ಸ್ಕೂಟರಿಗೆ ಗುದ್ದಿದ ಬೈಕು: ವಿದ್ಯಾರ್ಥಿನಿ ಸೇರಿ ನಾಲ್ವರಿಗೆ ಪೆಟ್ಟು!
ಶಿರಸಿ: ಪ್ರಜ್ಞಾ ಹೆಗಡೆ ಹಾಗೂ ಅವರ ತಂದೆ ದತ್ತಾತ್ರೇಯ ಹೆಗಡೆ ಸಂಚರಿಸುತ್ತಿದ್ದ ಸ್ಕೂಟರಿಗೆ ಸೂರಜ್ ರೇವಣಕರ ತನ್ನ ಬೈಕು ಗುದ್ದಿದ್ದು, ಬೈಕಿನ ಹಿಂದೆ ಕೂತಿದ್ದ ಸುನೀಲ ಆಚಾರಿಯೂ ಸೇರಿ ನಾಲ್ವರು ಬಿದ್ದು ಗಾಯಗೊಂಡಿದ್ದಾರೆ. ಶಿರಸಿ ಸಾಲ್ಕಣಿ ತಟ್ಟಿಸರ ಕಟಕಿನಬೈಲ್’ನ ದತ್ತಾತ್ರೇಯ ಹೆಗಡೆ…
ಸರ್ಕಾರಿ ಕಟ್ಟಡ ಧ್ವಂಸ: ಕಿಡಿಗೇಡಿ ವಿರುದ್ಧ ಅಧಿಕಾರಿ ದೂರು!
ಭಟ್ಕಳ: ಮುರುಡೇಶ್ವರದ ವೆಂಕಟದಾಸ ಕಾಮತ್ ಅವರು ಗ್ರಾ ಪಂ ಕಟ್ಟಡ ಧ್ವಂಸ ಮಾಡಿದ ಬಗ್ಗೆ ಮಾವಳ್ಳಿ-2 ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಅಪರ್ಣ ನಾಯ್ಕ ಪೊಲಿಸ್ ದೂರು ನೀಡಿದ್ದಾರೆ. `ಮಾವಳ್ಳಿಯ ಸರ್ವೇ ನಂ 23ರಲ್ಲಿ ಗ್ರಾಮ ಪಂಚಾಯತ ಅಂಗಡಿಗಳಿದ್ದು, ಮಳಿಗೆ ಸಂಖ್ಯೆ…
ಅಮಾಯಕನನ್ನು ಥಳಿಸಿದ ದುಷ್ಟರ ಗುಂಪು!
ಕುಮಟಾ: ತಾರಿಮಕ್ಕಿಯಿಂದ ಬಾವಿಕೊಡ್ಲದ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ವಿರಾಜ ಕವರಿ ಅವರ ಮೇಲೆ 9 ಜನರ ಗುಂಪು ದಾಳಿ ನಡೆಸಿದೆ. ದಾಳಿ ನಡೆಸಿದವರು 18-25 ವರ್ಷದೊಳಗಿನವಾಗಿದ್ದು, ಹಿಂದಿಯಲ್ಲಿ ಬೈದ ಬಗ್ಗೆ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಕುಮಟಾ ತೊರ್ಕೆಯ ವಿರಾಜ…
ಮನೆಗೆ ನುಗ್ಗಿ ಹಲ್ಲೆ: 78ರ ಅಜ್ಜಿಗೆ ಕೊಲೆ ಬೆದರಿಕೆ!
ಕುಮಟಾ: 78 ವರ್ಷದ ಬಲಿಯಮ್ಮ ಮುಕ್ರಿ ಅವರ ಮನೆಗೆ ನುಗ್ಗಿದ ನಾಲ್ವರು ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ! ಕಳೆದ ಮಳೆಗಾಲದಲ್ಲಿ ಕುಮಟಾ ಹೆಗಡೆ ಮಚ್ಚಗೋಣದ ಬಲಿಯಮ್ಮ ಮುಕ್ರಿ ಅವರ ಮನೆ ಕಪೌಂಡ್ ಬಿದ್ದು ಹೋಗಿತ್ತು. ಬಲಿಯಮ್ಮ ಅವರ…
ಭೂಮಿ ಅಭಿವೃದ್ಧಿಗೆ ಅನಗತ್ಯ ಅಡ್ಡಿ: ಪೊಲೀಸ್ ದೂರು!
ದಾಂಡೇಲಿ: ಖರೀದಿಸಿದ ಭೂಮಿ ಅಭಿವೃದ್ಧಿಗೆ ತೊಡಗಿದ ಮೂವರಿಗೆ ಅನಗತ್ಯ ಅಡ್ಡಿ-ಆತಂಕ ಎದುರಾಗುತ್ತಿದೆ. ಇದೀಗ ದುಷ್ಕರ್ಮಿಗಳು ಅಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಒಡೆದು, ಕಪೌಂಡ್’ನ್ನು ಕಿತ್ತು ಹಾಕಿದ್ದಾರೆ. ದಾಂಡೇಲಿ ಅಲೈಡ್ ಏರಿಯಾದ ರಾಮದಾಸ ಗಣಪಾ ಮಿರಾಶಿ ಹಣಕಾಸಿನ ಅಡಚಣೆಯಿಂದ ತಮ್ಮ 9.94 ಗುಂಟೆ…
ಅಧಿಕಾರಿ-ಜನಪ್ರತಿನಿಧಿ ನಡುವೆ ಚೆಸ್ ಪಂದ್ಯಾವಳಿ: ಈ ಆಟದಲ್ಲಿ ಗೆದ್ದವರಾರು?
ಕಾರವಾರ: ಶಾಸಕ ಸತೀಶ್ ಸೈಲ್ ಹಾಗೂ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದು ನಡುವೆ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಈ ಪಂದ್ಯಾವಳಿಯಲ್ಲಿ ಯಾರೂ ಗೆಲ್ಲಲಿಲ್ಲ.. ಯಾರೂ ಸೋಲಲಿಲ್ಲ. ಅಸಲಿಗೆ ಅವರಿಬ್ಬರು ಚೆಸ್ ಆಟವನ್ನೇ ಆಡಲಿಲ್ಲ. ಬದಲಾಗಿ ಚೆಸ್ ಆಟ ಆಡಿದಂತೆ ನಟಿಸಿ…
ಅಕ್ರಮ ಮಣ್ಣು ಸಾಗಾಟ: ಅಧಿಕಾರಿಗಳಿಗೆ ನ್ಯಾಯ.. ಜನರಿಗೆ ಅನ್ಯಾಯ!
ಯಲ್ಲಾಪುರ: ರಸ್ತೆ ಅಂಚಿನ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯವರೇ ಅಕ್ರಮವಾಗಿ ಮಣ್ಣು ತೆಗೆದಿದ್ದಾರೆ. ಸೋಮವಾರ ಬೆಳಗ್ಗೆ ನಾಲ್ಕು ಟಿಪ್ಪರ್ ಹಾಗೂ ಎರಡು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ತೆಗೆಯಲಾಗಿದ್ದು, ಸಾರ್ವಜನಿಕರ ವಿರೋಧದ ಮೇರೆಗೆ ಮಧ್ಯಾಹ್ನ ಮಣ್ಣು ಅಗೆಯುವ ಕೆಲಸವನ್ನು ಸ್ಥಗಿತಗೊಳಿಸಲಾಯಿತು. ಯಲ್ಲಾಪುರ…
ಅರಣ್ಯವಾಸಿಗಳಿಗೆ ಕಾನೂನು ತರಬೇತಿ!
ಕುಮಟಾ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರೂ ಆಗಿರುವ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಅರಣ್ಯ ಅತಿಕ್ರಮಣದಾರರಿಗೆ `ಕಾನೂನು ಅರಿವು’ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಕುಮಟಾ ಮಾಸ್ತಿಕಟ್ಟಾದಲ್ಲಿ ಸೋಮವಾರ ಸಾವಿರಕ್ಕೂ ಅಧಿಕ ಅತಿಕ್ರಮಣದಾರರಿಗೆ ಅವರು ತರಬೇತಿ ನೀಡಿದರು. `ಅರಣ್ಯ ಅತಿಕ್ರಮಣದಾರರು ಕಾನೂನು…
ಮಕ್ಕಳ ಆಟಿಕೆ ಹೊತ್ತ ಲಾರಿ ಪಲ್ಟಿ: ಇಬ್ಬರ ಸಾವು.. ಮೂವರಿಗೆ ಗಾಯ!
ಹೊನ್ನಾವರ: ಮಕ್ಕಳ ಆಟಿಕೆ ಸಾಮಗ್ರಿ ಹೊತ್ತು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಪರಿಣಾಮ ಆ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೊತೆಗೆ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊನ್ನಾವರದ ಗೇರುಸೊಪ್ಪ ಬಳಿಯ ಸುಳಿಮುರ್ಖಿ ತಿರುವಿನಲ್ಲಿ ಭಾನುವಾರ ರಾತ್ರಿ ಲಾರಿ ಅಪಘಾತ ನಡೆದಿದೆ. ಕೇರಳದಿಂದ…
ಅತ್ತೆ ಕೊಂದ ಅಳಿಯನಿಗೆ ಏನು ಶಿಕ್ಷೆ?
ಮುಂಡಗೋಡ: ಅತ್ತೆ ಕೊಂದ ಅಳಿಯನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರೊಂದಿಗೆ 36 ಸಾವಿರ ರೂ ದಂಡ ಹಾಗೂ ಸಾವನಪ್ಪಿದವರ ಕುಟುಂಬಕ್ಕೆ 50 ಸಾವಿರ ರೂ ಪರಿಹಾರ ನೀಡುವಂತೆ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.…







