾಂಗಣದಲ್ಲಿ ಜರುಗಲಿದ್ದು, ನ.26…

    You cannot copy content of this page