ಮನೆ ಬೀಗ ಮುರಿದ ಕಳ್ಳರು: ಹಣವೂ ಹೊಯ್ತು.. ಚಿನ್ನವೂ ಹೊಯ್ತು..!
ಶಿರಸಿ: ಬನವಾಸಿ ಬಳಿಯ ಮುಖವಳ್ಳಿ ಆದರ್ಶ ಕಾಳೆನವರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು 10 ಸಾವಿರ ರೂ ಹಣದ ಜೊತೆ 1.24 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗೊದ್ರೆಜ್ ಕಪಾಟನಲ್ಲಿದ್ದ…
ಎರಡು ಕಡೆ ಕೆಲಸ.. ಸಾಲಗಾರರ ಕಾಟ.. ಬಾಕಿ ಪಾವತಿಸದೇ ಸಾವಿಗೆ ಶರಣಾದ ಸಂದೀಪ!
ಭಟ್ಕಳ: ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಅಲ್ ಮನಲ್ ಲಾಡ್ಜಿನಲ್ಲಿ ಕೆಲಸ ಮಾಡುವ ಸಂದೀಪ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಬಳೆ ಹೊನ್ನೆಗದ್ದೆಯ ಸಂದೀಪ ತಿಮ್ಮಯ್ಯ ನಾಯ್ಕ ಶಂಸುದ್ದಿನ್ ಸರ್ಕಲ್ ಬಳಿಯ ಅಲ್ ಮನಲ್ ಲಾಡ್ಜಿನಲ್ಲಿ ರಾತ್ರಿ ವೇಳೆ ಕೆಲಸ ಮಾಡುತ್ತಿದ್ದರು.…
ವಿದ್ಯಾರ್ಥಿನಿಯ ಸ್ಕೂಟಿ ಕಳ್ಳರ ಪಾಲು
ಯಲ್ಲಾಪುರ: ಸವಣಗೇರಿಯ ಸೌಮ್ಯಾ ಕರಾಡೆಕರ್ ಅವರ ಸ್ಕೂಟಿ ಕಳ್ಳತನವಾಗಿದೆ. ಕಾಲೇಜು ವಿದ್ಯಾರ್ಥಿನಿಯಾಗಿರುವ ಸೌಮ್ಯ ಶಂಕರ್ ಕರಾಡೆಕರ್ (25) ಅವರು ಇಸ್ಲಾಂ ಗಲ್ಲಿಯಲ್ಲಿ ವಾಸವಾಗಿದ್ದಾರೆ. ನ 26ರ ರಾತ್ರಿ 10 ಗಂಟೆಗೆ ಅವರ ಮನೆ ಮುಂದೆ ಸ್ಕೂಟಿ ನಿಲ್ಲಿಸಿದ್ದರು. ಬೆಳಗ್ಗೆ ನೋಡಿದಾಗ ಅಲ್ಲಿ…
ಬಿಪಿ ಶುಗರ್’ಗೆ ಬೆದರಿ ಕ್ರಿಮಿನಾಶಕ ಸೇವಿಸಿದ!
ಭಟ್ಕಳ: ಬಿಪಿ, ಶುಗರ್ ಹೆಚ್ಚಳದಿಂದ ಬಳಲುತ್ತಿದ್ದ ಶ್ರೀಧರ ನಾಯ್ಕ ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದಾರೆ. ಭಟ್ಕಳ ಬೆಳಕೆ ಕಂಚಿಕೇರಿಯ ಶ್ರೀಧರ ಮಾಸ್ತಯ್ಯ ನಾಯ್ಕ (53) ಅವರಿಗೆ ಬಿಪಿ ಹಾಗೂ ಶುಗರ್ ಅಂಶ ಹೆಚ್ಚಳವಾಗಿತ್ತು. ಇದರಿಂದ ಮಾನಸಿಕವಾಗಿ ಅವರು ಕುಗ್ಗಿದ್ದರು. ನ 22ರಂದು ಮಲ್ಲಿಗೆ…
ಹಣಕಾಸಿನ ವಿಷಯ: ಬಾಡಿಗೆದಾರರ ದಾಂಧಲೆ!
ಭಟ್ಕಳ: ಮನೆ ಬಾಡಿಗೆ ನೀಡುವ ವಿಷಯದಲ್ಲಿ ಮಾತಿಗೆ ಮಾತು ಬೆಳೆದಿದ್ದು ಎರಡು ಬಣದವರ ನಡುವೆ ಹೊಡೆದಾಟ ನಡೆದಿದೆ. ಮುಟ್ಟಳ್ಳಿಯ ರೈಲ್ವೆ ಆರ್ ಪಿ ಎಫ್ ಕಚೇರಿ ಬಳಿ ವಾಸವಾಗಿರುವ ಈಶ್ರತ್ ಜಹಾನ್ ಎಂಬ ಮಹಿಳೆ ಮುಗಳಿಹೊಂಡದ ರಿಜ್ವಾನ್ ಅಬ್ದುಲ್ ರಿಷಾದ್ ಅವರಲ್ಲಿನ…
ಗುಡ್ಡದ ಮೇಲೆ ರೆಸಾರ್ಟ ಮಾಡಿ.. ಬೆಟ್ಟ ಕೊರೆದರಯ್ಯ!
ಕುಮಟಾ: ಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ ಅವೈಜ್ಞಾನಿಕ ಮಣ್ಣು ಕೊರೆತ. ಅದಾಗಿಯೂ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇನ್ನಷ್ಟು ಗುಡ್ಡ ಕೊರೆಯುವ ಕೆಲಸ ನಡೆದಿದೆ. ಇದರಿಂದ ಮುಂದಿನ ಮಳೆಗಾಲದಲ್ಲಿ ಇಲ್ಲಿನ ಧರೆಯೂ ಕುಸಿಯುವ ಆತಂಕ ವ್ಯಕ್ತವಾಗಿದೆ. ಉಮಾಮಹೇಶ್ವರ ಮಂದಿರಕ್ಕೆ ತೆರಳುವ ರಸ್ತೆ…
KSRTC | ಬಸ್ಸು ಚಾಲಕನ ವಿರುದ್ಧ ದೂರು ನೀಡಿದ ನಿರ್ವಾಹಕ!
ಕಾರವಾರ: ಅಡ್ಡಾದಿಡ್ಡಿ ಬಸ್ಸು ಓಡಿಸಿದ ಕೆಎಸ್ಆರ್ಟಿಸಿ ಚಾಲಕನ ವಿರುದ್ಧ ಅದೇ ಬಸ್ಸಿನ ನಿರ್ವಾಹಕ ಪೊಲೀಸ್ ದೂರು ನೀಡಿದ್ದಾರೆ. ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ. ಕಾರವಾರದಿಂದ ಮಲ್ಲಾಪುರ ಮಾರ್ಗವಾಗಿ ಸಂಚರಿಸುವ ಬಸ್ಸಿನ ಚಾಲಕ ಗುರನಗೌಡ ಪಾಟೀಲ ವಿರುದ್ಧ ನಿವಾಹಕ ಶಿವಾನಂದ…
ಹೊಂಡಮಯ ರಸ್ತೆ: ಬೈಕಿನಿಂದ ಬಿದ್ದ ಬ್ಯಾಂಕ್ ಸಿಬ್ಬಂದಿ
ಶಿರಸಿ: ಶುಕ್ರವಾರ ಸಂಜೆ ಮಳಲಗಾಂವಿನ ಬಳಿ ಬೈಕ್ ಅಪಘಾತ ನಡೆದಿದೆ. ಕೆಡಿಸಿಸಿ ಬ್ಯಾಂಕಿನ ಸಿಬ್ಬಂದಿ ಸಂತೋಷ ಬನ್ನಿಹಳ್ಳಿ ಈ ಮಾರ್ಗದಲ್ಲಿ ಬೈಕ್ ಓಡಿಸುತ್ತಿದ್ದರು. ರಸ್ತೆ ಮೇಲಿನ ಹೊಂಡ ತಪ್ಪಿಸುವ ಬರದಲ್ಲಿ ಬೈಕು ಅವರ ನಿಯಂತ್ರಣ ತಪ್ಪಿತು. ಪರಿಣಾಮ ಅವರು ನೆಲಕ್ಕೆ ಬಿದ್ದು…
ಅಡ್ಡಾದಿಡ್ಡಿ ಚಾಲನೆ: VRL ಲಾರಿ ಪಲ್ಟಿ
ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಚಲಿಸಿದ ವಿಆರ್ಎಲ್ ಲಾರಿ ಅಂಕೋಲಾದ ನವಗದ್ದೆಯ ಬಳಿ ಪಲ್ಟಿಯಾಗಿದೆ. ನ 26ರಂದು ಗದಗದ ಸತೀಶಕುಮಾರ ಕರಹಟ್ಟಿ ಎಂಬಾತರು ಈ ಲಾರಿ ಓಡಿಸುತ್ತಿದ್ದರು. ರಾತ್ರಿ ವೇಳೆ ಅತಿ ವೇಗದ ಚಾಲನೆ ಮಾಡಿದ ಅವರು ಲಾರಿಯನ್ನು ಗಟಾರಕ್ಕೆ ಇಳಿಸಿದರು.…
ಹಂದಿ ಹಿಡಿಯಲು ಹೋಗಿ ಹೊಡೆತ ತಿಂದ ಅಧಿಕಾರಿ!
ಹಳಿಯಾಳ: ನಗರದಲ್ಲಿ ಬೀಡಾಡಿ ಹಂದಿಗಳು ಹೆಚ್ಚಾಗಿರುವ ಹಿನ್ನಲೆ ಪುರಸಭೆಯಿಂದ ಅವನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಹಂದಿ ಹಿಡಿಯುವ ಕಾರ್ಯಾಚರಣೆಗೆ ಕೆಲವರು ಅಡ್ಡಿಪಡಿಸಿದ್ದಾರೆ. ಬಿಡಾಡಿ ಹಂದಿಗಳ ನಿಗ್ರಹಕ್ಕಾಗಿ ಅಕ್ಟೊಬರ್ 20ರಂದು ಪುರಸಭೆ ವಿಶೇಷ ಸಭೆ ಆಯೋಜಿಸಿದ್ದು, ಹಂದಿ ಮಾಲಕರಿಗೆ 48 ದಿನಗಳ…







