ಪೂಜೆಯ ಮಾರನೇ ದಿನವೇ ಬೈಕ್ ಸವಾರರ ಮೇಲೆರಗಿದ ಹುಲಿಯಪ್ಪ
ದೀಪಾವಳಿ ಪ್ರಯುಕ್ತ ಹುಲಿಯಪ್ಪನಿಗೆ ಪೂಜೆ ಸಲ್ಲಿಸಿದ ಮಾರನೇ ದಿನವೇ ಹುಲಿಯಪ್ಪನ ದಾಳಿಯಿಂದ ಇಬ್ಬರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಮಾಗೋಡ ಸಮೀಪದ ಚಂದಗುಳಿ ಬಳಿ ನಡೆದಿದೆ. ಮಾಗೋಡಿನ ಬಕ್ಕಳತಗ್ಗಿನ ಗಣೇಶ ಸಿದ್ದಿ ಹಾಗೂ ದೇಸಾಯಿಮನೆಯ ಧನಂಜಯ ಸಿದ್ದಿ ಎಂಬವರು ಬೈಕ್ ಮೇಲೆ…
ಹುತ್ಕಂಡ ಕ್ರಾಸ್ ನಲ್ಲಿ ಬಸ್ ನಿಲುಗಡೆಗೆ ಆಗ್ರಹ
ಯಲ್ಲಾಪುರ ತಾಲೂಕಿನ ಹುತ್ಕಂಡ ಕ್ರಾಸ್ ನಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ಗ್ರಾಮಸ್ಥರು ಪಟ್ಟಣದಲ್ಲಿ ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್ ಅವರಿಗೆ ಮನವಿ ಸಲ್ಲಿಸಿದರು. ಯಲ್ಲಾಪುರ-ಶಿರಸಿ ಮಾರ್ಗದ ಹುತ್ಕಂಡ ಕ್ರಾಸ್ ನಲ್ಲಿ ಬಸ್ ನಿಲುಗಡೆ ಮಾಡದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಬೆಳಿಗ್ಗೆ ಸಮಯಕ್ಮೆ…
ಆರತಿಬೈಲ್ ಘಟ್ಟದಲ್ಲಿ ಅಪಘಾತ: ಕಾರಿಗೆ ಗುದ್ದಿದ ಬೈಕ್
ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ನಡೆದಿದೆ. ಅಂಕೋಲಾ ತಾಲೂಕಿನ ಹಳವಳ್ಳಿಯ ದೇವೇಂದ್ರ ನಾಗೇಶ ಸಿದ್ದಿ ಗಾಯಗೊಂಡ ವ್ಯಕ್ತಿ. ಈತ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಬೈಕ್ ಮೇಲೆ…
ಹೋರಾಟಕ್ಕೆ ಹೊಳೆ ಹುಲಿಯಪ್ಪನ ಅನುಗ್ರಹ
ಯಲ್ಲಾಪುರ ತಾಲೂಕಿನಲ್ಲಿ ಸೋಮವಾರ ನರಕ ಚತುದರ್ಶಿಯನ್ನು ಸಾಂಪ್ರದಾಯಿಕ ಶೃದ್ಧಾಭಕ್ತಿಯಿಂದ ಆಚರಿಸಲಾಯಿತು. ಬೇಡ್ತಿ ಸೇತುವೆಯ ಬಳಿ ಇರುವ ಹೊಳೆಹುಲಿಯಪ್ಪನಿಗೆ ಸುತ್ತಮುತ್ತಲಿನ ಸಾವಿರಾರು ಜನರು ಭಕ್ತರು ಆಗಮಿಸಿ ಹಣ್ಣುಕಾಯಿ ಸೇವೆ ಸಲ್ಲಿಸಿದರು. ಹುಲಿಯಪ್ಪ ದೇವರಿಗೆ ನೈವೇದ್ಯಕ್ಕೆಂದು ಒಡೆದು ಇಡಲಾದ ತೆಂಗಿನಕಾಯಿಗಳ ಸಾಲು ಗಮನ ಸೆಳೆಯಿತು.…
ಬಳಗಾರ ಕ್ರಾಸ್ ಬಳಿ ಇನ್ನೊಂದು ಲಾರಿ ಪಲ್ಟಿ: ಹೆದ್ದಾರಿ ಮೇಲೆ ಕಲ್ಲಿದ್ದಲು ರಾಶಿ
ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದ ಬಳಗಾರ ಕ್ರಾಸ್ ಅಪಘಾತದ ಕೇಂದ್ರವೇ ಆಗುತ್ತಿದೆ. ರವಿವಾರ ಸಂಜೆಯ ಹೊತ್ತಿಗೆ ಬಳಗಾರ ಕ್ರಾಸ್ ಸಮೀಪದಲ್ಲೇ ಇನ್ನೊಂದು ಲಾರಿ ಪಲ್ಟಿಯಾಗಿದೆ. ಮಂಗಳೂರಿನಿಂದ ಕೊಪ್ಪಳಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿಯೇ ಪಲ್ಟಿಯಾಗಿದೆ.…
ಬಸ್ ನಲ್ಲೇ ಸಾವು ಕಂಡ ಪ್ರಯಾಣಿಕ
ಪ್ರಯಾಣಿಕನೊಬ್ಬ ಬಸ್ ನಲ್ಲೇ ಮೃತಪಟ್ಟ ಘಟನೆ ಯಲ್ಲಾಪುರದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ವಸಂತ ಬಾಳಪ್ಪ ಬಂಡಿವಡ್ಡರ್ (63) ಮೃತ ವ್ಯಕ್ತಿ. ಈತ ಬಸ್ ನಲ್ಲಿ ಮಂಗಳೂರಿನಿಂದ ಬೈಲಹೊಂಗಲಕ್ಕೆ ಹೋಗುತ್ತಿದ್ದ. ಕುಡಿಯುವ ಚಟ ಹಾಗೂ ಫಿಟ್ಸ್ ಕಾಯಿಲೆ ಹೊಂದಿದ್ದ ಈತ ಬಸ್…
ಭಾರದ್ವಾಜಾಶ್ರಮದಲ್ಲಿ ಧನ್ವಂತರಿ ಉತ್ಸವ
ಎಲ್ಲಾ ರೋಗಬಾಧೆಗಳು ನಿವಾರಣೆ ಹಾಗೂ ರಾಷ್ಟ್ರಕ್ಷೇಮದ ಸಂಕಲ್ಪದೊಂದಿಗೆ ಯಲ್ಲಾಪುರ ತಾಲೂಕಿನ ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ಧನ್ವಂತರಿ ಜಯಂತಿ- ಧನ್ವಂತರಿ ಉತ್ಸವ ನೆರವೇರಿತು. 30 ವೈದಿಕರಿಂದ ಧನ್ವಂತರಿ ಹವನ ಹಾಗೂ 25 ಮಾತೆಯರಿಂದ ಸಂಪೂರ್ಣ ಭಗವದ್ಗೀತಾ ಪಾರಾಯಣಗಳು ನಡೆದವು. ಇದೇ ಸಂದರ್ಭದಲ್ಲಿ ಭೂಮಿಪೂಜೆ, ವೃಕ್ಷಪೂಜೆಯೊಂದಿಗೆ…
ಆರತಿಬೈಲ್ ಘಟ್ಟದಲ್ಲಿ ಮತ್ತೊಂದು ಲಾರಿ ಪಲ್ಟಿ
ಇತ್ತೀಚಿನ ದಿನಗಳಲ್ಲಿ ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ವಾಹನಗಳು ಪಲ್ಟಿಯಾಗುವ ಘಟನೆಗಳು ಹೆಚ್ಚುತ್ತಿವೆ. ಭಾನುವಾರವೂ ಒಂದು ಲಾರಿ ರಸ್ತೆ ಪಕ್ಕ ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದ ಬಳಗಾರ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ…
ಮರಕ್ಕೆ ಗುದ್ದಿದ ಎಸ್.ಆರ್.ಎಸ್ ಬಸ್: ಮುರಿಯಿತು ಚಾಲಕನ ಕಾಲು
ಖಾಸಗಿ ಬಸ್ ಸ್ಟೇರಿಂಗ್ ಲಾಕ್ ಆಗಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮುಂಬೈಯಿಂದ ಗೋವಾಗೆ ಹೋಗುತ್ತಿದ್ದ ಎಸ್.ಆರ್.ಎಸ್ ಬಸ್ ನ ಸ್ಟೇರಿಂಗ್ ಲಾಕ್ ಆಗಿದ್ದು, ಹಳಿಯಾಳ ಕ್ರಾಸ್…
ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಸಮಾವೇಶ: ಸಂಘಟಿತ ಹೋರಾಟಕ್ಕೆ ಸ್ವರ್ಣವಲ್ಲೀ ಶ್ರೀಗಳ ಕರೆ
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಬೇಡ್ತಿ-ವರದಾ ನದಿ ಜೋಡಣೆ ವಿರುದ್ಧ ಬ್ರಹತ್ ಪ್ರತಿಭಟನಾ ಬೈಕ್ ರ಼್ಯಾಲಿ ಹಾಗೂ ಸಮಾವೇಶ ಯಲ್ಲಾಪುರ ತಾಲೂಕಿನ ತುಂಬೆಬೀಡಿನಲ್ಲಿ ನಡೆಯಿತು. ವೃಕ್ಷಾರೋಪಣ ನೆರವೇರಿಸಿ ಸಮಾವೇಶ ಉದ್ಘಾಟಿಸಿದ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಜನಪ್ರತಿನಿಧಿಗಳನ್ನು ಭೇಟಿಯಾಗಿ…
















