6
ಮರಕ್ಕೆ ಗುದ್ದಿದ ಎಸ್.ಆರ್.ಎಸ್ ಬಸ್: ಮುರಿಯಿತು ಚಾಲಕನ ಕಾಲು

ಖಾಸಗಿ ಬಸ್ ಸ್ಟೇರಿಂಗ್ ಲಾಕ್ ಆಗಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮುಂಬೈಯಿಂದ ಗೋವಾಗೆ ಹೋಗುತ್ತಿದ್ದ ಎಸ್.ಆರ್.ಎಸ್ ಬಸ್ ನ ಸ್ಟೇರಿಂಗ್ ಲಾಕ್ ಆಗಿದ್ದು, ಹಳಿಯಾಳ ಕ್ರಾಸ್…

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಸಮಾವೇಶ: ಸಂಘಟಿತ ಹೋರಾಟಕ್ಕೆ ಸ್ವರ್ಣವಲ್ಲೀ ಶ್ರೀಗಳ‌ ಕರೆ

ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಬೇಡ್ತಿ-ವರದಾ ನದಿ ಜೋಡಣೆ ವಿರುದ್ಧ ಬ್ರಹತ್ ಪ್ರತಿಭಟನಾ ಬೈಕ್ ರ಼್ಯಾಲಿ ಹಾಗೂ ಸಮಾವೇಶ ಯಲ್ಲಾಪುರ ತಾಲೂಕಿನ ತುಂಬೆಬೀಡಿನಲ್ಲಿ ನಡೆಯಿತು. ವೃಕ್ಷಾರೋಪಣ ನೆರವೇರಿಸಿ ಸಮಾವೇಶ ಉದ್ಘಾಟಿಸಿದ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಜನಪ್ರತಿನಿಧಿಗಳನ್ನು ಭೇಟಿಯಾಗಿ…

ಅಂತೂ ಸಿಕ್ಕಿಬಿದ್ದ ಚಿನ್ನದ ಕಳ್ಳ

ಯಲ್ಲಾಪುರ ತಾಲೂಕಿನ ವಿವಿಧೆಡೆ ಬಂಗಾರ, ಹಣ ದೋಚುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹಾಸಣಗಿ ಗ್ರಾ.ಪಂ.ನ ಮಡಿವಾಳ ಕೇರಿಯ ಈಶ್ವರ ಮಂಜುನಾಥ ಸಿದ್ದಿ ಬಂಧಿತ ಯುವಕ. ಕೂಲಿ ಕೆಲಸ ಮಾಡುತ್ತಿದ್ದ ಈತ, ಕೆಲಸದ ನೆಪದಲ್ಲಿ ಮನೆಗಳಿಗೆ ಹೋಗುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದೇ, ಬೀಗ…

ಕೈಗಡಿ ಹೊಳೆಯಲ್ಲಿ ಮುಳುಗಿದ ಸಾಗರನದ್ದು ಸಹಜ ಸಾವಲ್ಲ, ಕೊಲೆ: ಕುಟುಂಬದವರಿಂದ ದೂರು

ಕೈಗಡಿ ಸಮೀದ ಹೊಳೆಯಲ್ಲಿ ಮುಳುಗಿ ಮೃತಪಟ್ಟ ಯಲ್ಲಾಪುರ ಪಟ್ಟಣದ ಸಬಗೇರಿಯ ಸಾಗರ ದೇವಾಡಿಗ ಸಹಜವಾಗಿ ಸತ್ತಿಲ್ಲ. ಬರ್ತಡೆ ಪಾರ್ಟಿ ನೆಪದಲ್ಲಿ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಮೃತ ಯುವಕನ ತಂದೆ ರಾಮಾ ನಾರಾಯಣ ದೇವಾಡಿಗ…

ನಾಳೆ ಬೆಳಿಗ್ಗೆಯಿಂದ ಸಂಜೆಯವರೆಗೂ ಕರೆಂಟ್ ಇರಲ್ಲ: ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಯಲ್ಲಾಪುರದ ಹೆಸ್ಕಾಂ ಫೀಡರ್ ನ 11 ಕೆವಿ ಮಾರ್ಗಗಳ ತುರ್ತು ನಿರ್ವಹಣಾ ಕಾರ್ಯ ಅಕ್ಟೋಬರ್ 18 ರಂದು ನಡೆಯಲಿದೆ. ಯಲ್ಲಾಪುರ ಪಟ್ಟಣ, ತಟಗಾರ ಮತ್ತು ಬನಾನಾ ಕೌಂಟಿ ರೆಸಾರ್ಟ್ ವ್ಯಾಪ್ತಿಯ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಅಕ್ಟೋಬರ್ 18 ರ ಬೆಳಿಗ್ಗೆ 10…

ಯಲ್ಲಾಪುರ ಟಿಎಂಎಸ್: ಆಡಳಿತಾಧಿಕಾರಿ ನೇಮಕ ಆದೇಶ ರದ್ದು

ಯಲ್ಲಾಪುರದ ಟಿಎಂಎಸ್ (ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ) ಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಸಹಕಾರಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಕಳೆದ ಸೆಪ್ಟೆಂಬರ್ 28 ರಂದು ಟಿಎಂಎಸ್ ಆಡಳಿತ ಮಂಡಳಿಯ ಆಯ್ಕೆಗಾಗಿ ಚುನಾವಣೆ ನಡೆದಿದ್ದರೂ, ಚುನಾವಣೆಯ ವಿಚಾರವಾಗಿ…

ಆರತಿಬೈಲ್ ಘಟ್ಟದಲ್ಲಿ ಗಟಾರಕ್ಕುರುಳಿದ ಕಾರು

ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ಗಟಾರದಲ್ಲಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಕಾರು ಆರತಿಬೈಲ್ ಘಟ್ಟದ ಇಳಿಜಾರಿನ ಆರಂಭದಲ್ಲಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ…

ಹೆದ್ದಾರಿಯ ಹೊಂಡಕ್ಕಿಳಿದು ಹೊರಟ್ಟಿಯವರ ಕಾರು ಪಂಕ್ಚರ್!

ಯಲ್ಲಾಪುರ ತಾಲೂಕಿನ ಮಾವಳ್ಳಿ‌ ಕ್ರಾಸ್ ಸಮೀಪ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಾರಿನ ಎರಡು ಟೈರ್ ಗಳು ಏಕಾಏಕಿ ಒಡೆದು, ಪಂಕ್ಚರ್ ಆಗಿ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ…

ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ತುಂಬೆಬೀಡಿನಲ್ಲಿ ಜನಜಾಗೃತಿ ಅಭಿಯಾನ ಅಕ್ಟೋಬರ್ 19 ರಂದು: ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯ

ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಅ.19 ರಂದು ಬೆಳಗ್ಗೆ 10.30 ಕ್ಕೆ ಯಲ್ಲಾಪುರ ತಾಲೂಕಿನ ಮಂಚಿಕೇರಿ ಸಮೀಪದ ತುಂಬೆಬೀಡು ಬಳಿ ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಜನಜಾಗೃತಿ ಅಭಿಯಾನ ನಡೆಯಲಿದೆ. ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಅವರ…

ಚದುರಂಗದ ಚತುರ ಅಶ್ವನ್ ರಾಜ್ಯಮಟ್ಟಕ್ಕೆ ಆಯ್ಕೆ

ಶಿರಸಿಯಲ್ಲಿ ನಡೆದ 14ವರ್ಷ ವಯೋಮಿತಿಯ ಬಾಲಕರ ಚೆಸ್ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ ಬೀಗಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯಾದ ಅಶ್ವನ ಪಿಂಟೋ ಉತ್ತಮ ಪ್ರದರ್ಶನ ತೋರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ‌ ಗ್ರಾಮೀಣ ಪ್ರದೇಶದ ಶಾಲೆಯ ಈ…

You cannot copy content of this page