6
ಸರ್ಕಾರದ ಆದಾಯ ಹೆಚ್ಚಿಸಿದವರಿಗೆ ಸನ್ಮಾನ!

ಯಲ್ಲಾಪುರ: ತೆರಿಗೆ ವಸೂಲಾತಿ ಅಭಿಯಾನದಲ್ಲಿ ಶೇ 100ರ ಸಾಧನೆ ಮಾಡಿದ ಆನಗೋಡು ಗ್ರಾಮ ಪಂಚಾಯತ ಅಧಿಕಾರಿ-ಸಿಬ್ಬಂದಿಗೆ ಸರ್ಕಾರದ ಸನ್ಮಾನ ಸಿಕ್ಕಿದೆ. ಆನಗೋಡು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾರಾಯಣ ಗೌಡ ಹಾಗೂ ತೆರಿಗೆ ಸಂಗ್ರಹಕಾರ ಗಣಪತಿ ಮಳಿಕ್ ಈ ಗೌರವ ಸ್ವೀಕರಿಸಿದರು.…

ಇನ್ನೂ ನಿಲ್ಲದ ಮಟ್ಕಾ ಹಾವಳಿ!

ಕಾರವಾರ, ಹೊನ್ನಾವರ ಹಾಗೂ ದಾಂಡೇಲಿಯಲ್ಲಿ ಮಟ್ಕಾ ಆಡಿಸುತ್ತಿದ್ದವರ ಮೇಲೆ ಪೊಲೀಸರ ದಾಳಿ ನಡೆದಿದೆ. ಬೇರೆ ಬೇರೆ ಉದ್ಯೋಗವಿದ್ದರೂ ಹೆಚ್ಚಿನ ಹಣದ ಆಸೆಗೆ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕಾರವಾರ: ಮುದುಗಾದ ಮೇಲಿನಕೇರಿ ರಸ್ತೆಯಲ್ಲಿ ಅದೇ ಊರಿನ ಜಗದೀಶ…

SSLC ಸಾಧನೆ: 30 ವರ್ಷದ ನಂತರ ಸಿಕ್ಕಿತು ಸನ್ಮಾನ!

ಕಾರವಾರ: SSLC ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಸಾಧನೆ ಮಾಡಿದ್ದ ಶ್ರೀಕಲಾ ನಾಯಕ ಹಾಗೂ ಭಾಗೀರಥಿ ರಾಣೆ ಅವರು ಆ ವೇಳೆ ಮಾಡಿದ ಸಾಧನೆಗಾಗಿ 30 ವರ್ಷದ ನಂತರ ಸನ್ಮಾನ ಸ್ವೀಕರಿಸಿದರು! ಶ್ರೀಕಲಾ ನಾಯಕ ಗೋವಾದಲ್ಲಿ ವಾಸವಾಗಿದ್ದಾರೆ. ಅವರು ಪೋಂಡಾದ ಸ್ವಾಮಿ ವಿವೇಕಾನಂದ…

ಪತ್ರಕರ್ತರ ವಿರುದ್ಧ ಪೊಲೀಸ್ ಪ್ರಕರಣ: ಗೃಹ ಸಚಿವರಿಗೆ ಪತ್ರ ಬರೆದು ಖಂಡನೆ!

ಕುಮಟಾ: ಪತ್ರಕರ್ತರ ವಿರುದ್ಧ ಪ್ರಾಥಮಿಕ ತನಿಖೆ ನಡೆಸದೇ ಅನಗತ್ಯ ದೂರು ದಾಖಲಿಸಿರುವುದನ್ನು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಖಂಡಿಸಿದೆ. ಸತ್ಯಾಸತ್ಯತೆ ಪರಿಶೀಲಿಸಿ ಪೊಲೀಸ್ ಪ್ರಕರಣ ದಾಖಲಾಗುವ ಬಗ್ಗೆ ಸುತ್ತೋಲೆ ಹೊರಡಿಸುವಂತೆ ಗುರುವಾರ ಪೊಲೀಸ್ ಠಾಣೆಯ ಮೂಲಕ ಗೃಹ ಸಚಿವ ಜಿ ಪರಮೇಶ್ವರ…

ಸಮಸ್ಯೆ-ಸ್ಪಂದನೆ | ಡಿ 21ಕ್ಕೆ ಹೊನ್ನಾವರದಲ್ಲಿ ಅರಣ್ಯ ಹಕ್ಕು ಸಭೆ

ಹೊನ್ನಾವರ: ಡಿ 21ರಂದು ಹೊನ್ನಾವರದಲ್ಲಿ ಅರಣ್ಯವಾಸಿಗಳ ಸಮಸ್ಯೆ – ಸ್ಪಂದನೆ ಸಭೆ ನಡೆಯಲಿದೆ. ಜಿಲ್ಲಾ ಮಟ್ಟದ ಸಭೆ ಇದಾಗಿದ್ದು, ಅರಣ್ಯ ಅಧಿಕಾರಿಗಳಿಂದ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ಚರ್ಚೆ-ಪರಿಹಾರ ಕುರಿತು ಸಂವಾದ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ…

ಜನಸಾಮಾನ್ಯರ ದೂರಿಗೆ ತ್ವರಿತ ಸ್ಪಂದನೆ: ನುಡಿದಂತೆ ನಡೆದ ಗ್ರಾ ಪಂ ಅಧ್ಯಕ್ಷೆ!

ಯಲ್ಲಾಪುರ: ಕಳೆದ ಮೂರು ದಿನಗಳಿಂದ ಶಿರಸಿ – ಯಲ್ಲಾಪುರ ರಸ್ತೆಯಲ್ಲಿ ಗುಂಪು ಗುಂಪಾಗಿ ಸಾವನಪ್ಪಿದ್ದ ನಾಯಿಗಳನ್ನು ಕಂಪ್ಲಿ ಗ್ರಾ ಪಂ ಅಧ್ಯಕ್ಷೆ ರೇಣುಕಾ ಭೋವಿವಡ್ಡರ ಮಣ್ಣು ಮಾಡಿಸಿದ್ದಾರೆ. ಗುರುವಾರ ಬೆಳಗ್ಗೆ ಎದ್ದ ತಕ್ಷಣ ಅವರು ಜೆಸಿಬಿ ಜೊತೆ ಸ್ಥಳಕ್ಕೆ ತೆರಳಿ ಗ್ರಾಮದ…

ಗೌಡರ ನಡುವೆ ಜಟಾಪಟಿ: ಅನ್ಯರ ಪಾಲಾದ ಆಡುಕುಳದ ಅಡಿಕೆ!

ಹೊನ್ನಾವರ: ಆಡುಕುಳದ ಕಿರಣ ಗೌಡ ಅವರು ದಾಸ್ತಾನು ಮಾಡಿದ್ದ 2 ಲಕ್ಷ ರೂ ಮೌಲ್ಯದ ಅಡಿಕೆ ಕಳ್ಳತನವಾಗಿದೆ. ಪಕ್ಕದ ಮನೆಯ ಪ್ರಕಾಶ ಗೌಡ ಈ ಕಳ್ಳತನ ನಡೆಸಿರುವುದು ಗೊತ್ತಾಗಿದೆ. ಕಿರಣ ಗೌಡ ಅವರು ತಮ್ಮ ತೋಟದಲ್ಲಿದ್ದ ಅಡಿಕೆ ಕೊಯ್ದು ಮನೆಯಲ್ಲಿ ದಾಸ್ತಾನು…

ರಿಂಗ್ ರೋಡ್ ರವಿಯ ಜೂಜಾಟಕ್ಕೆ ತಡೆ

ಶಿರಸಿ: ಎಪಿಎಂಸಿಯ ರಿಂಗ್ ರೋಡ್ ಬಳಿ ಮಟ್ಕಾ ಆಡಿಸುತ್ತಿದ್ದ ರವಿ ಬೋವಿವಡ್ಡರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಗಣೇಶನಗರದ ಮಾರುತಿ ದೇವಸ್ಥಾನ ಬಳಿ ವಾಸಿಸುವ ರವಿ ಬೋವಿವಡ್ಡರ್ ಗೌಂಡಿ ಕೆಲಸ ಮಾಡುತ್ತಿದ್ದರು. ಅಲ್ಲಿ ದುಡಿಮೆ ಕಡಿಮೆ ಎಂದು ಮಟ್ಕಾ ಆಡಿಸುವುದನ್ನು ಕಲಿತಿದ್ದರು.…

ಒಂದೆರಡಲ್ಲ.. ಆರು ಬಗೆಯ ನಿಯಮ ಉಲ್ಲಂಘಿಸಿದ ಬೈಕ್ ಸವಾರನಿಗೆ ದಂಡದ ಬಿಸಿ!

ಭಟ್ಕಳ: ಆರು ಬಗೆಯ ಸಂಚಾರಿ ನಿಯಮ ಉಲ್ಲಂಘಿಸಿ ಬೈಕ್ ಓಡಿಸಿದ ಯುವಕನಿಗೆ ನ್ಯಾಯಾಲಯ 25 ಸಾವಿರ ರೂ ದಂಡ ವಿಧಿಸಿದೆ. ಕಂಠಪೂರ್ತಿ ಕುಡಿದಿದ್ದ ಸಂತೋಷ (ಹೆಸರು ಬದಲಿಸಿದೆ) ಎಂಬಾತ ಚಾಲನಾ ಪರವಾನಿಗೆ ಪತ್ರ, ಹೊಗೆ ಪ್ರಮಾಣ ಪತ್ರ, ವಿಮೆ, ವಾಹನ ನೊಂದಣಿ…

ವಿಷ ಪ್ರಾಶನದ ಅನುಮಾನ | ನೂರಾರು ನಾಯಿಗಳ ಮಾರಣಹೋಮ!

ಯಲ್ಲಾಪುರ: ಕಳೆದ ಒಂದು ವಾರಗಳಿಂದ ಶಿರಸಿ – ಯಲ್ಲಾಪುರ ರಸ್ತೆ ಮಾರ್ಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೇರೆ ಊರಿನ ನಾಯಿಗಳನ್ನು ನಿರಂತರವಾಗಿ ಇಲ್ಲಿ ತಂದು ಬಿಡಲಾಗುತ್ತಿದ್ದು, ಅಲ್ಲಲ್ಲಿ ಗುಂಪು ಗುಂಪಾಗಿ ನಾಯಿಗಳು ಸಾವನಪ್ಪುತ್ತಿವೆ. ಒಂದೇ ಕಡೆ 30-40 ನಾಯಿಗಳ ಶವ ಬಿದ್ದಿರುವುದರಿಂದ…

You cannot copy content of this page