ಬಡ ಹೋರಾಟಗಾರಿನಿಗೆ ಸಿಗಲ್ಲ ಚುನಾವಣಾ ಟಿಕೆಟು!
ಶಿರಸಿ: ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ ಚುನಾವಣಾ ಟಿಕೆಟ್ ಕೊಡಬೇಕು ಎಂದು ಅನೇಕರು ರಾಜಕೀಯ ವರಿಷ್ಠರಿಗೆ ಆಗ್ರಹಿಸಿದ್ದರು. ಆದರೆ, `ರವೀಂದ್ರ ನಾಯ್ಕರ ಬಳಿ ದುಡ್ಡಿಲ್ಲ’ ಎಂದು ನಾಯಕರು ಹೇಳಿದ್ದರು. ಇದೇ ಕಾರಣದಿಂದ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ! ಈ ವಿಷಯ…
ಬೇಡ್ತಿ ದಾರಿಯಲ್ಲಿ ನಿಯಂತ್ರಣ ತಪ್ಪಿದ ಬಸ್ಸು: ಕಾರು ಜಖಂ
ಯಲ್ಲಾಪುರ: ಶಿರಸಿ – ಯಲ್ಲಾಪುರ ರಸ್ತೆಯ ಬೇಡ್ತಿ ತಿರುವಿನಲ್ಲಿ ಕಾರು ಹಾಗೂ ಬಸ್ಸಿನ ನಡುವೆ ಅಪಘಾತವಾಗಿದೆ. ಗುರುವಾರ ಬೆಳಗ್ಗೆ ಶಿರಸಿ ಮಾರ್ಗವಾಗಿ ತೆರಳುತ್ತಿದ್ದ ಕಾರಿಗೆ ಬಸ್ಸು ಗುದ್ದಿದೆ. ನಂತರ ಆ ಬಸ್ಸು ಅಲ್ಲಿನ ದರೆಗೆ ಡಿಕ್ಕಿಯಾಗಿದೆ. ಈ ಅಪಘಾತದಿಂದ ಕಾರಿನ ಮುಂಭಾಗ…
ನಿಯಮಗಳಿಗೆ ಇಲ್ಲ ಮೂರು ಕಾಸಿನ ಬೆಲೆ | ಆಸ್ಪತ್ರೆ ಆವರಣದಲ್ಲಿ ಡಿಜೆ ಸದ್ದು: ರೋಗಿಗಳ ಎದೆಯಲ್ಲಿ ಡವಡವ!
ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಿಸುವಂತೆ ಜಿಲ್ಲಾಡಳಿತ ಸೂಚಿಸಿದರೂ ಅದನ್ನು ಉಲ್ಲಂಘಿಸಿ ಕಾರವಾರದ ಕಿಮ್ಸ್ ಆವಾರದಲ್ಲಿ ರಾಸಾಯನಿಕ ಬಣ್ಣ ಬಳಸಿ ಹಬ್ಬ ಆಚರಿಸಿದರು. ದೊಡ್ಡ ಸದ್ದಿನ ಪಟಾಕಿ, ಡಿಜೆ ಬಳಸಿದ ವೈದ್ಯ ವಿದ್ಯಾರ್ಥಿಗಳು ಗಣೇಶ ಉತ್ಸವದ ಹೆಸರಿನಲ್ಲಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ತೊಂದರೆ…
ವಿರೋಧ ಪಕ್ಷದವರನ್ನು ಹೊಗಳಿದ ಬಿಜೆಪಿ ನಾಯಕ!
ಯಲ್ಲಾಪುರ: ಶಿರೂರು ಗುಡ್ಡ ಕುಸಿತ ಪರಿಣಾಮ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರ ಇಬ್ಬರು ಮಕ್ಕಳಿಗೆ ಉದ್ಯೋಗ ಕೊಡಿಸಲು ಕಾರಣರಾದ ವಿರೋಧ ಪಕ್ಷದ ನಾಯಕರ ನಡೆಗೆ ಬಿಜೆಪಿ ಮುಖಂಡ ರಾಮು ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ಸಿನಿoದ ಆಯ್ಕೆಯಾದ ಕಾರವಾರ ಶಾಸಕ ಸತೀಶ್ ಸೈಲ್,…
ಗಣೇಶ ವಿಸರ್ಜನೆ : ಮದ್ಯದ ಅಂಗಡಿಗೆ ಬೀಗ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1375 ಗಣೇಶ ವಿಗ್ರಹಗಳನ್ನು ಸ್ಥಾಪಿಸಲಾಗಿದ್ದು, ವಿವಿಧ ದಿನ ಅವುಗಳ ವಿಸರ್ಜನೆ ನಡೆಯಲಿದೆ. ಸಾವಿರಾರು ಜನರ ಸಮ್ಮುಖದಲ್ಲಿ ಗಣಪತಿ ವಿಗ್ರಹದ ಮೆರವಣಿಗೆ ಹಾಗೂ ವಿಸರ್ಜನೆ ನಡೆಯಲಿದ್ದು, ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯದ ಅಂಗಡಿಗಳನ್ನು…
ಮುಂದುವರೆದ ಮಟ್ಕಾ ದಾಳಿ: ಹಣ ಕೊಡಲು ಒಪ್ಪದ ಜೂಜುಕೋರರು!
ಮುಂಡಗೋಡ: ಕಾತೂರು ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಮೂವರ ಮೇಲೆ ದಾಳಿ ನಡೆಸಿದ ಪೊಲೀಸರು ಅವರ ಬಳಿಯಿದ್ದ ಹಣವನ್ನು ವಶಕ್ಕೆ ಪಡೆಯಲು ಹರಸಾಹಸ ನಡೆಸಿದರು. ಕೊನೆವರೆಗೂ ಜನರಿಂದ ಸಂಗ್ರಹಿಸಿದ ಹಣವನ್ನು ಕೊಡಲು ಓಸಿ ಆಡಿಸುವವರು ಒಪ್ಪಲಿಲ್ಲ. ಮೊದಲು ಚೀಟಿ ಹಾಗೂ…
ಆಚಾರಿಗೆ ಗುದ್ದಿದ ಮೀನು ಲಾರಿ
ಕುಮಟಾ: ಅಂಕೋಲಾ ಅವರ್ಸಾ ಸಕಲಬೇಣದ ಶ್ಯಾಮು ಕೃಷ್ಣ ಆಚಾರಿ ಎಂಬಾತರಿಗೆ ಮೀನು ಲಾರಿ ಗುದ್ದಿದೆ. ಸೆ 9ರಂದು ಸಂಜೆ ಅವರು ಅಂಕೋಲಾದಿoದ ಕುಮಟಾ ಕಡೆ ಬೈಕ್ ಮೇಲೆ ಹೋಗುತ್ತಿದ್ದರು. ಬರ್ಗಿ ರಸ್ತೆಯ ಘಟ್ಟದಲ್ಲಿ ಕುಮಟಾ ಕಡೆಯಿಂದ ಜೋರಾಗಿ ಲಾರಿ ಓಡಿಸಿಕೊಂಡು ಬಂದ…
ಸಮಾಜ ಸೇವಕನ ಆಸ್ತಿ ಮೇಲೆ ಕಳ್ಳರ ಕಣ್ಣು: ನೀವು ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸುತ್ತೀರಾ?
ಹಳಿಯಾಳ: ದಲಾಯಿತ ಗಲ್ಲಿಯ ಸಮಜ ಸೇವಕ ಖುರ್ಷಿದ್ ಅಹ್ಮದ್ ಮುಲ್ಲಾ ಅವರ ಬೈಕ್ ಕಳ್ಳರ ಪಾಲಾಗಿದೆ. ಸೆ 4ರಂದು 70 ಸಾವಿರ ರೂ ಮೌಲ್ಯದ ಬೈಕನ್ನು ಅವರು ಬಸ್ ನಿಲ್ದಾಣದಲ್ಲಿ ಬಿಟ್ಟಿದ್ದರು. ಅಲ್ಲಿಂದ ಮುಂದೆ ಬಸ್ಸು ಏರಿ ಧಾರವಾಡಕ್ಕೆ ಹೋಗಿದ್ದರು.…
ಈ ಕಳ್ಳರಿಗೆ ಅಂಚೆ ಕಚೇರಿಯಲ್ಲಿ ಏನು ಕೆಲಸ?
ಸಿದ್ದಾಪುರ: ಶೆಲೂರು ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಅಂಚೆ ಕಚೇರಿಯ ಮೊಹರು ಹಾಗೂ ಮೊಳೆ ಪೆಟ್ಟಿಗೆಯನ್ನು ದೋಚಿ ಪರಾರಿಯಾಗಿದ್ದಾರೆ. ಸೆ 10ರಂದು ಅಂಚೆ ಕಚೇರಿ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳರು ಅಲ್ಲಿನ ಎಲ್ಲಾ…
ಮೀನು ಹಿಡಿಯಲು ಹೋದವ ಶವವಾದ
ಕಾರವಾರ: ಪಾತಿದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ಉಮೇಶ ಈಶ್ವರ ಹರಿಕಂತ್ರ (35) ಎದೆನೋವಿನಿಂದ ಸಾವನಪ್ಪಿದ್ದಾರೆ. ಕುಮಟಾ ಧಾರೇಶ್ವರದ ಉಮೇಶ ಹರಿಕಂತ್ರ ಕಳೆದ 9 ತಿಂಗಳಿನಿoದ ಮೀನುಗಾರಿಕೆಗೆ ತೆರಳಿರಲಿಲ್ಲ. ಆಗಾಗ ಮಾತ್ರ ಬೇರೆಯವರ ಜೊತೆ ಸಹಾಯಕರಾಗಿ ಅವರು ಹೋಗುತ್ತಿದ್ದರು. ಕಾರವಾರದ ಬಾವ ರಾಜು…







