ಗಾಂಜಾ ವ್ಯಾಪಾರಕ್ಕೆ ಸ್ಮಶಾನವೇ ಮಳಿಗೆ!
ಸ್ಮಶಾನಕ್ಕೆ ತೆರಳಿ ಗಾಂಜಾ ಮಾರಾಟ ಮಾಡುತ್ತಿದ್ದ ರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 20 ಸಾವಿರ ರೂ ಮೌಲ್ಯದ ಗಾಂಜಾ ಜೊತೆ 2 ಲಕ್ಷ ರೂ ಮೌಲ್ಯದ ರಿಕ್ಷಾ ಸಹ ಜಪ್ತುಪಡಿಸಿಕೊಂಡಿದ್ದಾರೆ. ಕಾರವಾರದ ಕೋಡಿಭಾಗ ಬಳಿಯ ಪಂಚರಿಷಿವಾಡದ ನಾಗರಾಜ ಸಿರ್ಸಿಕರ್ (34)…
ಅಗ್ನಿ ಆಕಸ್ಮಿಕ: ಸುಟ್ಟು ಕರಕಲಾದ ಕೊಟ್ಟಿಗೆ
ಆಕಸ್ಮಿಕ ಅಗ್ನಿ ಅವಘಡದಿಂದ ನಾಗೇಂದ್ರ ಹೆಗಡೆ ಅವರ ಮಾಲಕತ್ವದ ಕೊಟ್ಟಿಗೆ ಸುಟ್ಟು ಕರಕಲಾಗಿದೆ. ಕಣ್ಮುಂದೆಯೇ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡರೂ ಕೊಟ್ಟಿಗೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಲ್ಲಾಪುರ ತಾಲೂಕಿನ ಹಾಸಣಗಿ ಗ್ರಾ ಪಂ ವ್ಯಾಪ್ತಿಯ ಮಂಚಿಕೇರಿಯಲ್ಲಿ ನಾಗೇಂದ್ರ ಶಂಬು ಹೆಗಡೆ ಮಾಳಕೊಪ್ಪ ಅವರು…
ಸಾಕ್ಷಿ ಹೇಳಿದ ವಿಷಯ: ಜಹೀರ – ಅನೀಶ ನಡುವೆ ಮತ್ತೆ ಜಟಾಪಟಿ!
ಶಿರಸಿ ಖಾಜಿಗಲ್ಲಿಯ ಜಹೀರ್ ಶೇಖ್ ಹಾಗೂ ಕರೆಗುಂಡೆಯ ಅನೀಶಗೌಸ್ ತಹಶೀಲ್ದಾರ್ ಮತ್ತೆ ಜಗಳ ಮಾಡಿಕೊಂಡಿದ್ದಾರೆ. ಅವರ ಜಗಳ ಬಗೆಹರಿಸಲಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಜಹೀರ್ ಶೇಖ್ ಹಾಗೂ ಅನೀಶಗೌಸ್ ತಹಶೀಲ್ದಾರ್ ಜಗಳ ಇದೇ ಮೊದಲಲ್ಲ. ಎರಡು ತಿಂಗಳ…
ವಾಸದ ಮನೆ ಅಗ್ನಿಗೆ ಆಹುತಿ: ಸಂತ್ರಸ್ತರಿಗೆ ಅನಂತಮೂರ್ತಿ ನೆರವು
ಅಗ್ನಿ ಅವಘಡದಿಂದ ಮನೆ ಸುಟ್ಟುಕೊಂಡಿದ್ದ ಕುಟುಂಬದವರಿಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಆರ್ಥಿಕ ನೆರವು ನೀಡಿದ್ದಾರೆ. ಶಿರಸಿ ತಾಲೂಕಿನ ಗೋಳಿಯ ಮಂಜಪ್ಪನಮುರ್ಕಿಯಲ್ಲಿ ಮಹಾದೇವಿ ಸುಧಾರಕ ಮಡಿವಾಳ ಅವರ ಮನೆ ಬುಧವಾರ ಸುಟ್ಟು ಕರಕಲಾಗಿತ್ತು. ಈ ವಿಷಯ ಅರಿತ ಅನಂತಮೂರ್ತಿ ಹೆಗಡೆ ಅಲ್ಲಿಗೆ…
ಸುಕ್ರಜ್ಜಿ ಅಗಲುವಿಕೆಗೆ ಗಣ್ಯರ ಕಂಬನಿ
ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸುಕ್ರಜ್ಜಿ ಹಾಗೂ ತಮ್ಮ ನಡುವೆ ಇದ್ದ ಭಾವನಾತ್ಮಕ ಸಂಬoಧವನ್ನು ನೆನೆದು ಅವರೆಲ್ಲರೂ ಕಣ್ಣೀರಾಗಿದ್ದಾರೆ. `ಸುಕ್ರಿ ಬೊಮ್ಮ ಗೌಡ ಅವರು ಬಾಲ್ಯದಲ್ಲಿದ್ದಾಗ ತಮ್ಮ ತಾಯಿ ಮೂಲಕ ಜಾನಪದ ಹಾಡುಗಳನ್ನು…
ಕಿಡಿಗೇಡಿ ಮಾತಿಗೆ ಕೂಗಾಡಿದ ಭೂಪತಿ: ಚಿನ್ನ ಕದ್ದ ಕಳ್ಳಿಗಾಗಿ ಮುಂದುವರೆದ ಹುಡುಕಾಟ!
ಕಿಡಿಗೇಡಿ ಅರ್ಚಕರ ಮಾತು ನಂಬಿ ಗೋಕರ್ಣ ದೇವಾಲಯ ಆಡಳಿತ ಮಂಡಳಿಯವರ ಮೇಲೆ ಅನುಮಾನಪಟ್ಟಿದ್ದ ಭೂಪತಿ ಇದೀಗ ಸ್ವತಃ ಕಾರ್ಯಾಚರಣೆಗಿಳಿದು ಚಿನ್ನ ಕದ್ದವರ ಹುಡುಕಾಟ ಶುರು ಮಾಡಿದ್ದಾರೆ. ಮತ್ತೆ ಶ್ರೀಕ್ಷೇತ್ರಕ್ಕೆ ಬಂದ ಅವರು ಸಿಸಿ ಕ್ಯಾಮರಾ ದಾಖಲೆಗಳನ್ನು ಪರಿಶೀಲಿಸಿ ತಮ್ಮ ಬ್ರೆಸ್ಲೈಟ್ ಎಗರಿಸದವರನ್ನು…
ಕೋಟಿ ರೂ ಸಂಗ್ರಹಕ್ಕೆ ಕಠಿಣ ಕ್ರಮ: ಕಾಸು ಕೊಟ್ಟವರಿಗೆ ಮಾತ್ರ ಕುಡಿಯುವ ನೀರು!
ಕುಡಿಯುವ ನೀರುಪಡೆದು ಅದರ ತೆರಿಗೆ ಪಾವತಿ ಮಾಡದವರ ನೀರಿನ ಸಂಪರ್ಕ ಕಡಿತಗೊಳಿಸಲು ಶಿರಸಿ ನಗರಸಭೆ ನಿರ್ಧರಿಸಿದೆ. ಹೀಗಾಗಿ ಕಾಸು ಕೊಟ್ಟವರಿಗೆ ಮಾತ್ರ ಇಲ್ಲಿ ಕುಡಿಯಲು ನೀರು ಸಿಗುತ್ತದೆ! ಶಿರಸಿ ನಗರದಲ್ಲಿ 12 ಸಾವಿರಕ್ಕೂ ಹೆಚ್ಚಿನ ಜನ ನಗರಸಭೆಯ ಕುಡಿಯುವ ನೀರು ಪಡೆಯುತ್ತಾರೆ.…
ಮೊಬೈಲ್ ಮಾಯೆ: ಆತ್ಮಹತ್ಯೆಗೆ ಶರಣಾದ ಕಾಲೇಜು ಕನ್ಯೆ!
ವಿಪರೀತ ಮೊಬೈಲ್ ಮಾಯೆಗೆ ಒಳಗಾದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮೊಬೈಲ್ ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಳಿಯಾಳ ತಾಲೂಕಿನ ಬೆಳವಟಿಕೆ ಗ್ರಾಮದ ಮಾನಸಾ ಮಿರಾಶಿ (17) ಸದಾ ಮೊಬೈಲ್ ನೋಡುತ್ತಿದ್ದರು. ಹೀಗಾಗಿ ಅವರ ಮನೆಯವರು ಆ ಮೊಬೈಲ್ ಕಿತ್ತುಕೊಂಡಿದ್ದರು. ಎಷ್ಟೇ ಕಾಡಿ-ಬೇಡಿದರೂ ಮೊಬೈಲ್…
ಉಳಿತಾಯ ಖಾತೆ: ಬ್ಯಾಂಕಿನಲ್ಲಿದ್ದ 20 ಲಕ್ಷ ರೂ ಕಳ್ಳರ ಪಾಲು!
ಕೆನರಾ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 20 ಲಕ್ಷ ರೂ ಹೊಂದಿದ್ದ ಜಗದೀಶ ನಾಯ್ಕರ ಹಣ ಕಳ್ಳರ ಪಾಲಾಗಿದೆ. ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ ಸೈಬರ್ ವಂಚಕರು ಆ ಹಣ ಲಪಟಾಯಿಸಿದ್ದಾರೆ. ಭಟ್ಕಳದ ಬೆಳಕೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಬೆಳಕೆಯ ಜಗದೀಶ…
ಅಕ್ರಮ ಬಯಲಿಗೆಳೆಯಲು ಹೋದವ ಅಮಾನತು!
ಆಯುಷ್ ಇಲಾಖೆಯಲ್ಲಿನ ಅಕ್ರಮ ಬಯಲು ಮಾಡುವುದಾಗಿ ಹೇಳಿಕೊಂಡು ಓಡಾಡಿಕೊಂಡಿದ್ದ ಅದೇ ಇಲಾಖೆಯ ಗುತ್ತಿಗೆ ವೈದ್ಯ ಸಂಗಮೇಶ ಪೆರಂಡಿ ಅಮಾನತಾಗಿದ್ದಾರೆ. ಕರ್ತವ್ಯ ಲೋಪದ ಕಾರಣ ನೀಡಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸಂಗಮೇಶ ಪೆರಂಡಿ ಅವರನ್ನು ಅಮಾನತು ಮಾಡಿದ್ದಾರೆ. ಕೇಂದ್ರ ಪುರಸ್ಕೃತ ಯೋಜನೆ…







