6
ಗೂಡಂಗಡಿ ಮೇಲೆ ದಾಳಿ: ಗೋವಾ ಸರಾಯಿ ಮಾರಾಟಕ್ಕೆ ತಡೆ!

ಕಾರವಾರ: ಮುದುಗಾದ ಗೂಡಗಂಡಿಯಲ್ಲಿ ಗೋವಾ ಸರಾಯಿ ಮಾರುತ್ತಿದ್ದ ಗಣಪತಿ ಹರಿಕಂತ್ರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಮುದುಗಾ ಕಾಲೋನಿಯ ಗಣಪತಿ ಹರಿಕಂತ್ರ (65) ಮುದುಗಾದಲ್ಲಿ ಅಂಗಡಿ ಹೊಂದಿದ್ದಾರೆ. ಆಗಾಗ ಗೋವಾಗೆ ಹೋಗುವ ಅವರು ಅಲ್ಲಿ ಅಗ್ಗದ ಬೆಲೆಗೆ ಸಿಗುವ ಸರಾಯಿ ತಂದು…

ದುಷ್ಕರ್ಮಿಗಳ ದಾಳಿ | ಪೆಟ್ಟಾದರೂ ಕೆಲಸಕ್ಕೆ ಹಾಜರಾದ ಪಿಎಸ್‌ಐ!

ಮುಂಡಗೋಡ: ಶನಿವಾರ ನಸುಕಿನಲ್ಲಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಮೈ-ಕೈ ಪೆಟ್ಟು ಮಾಡಿಕೊಂಡಿರುವ ಪಿಎಸ್‌ಐ ಪರಶುರಾಮ ಮಿರ್ಚಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೈ-ಕೈ ನೋವು ಮಾಡಿಕೊಂಡಿದ್ದರೂ ಅದನ್ನು ಮರೆತು ಅವರು ಈ ದಿನ ಕೆಲಸಕ್ಕೆ ಹಾಜರಾಗಿದ್ದಾರೆ. ಯಲ್ಲಾಪುರದ ಹಳಿಯಾಳ…

ಸಮುದ್ರಕ್ಕೆ ಬಿದ್ದ ಮೀನು ಕಾರ್ಮಿಕ: ಸಾವು

ಭಟ್ಕಳ: ಮೀನುಗಾರಿಕೆಗೆ ತೆರಳಿದ ಮೀನು ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ತೆಂಗಿನಗುoಡಿಯಲ್ಲಿ ವಾಸವಾಗಿರುವ ಛತ್ತಿಸಘಡದ ಪಂಕಜ್ ಭರತ್ `ವೈಲಂಕಿನಿ’ ಬೋಟಿನಲ್ಲಿ ಕೆಲಸಕ್ಕಿದ್ದರು. ಜನವರಿ 8ರಂದು ಅವರು ಬೋಟಿನಲ್ಲಿ ಮೀನು ಹಿಡಿಯಲು ಹೋಗಿದ್ದರು. ಊಟ ಮುಗಿಸಿ ಕೈ ತೊಳೆಯುವಾಗ ಅವರು ಸಮುದ್ರಕ್ಕೆ ಬಿದ್ದಿದ್ದು,…

ಕಳೆನಾಶಕ ಸೇವಿಸಿದರೂ 20 ದಿನ ಬದುಕಿದ!

ಹಳಿಯಾಳ: ಕಳೆನಾಶಕ ಸೇವಿಸಿದ್ದ ಪಾಂಡುರoಗ ಮಿರಾಶಿ ಅವರಿಗೆ ನಿರಂತರ ವೈದ್ಯಕೀಯ ಆರಯಕೆ ನಡೆದಿದ್ದು, 20 ದಿನದ ನಂತರ ಸಾವನಪ್ಪಿದ್ದಾರೆ. ಹಳಿಯಾಳ ಸಂಕನಕೊಪ್ಪದಲ್ಲಿ ಎಲೆಕ್ಟಿಶಿಯನ್ ಆಗಿದ್ದ ಪಾಂಡುರAಗ ಮಿರಾಶಿ (20) ಡಿಸೆಂಬರ್ 19ರಂದು ಕಳೆನಾಶಕ ಸೇವಿಸಿದ್ದರು. ಅವರನ್ನು ಮೊದಲು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ…

ಅಂಗನವಾಡಿ ಸುತ್ತ ಜನಸಾಮಾನ್ಯರ ಶ್ರಮದಾನ

ಕುಮಟಾ: ಮುಂಡಗೋಡದಲ್ಲಿ ಅಂಗನವಾಡಿಗೆ ತೆರಳಿದ ಬಾಲಕಿ ಸಾವನಪ್ಪಿದನ್ನು ನೆನಪಿಸಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜನತಾ ಪ್ಲಾಟ್ ಮಾಸೂರು ಕ್ರಾಸ್ ಅಂಗನವಾಡಿ ಸುತ್ತ ಶ್ರಮದಾನ ನಡೆಸಿದರು. ಗಿಡಗಂಟಿಗಳು ಬೆಳೆದ ಕಡೆ ಹಾವು ಬರುವುದು ಸಾಮಾನ್ಯವಾಗಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸುವಂತೆ ಅವರು…

ಹೊತ್ತಿ ಉರಿದ ಹುಲ್ಲಿನ ಲಾರಿ!

ಶಿರಸಿ: ಬಿಳಿ ಹುಲ್ಲು ತುಂಬಿಕೊoಡು ಸಂಚರಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿದೆ. ಲಾರಿ ಮೇಲಿದ್ದ ಹುಲ್ಲು ಹೊತ್ತಿ ಉರಿದಿದ್ದು, ಲಾರಿಗೆ ಅಗ್ನಿಸ್ಪರ್ಶವಾಗುವ ಮುನ್ನ ಬೆಂಕಿ ಆರಿಸುವ ಪ್ರಯತ್ನ ನಡೆಯಿತು. ಜೂ ಸರ್ಕಲ್ ಬಳಿ ಈ ಅಗ್ನಿ ಅವಘಡ ನಡೆದಿದೆ. ಪೋಲಿಸ್ ವಸತಿ ಗೃಹದ…

ಕಿಡಿ ಹಾರಿಸಿದ ವಿದ್ಯುತ್ ತಂತಿ: ಹುಲ್ಲಿನ ದಾಸ್ತಾನಿಗೆ ಬೆಂಕಿ!

ಹೊನ್ನಾವರ: ಚಂದ್ರಾಣಿ ಬಳಿಯ ಹನುಮಂತ ದೇವಸ್ಥಾನ ಎದುರಿನ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದೆ. ಅಲ್ಲಿ ದಾಸ್ತಾನು ಮಾಡಿದ್ದ ಒಣ ಹುಲ್ಲು ಕರಕಲಾಗಿದೆ. ರಾಮತೀರ್ಥದ ಸಮೀಪ ಹಾದು ಹೋದ ವಿದ್ಯುತ್ ಲೈನಿನ ಕಿಡಿ ಬೆಂಕಿಗೆ ಮೂಲ ಕಾರಣ. ಏಕಾಏಕಿ ಬೆಂಕಿ ಆವರಿಸಿದ್ದರಿಂದ ಜನ…

ವಿದ್ವಾಂಸನನ್ನು ಕಳೆದುಕೊಂಡ ಭರಣಿ!

ಯಲ್ಲಾಪುರ: ಹಿರಿಯ ವಿದ್ಯಾಂಸ, ಖ್ಯಾತ ಜ್ಯೋತಿಷಿ, ಅಪಾರ ಶಿಷ್ಯ ವರ್ಗವನ್ನು ಹೊಂದಿದ್ದ ಭರಣಿ ನಾಗೇಂದ್ರ ಭಟ್ಟ ಅವರು ಶುಕ್ರವಾರ ಸಂಜೆ ಈ ಲೋಕದ ಯಾತ್ರೆ ಮುಗಿಸಿದ್ದಾರೆ. 94 ವರ್ಷಗಳ ಕಾಲ ತಪ್ಪಸ್ವಿಯ ರೀತಿ ಜೀವನ ನಡೆಸಿದ ಅವರು ಕೆಲ ದಿನಗಳ ಹಿಂದೆ…

ಯಾವ ಹೋಂ ಸ್ಟೇ ಅಕ್ರಮ.. ಯಾವ ರೆಸಾರ್ಟ ಸಕ್ರಮ? ಜಿಲ್ಲಾಡಳಿತಕ್ಕೆ ಸಲ್ಲಿಕೆ ಆಗಲಿದೆ ಈ ವರದಿ!

ಕಾರವಾರ: `ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅನಧಿಕೃತ ಹೋಂ ಸ್ಟೇ ಕುರಿತು ವಾರದ ಒಳಗೆ ಸಮಗ್ರ ವರದಿ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷಿö್ಮÃಪ್ರಿಯಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳ ಕುರಿತ ಸಭೆಯಲ್ಲಿ…

ಹೊಡೆದಾಟದ ವೇದಿಕೆಯಾದ ಜಾತಿ ಮೀಟಿಂಗು!

ಕಾರವಾರ: ಕೋಡಿಬೀರ ದೇವಾಲಯದಲ್ಲಿ ಜಾತಿ ಸಭೆಗೆ ಹಾಜರಾಗಿದ್ದ ದಿಗಂಬರ ಹರಿಕಂತ್ರ ಅವರ ಮೇಲೆ ನಾಲ್ವರು ದಬ್ಬಾಳಿಕೆ ನಡೆಸಿದ್ದಾರೆ. ದೌರ್ಜನ್ಯಕ್ಕೆ ನಲುಗಿದ ದಿಗಂಬರ ಹರಿಕಂತ್ರ ಆಸ್ಪತ್ರೆ ಸೇರಿದ್ದಾರೆ. ಗುನಗಿವಾಡದ ಗಿಂಡಿ ದೇವಸ್ಥಾನದ ಬಳಿ ವಾಸವಾಗಿರುವ ದಿಗಂಬರ ಹರಿಕಂತ್ರ ಅವರಿಗೆ ಮೀನುಗಾರಿಕೆ ಮುಖ್ಯ ಕಸುಬು.…

You cannot copy content of this page